ಜಲ್ಲಿಕಲ್ಲಿಗೆ ಡಬಲ್ ರಾಯಲ್ಟಿ: ಆಕ್ರೋಶ
Team Udayavani, Dec 24, 2022, 4:42 PM IST
ಕಲಬುರಗಿ: ಕಲ್ಲುಗಣಿ ಪ್ರದೇಶದಿಂದ ಕಚ್ಚಾ ಕಲ್ಲುಗಳನ್ನು ತೆಗೆದು ಹಾಕುವಾಗ ಹಾಗೂ ಕಾಮಗಾರಿ ನಿರ್ವಹಿಸಿ ಬಿಲ್ ಪಾವತಿ ಮಾಡುವ ಸಂದರ್ಭದಲ್ಲೂ ರಾಜಧನ (ರಾಯಲ್ಟಿ) ಪಡೆಯುತ್ತಿರುವುದು ಸಂಪೂರ್ಣ ದ್ವಂದ್ವ ನಿಯಮವಾಗಿದೆಯಲ್ಲದೇ ಶೋಷಣೆಗೆ ದಾರಿದೀಪವಾಗಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ಕಲ್ಲು ಗಣಿ ಪ್ರದೇಶದಿಂದ ಕಚ್ಚಾ ಕಲ್ಲುಗಳನ್ನು ತೆಗೆಯುವಾಗ ಸ್ಟೋನ್ ಕ್ರಶರ್ ಇಂಡಸ್ಟ್ರೀಸ್ ಮಾಲೀಕರಿಂದ ಹಾಗೂ ಕಾಮಗಾರಿ ನಿರ್ವಹಿಸಿದ ನಂತರ ಇಲಾಖೆ ಬಿಲ್ ನಲ್ಲೂ ರಾಜ ಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಂದ ಪಡೆಯಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ರಾಯಲ್ಟಿ ಪಡೆಯುವುದನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.28ರಂದು ಬೆಳಗಾವಿ ಸುವರ್ಣಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಡಬಲ್ ರಾಯಲ್ಟಿ ಪಡೆಯುವುದನ್ನು ನಿಲ್ಲಿಸುವಂತೆ, ಈಗಾಗಲೇ ವಿಧಿಸಿರುವ ಐದು ಪಟ್ಟು ದಂಡವನ್ನು ವಿಲೇವಾರಿ ಮಾಡುವುದು, ಗಣಿ ಗುತ್ತಿಗೆ ಈಗಾಗಲೇ ಸಲ್ಲಿಸಲಾದ ಅರ್ಜಿಗಳ ಇತ್ಯರ್ಥಪಡಿಸಿ ಮಂಜೂರಾತಿ ನೀಡುವುದು ಪ್ರಮುಖ ಬೇಡಿಕೆಗಳಾಗಿದ್ದು, ಬೆಳಗಾವಿ ಚಲೋಗೆ ಜಿಲ್ಲೆಯಿಂದ 2 ಸಾವಿರಕ್ಕೂ ಅಧಿಕ ಕ್ರಷರ್ ಮಾಲೀಕರು ಹಾಗೂ ಗುತ್ತಿಗೆದಾರರು ಪಾಲ್ಗೊಳ್ಳಲಿದ್ದು, ರಾಜ್ಯದಿಂದ ಸುಮಾರ 40 ಸಾವಿರ ಜನ ಸೇರಿ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಸರಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಮುಂದಾಗಬಾರದು. ಪಟ್ಟಾ ಸ್ಥಳಗಳಲ್ಲಿ ಗಣಿಗುತ್ತಿಗೆ ಪಡೆಯುದಕ್ಕೆ ರಾಜಧನದಲ್ಲಿ ಮತ್ತು ಶುಲ್ಕಗಳಲ್ಲಿ ರಿಯಾತಿ ಕಲ್ಪಿಸಬೇಕು. ಗಣಿ ಗುತ್ತಿಗೆ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳಿಗೆ ಮಂಜೂರಾತಿ ನೀಡಬೇಕು. ನಿಯಯ6(2)ರಲ್ಲಿ 100 ಮೀಟರ್‌ಗಳಿಗೆ ಮಿತಿಗೊಳಿಸಬೇಕು. ಈಗಾಗಲೇ ಕ್ರಷರ್ ಘಟಕ ಹೊಂದಿರುವವರಿಗೆ ಟೆಂಡರ್ ರಹಿತವಾಗಿ ಗಣಿ ಗುತ್ತಿಗೆ ಮಂಜೂರಾತಿ ಪಡೆಯಲು ಮೂರು ತಿಂಗಳ ಕಾಲಾವಕಾಶ ನಿಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗಣಿಗುತ್ತಿಗೆ ನೀಡಿರುವ ಪ್ರದೇಶಗಳ ಸುತ್ತ ಜಾಗದ ಲಭ್ಯವಿದ್ದಲ್ಲಿ 25 ಮೀಟರ್‌ಗಳವರೆಗೆ ಗಣಿಗುತ್ತಿಗೆ ಮಂಜೂರಾತಿಗೆ ಅವಕಾಶ ಕಲ್ಪಿಸಬೇಕು. 3ಎ ಪ್ರಕಾರ ಪಟ್ಟಾ ಸ್ಥಳಗಳಲ್ಲಿ ಕಲ್ಲುಗಳಲ್ಲಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವುದಕ್ಕೆ ಕಟ್ಟಡಕಲ್ಲನ್ನು ತೆಗೆಯುವುದಕ್ಕೆ ಅವಕಾಶ ನೀಡಬೇಕು. ಅರಣ್ಯ ಇಲಾಖೆಯಿಂದ ಎಫ್ಸಿ ಮುಖಾಂತರ ಟೆಂಡರ ರಹಿತವಾಗಿ ಗುಣಿಗುತ್ತಿಗೆ ಪಡೆಯುವುದಕ್ಕೆ ಅವಕಾಶ ನೀಡಬೇಕು. ಕಲ್ಲುಗಣಿಗುತ್ತಿಗೆ ಪರವಾನಿಗೆಯನ್ನು 50 ವರ್ಷಗಳವರೆಗೆ ವಿಸ್ತರಿಸಬೇಕು. ಈಗಾಗಲೇ ತಯಾರಿಸಿರುವ ಕ್ವಾರಿ ಪ್ಲಾನ್‌ಗಳನ್ನು ಹೊಸದಾಗಿ ತಯಾರಿಸಿ ಹೆಚ್ಚುವರಿ ಪ್ರಮಾಣದ ಖನಿಜ ತಗೆಯುವುದಕ್ಕೆ ಕ್ರಮ ವಹಿಸಬೇಕು ಎಂದು ಒತ್ತಾಯಸಿದರು.
ಸರ್ಕಾರದ ಧೋರಣೆ ವಿರೋಧಿಸಿ ಈಗಾಗಲೇ ಎಲ್ಲ ಸ್ಟೊನ್ ಕ್ರಶರ್ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯಲಾಗದು. ಜಲಿ ಕಲ್ಲು ಪೂರೈಕಯಾಗದಿದ್ದರೆ ಎಲ್ಲ ಅಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ. ಪರಿಸ್ಥಿತಿ ಕೈ ಮೀರುವ ಮುನ್ನಾ ಬೇಡಿಕೆಗಳಿವೆ ಸ್ಪಂದಿಸುವುದು ಸರಕಾರ ಪ್ರಮುಖ ಕಾರ್ಯವಾಗಿದೆ ಎಂದರು.
ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ದ ಪ್ರಧಾನ ಕಾರ್ಯದರ್ಶಿ ಆರ್.ಜಿ.ಪಾಟೀಲ್, ಕಾರ್ಯದರ್ಶಿ ಮನೋಹರ್ ಗುತ್ತೇದಾರ್, ಖಜಾಂಚಿ ರಾಕೇಶ ಗುತ್ತೇದಾರ್, ಜಂಟಿ ಕಾರ್ಯದರ್ಶಿ ವಿಕಾಸ ಆರ್.ಪಾಟಕ್ (ಸೋನು ಪಟೇಲ್) ಹಾಗೂ ಮಲ್ಲಿನಾಥ ಹಾಗರಗಿ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.