ರಕ್ತದಾನ ಮಾಡಿ ಜೀವ ಉಳಿಸಿ
Team Udayavani, Dec 9, 2018, 12:20 PM IST
ಬೆಂಗಳೂರು: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೂಂದು ಜೀವ ಉಳಿಸಲು ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ತಿಳಿಸಿದರು. ರಾಮಯ್ಯ ತಾಂತ್ರಿಕ ವಿದ್ಯಾಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯಡಿ ಎಂ.ಎಸ್.ರಾಮಯ್ಯ ಸ್ಮರಣಾರ್ಥ ಆಯೋಜಿಸಿದ್ದ 21ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತಾದನ ಶಿಬಿರಗಳು ಹೆಚ್ಚಾಗಿ ನಡೆದರೆ, ಆಪತ್ತಿನಲ್ಲಿ ಇರುವವರಿಗೆ ಅವಶ್ಯವಿರುವ ರಕ್ತ ಸಂಗ್ರಹವಾಗಲಿದೆ. ಹೆಚ್ಚು ರಕ್ತನಿಧಿ ಬ್ಯಾಂಕ್‌ಗಳು ಆರಂಭವಾದರೆ, ಸುಲಭವಾಗಿ ರಕ್ತ ಸಿಗಲಿದೆ. ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರಿಂದ ರಕ್ತದಾನ ಶಿಬಿರದ ಮಾದರಿಯಲ್ಲೇ ಉದ್ಯೋಗ ಮೇಳ ಆಯೋಜನೆ ಮಾಡಬೇಕು. ಅಲ್ಲದೆ, ಕೌಶಲ್ಯ ಶಿಕ್ಷಣದ ಅವಶ್ಯಕತೆ ಇರುವುದರಿಂದ ಕಂಪ್ಯೂಟರ್, ಟೈಲರಿಂಗ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳ ತರಬೇತಿ ನೀಡುವಂತಾಗಬೇಕು ಎಂದರು.
ಚಲನಚಿತ್ರ ಚಿತ್ರ ನಿರ್ದೇಶಕ ಪವನ್ ಒಡೆಯಾರ್, ಎನ್‌ಎಸ್‌ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರ್, ರಾಮಯ್ಯ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಎನ್.ಆರ್. ನಾಯ್ಡು ಇದ್ದರು. ರಕ್ತದಾನ ಶಿಬಿರಕ್ಕೆ ರಾಮಯ್ಯ ಸ್ಮಾರಕ ಆಸ್ಪತ್ರೆಯ ರಕ್ತನಿಧಿ, ಲಯನ್ಸ್ ರಕ್ತನಿಧಿ,
ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ಕೆ.ಸಿ. ಜನರಲ್ ರಕ್ತನಿಧಿ, ಹೆಚ್.ಎಸ್.ಐ ಗೊಸಾಯಿ ಆಸ್ಪತ್ರೆ ರಕ್ತನಿಧಿ, ನಾರಾಯಣ ರಕ್ತನಿಧಿ, ಬೆಂಗಳೂರು ರಕ್ತನಿಧಿ, ನಿಮ್ಹಾನ್ಸ್ ರಕ್ತನಿಧಿ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆ ರಕ್ತನಿಧಿ, ಕೆಂಪೇಗೌಡ ಸೇವೆಗಳು, ರೋಟರಿ ಟಿಟಿಕೆ ರಕ್ತನಿಧಿ, ವಿಕ್ಟೋರಿಯಾ ಆಸ್ಪತ್ರೆ ರಕ್ತನಿಧಿ, ರಾಷ್ಟ್ರೋತ್ಥಾನ ರಕ್ತನಿಧಿ ಘಟಕಗಳು ಭಾಗವಸಿದ್ದು, ಶಿಬಿರದಲ್ಲಿ 1247 ಯೂನಿಟ್ ರಕ್ತ ಸಂಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.