ವೈದ್ಯರ ದಿನಾಚರಣೆ: ಕೊರೊನಾ ವಾರಿಯರ್ಸ್ ಗೆ ಸನ್ಮಾನ
Team Udayavani, Jul 6, 2021, 6:51 PM IST
ಆಳಂದ: ವಿವಿಧ ಕಾಯಿಲೆಗಳಿಂದ ನರಳುತ್ತಿರುವರಿಗೆ ಉಪಚಾರ ನೀಡಿ ಗುಣಮುಖರಾಗಿಸುವ ವೈದ್ಯರೇ ನಿಜವಾದ ದೇವರು. ಅವರನ್ನು ಸಮಾಜ ಗೌರವದಿಂದ ಕಾಣುವಂತಾಗಬೇಕು ಎಂದು ಕಲಬುರಗಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶಿವಾನಂದ ಸಾಲಿಮಠ ಹೇಳಿದರು.
ಪಟ್ಟಣದ ನಗರೇಶ್ವರರಾಮ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ ಹಾಗೂ ಶಾಂಭವಿ ಮಹಿಳಾ ಮಂಡಳ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ, ಕೊರೊನಾ ವಾರಿಯರ್ಸ್‌ಗೆ ಸನ್ಮಾನ, 10 ದಿನಗಳ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಆರೋಗ್ಯಕ್ಕೆ ಯೋಗಾಸನ ಅಭ್ಯಾಸ ಮಾಡಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಭಯ ಭೀತರಾಗದೆ ಸೋಂಕಿತ ಮತ್ತು ಶಂಕಿತರಿಗೂ ಚಿಕಿತ್ಸೆ ನೀಡುವ ಮೂಲಕ ಜೀವದ ಹಂಗು ತೊರೆದು ಸೇವೆ ಮಾಡಿದ್ದು, ಜನರು ಮರೆಯದಂತಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಆರೋಗ್ಯ ಶಿಕ್ಷಣಾಧಿ ಕಾರಿ ವಿಜಯಲಕ್ಷ್ಮೀ ನಂದಿಕೋಲಮಠ, ಖಾಸಗಿ ವೈದ್ಯ ಡಾ.ಪಿ.ಎನ್.ಶಾಹ, ಡಾ| ಅಭಿನಂದನ ಬೇಡಗೆ, ಡಾ| ಯೋಗೇಶ ಬಂಡಗಾರ, ಶಾಂಭವಿ ಮಹಿಳಾ ಮಂಡಳ ಅಧ್ಯಕ್ಷೆ ಅಸ್ಮಿತಾ ಚಿಟಗುಪ್ಪಕರ್, ಪವನಕುಮಾರ ಕುಲಕರ್ಣಿ, ಕಜಾಪ ಅಧ್ಯಕ್ಷ ಅಪ್ಪಾಸಾಹೇಬ ತೀಥೆì, ಯೋಗ ಉಪನ್ಯಾಸಕ ದತ್ತಾತ್ರೇಯ ಬಿರಾದಾರ ಮಾತನಾಡಿದರು.
ಪ್ರಮುಖರಾದ ರುಕ್ಮಿಣಿ ಸಂಗಾ, ಚಂದ್ರಕಲಾ ಬಂಡೆ, ಮೇಘನಾ ಕೋಥಳಿಕರ, ಬಲಭೀಮ ಕುಲಕರ್ಣಿ, ರಾಜಶೇಖರ ಹರಿಹರ, ವಿಜಯಕುಮಾರ ಕೋಥಳಿಕರ, ದಿಗಂಬರಾವ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ರತ್ನಾಕರ ಗುರುಜರ, ಅವಧೂತ ಕುಲಕರ್ಣಿ, ಮಂಜುನಾಥ ಕಂದಗೂಳೆ, ಮೋಹನರಾವ ಕುಲಕರ್ಣಿ, ಗೋವರ್ಧನ ಚಿಟ್ಟಗೂಪಕರ, ಅಶೋಕ ಪಾಟೀಲ್, ವಿನಾಯಕ ದೀಕ್ಷಿತ, ಪದ್ಮಾ ಜೋಶಿ, ವಸುಧಾ ಕುಲಕರ್ಣಿ, ಭಾಗ್ಯಶ್ರೀ ಚಿಟ್ಟಗೂಪಕರ, ವೀಣಾ ಪೋತ್ನಿಸ್, ರಾಧಾ ದೇಶಪಾಂಡೆ, ಸುಜಾತಾ ಕುಲಕರ್ಣಿ, ಗೀತಾ ಮುಜಮದಾರ ಇತರರು ಇದ್ದರು. ವೈದ್ಯರಾದ ಡಾ| ಪೃಥ್ವಿರಾಜ ಚವ್ಹಾಣ, ರಾಜಶೇಖರ ಹರಿಹರ, ಡಾ| ಮೋಹನ ಜಿಡ್ಡಿಮನಿ, ರಾಮ ಪವಾರ, ಶಂಕರ ಸುರವಸೆ, ಡಾ| ಎಂ.ಎಸ್.ಅಡವಾನಿ, ಡಾ| ಸಂತೋಷ ಶಾಹ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.