ಪಾನಮುಕ್ತ ನಿಂಬಾಳವೀಗ ಸುಕನ್ಯಾ ಸಮೃದ್ಧಿ ಗ್ರಾಮ
Team Udayavani, Nov 30, 2017, 10:36 AM IST
ಕಲಬುರಗಿ: ಈಗಾಗಲೇ ಪಾನಮುಕ್ತವಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದಲ್ಲದೇ ಬಹಿರ್ದೆಸೆಮುಕ್ತ ಗ್ರಾಮದತ್ತ ಹೆಜ್ಜೆ ಹಾಕುತ್ತಾ ಆದರ್ಶ ಗ್ರಾಮ ಎಂಬುದಾಗಿ ಹೆಸರು ಗಳಿಸಿರುವ ಆಳಂದ ತಾಲೂಕಿನ ನಿಂಬಾಳ ಗ್ರಾಮ ಈಗ ಮತ್ತೂಂದು ಆದರ್ಶ ಕಾಯಕದತ್ತ ಹೆಜ್ಜೆ ಹಾಕಿದೆ.
ಇಡೀ ಗ್ರಾಮದ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಳವಡಿಸಿದ್ದರಿಂದ ಮಂಗಳವಾರ ಭಾರತೀಯ ಅಂಚೆ ಇಲಾಖೆ ಕಲಬುರಗಿ ವಿಭಾಗದ ವತಿಯಿಂದ ನಿಂಬಾಳ ಗ್ರಾಮವನ್ನು ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ ಎಂಬುದಾಗಿ ಘೋಷಣೆ ಮಾಡಲಾಯಿತು.
ಘೋಷಣೆ ಮಾಡುವ ಕಾರ್ಯಕ್ರಮವು ಗ್ರಾಮದ ಶಾಂತಲಿಂಗೇಶ್ವರ ವಿರಕ್ತ ಮಠದ ಆವರಣದಲ್ಲಿ ಮೌನ ತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಈಗಾಗಲೇ ಪೂಜ್ಯರು ಇಡೀ ನಿಂಬಾಳ ಗ್ರಾಮವನ್ನು ಪಾನಮುಕ್ತರನ್ನಾಗಿ ಮಾಡಿ ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ.
ಅಲ್ಲದೇ ಅವರ ಇಚ್ಚೆ ಮೇರೆಗೆ ಸಂಪೂರ್ಣ ಬಯಲುದೆಸೆಮುಕ್ತ ಗ್ರಾಮದತ್ತ ಹೆಜ್ಜೆ ಹಾಕಿದೆ. ಈಗ ಮತ್ತೂಂದು ಹೆಜ್ಜೆ ಹಾಕುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಗ್ರಾಮವಾಗಿ ಹೊರಹೊಮ್ಮಿರುವುದು ಕಳಸಪ್ರಾಯವಾಗಿದೆ ಎಂದು ಶ್ಲಾಘಿಸಲಾಯಿತು.
ನಿಂಬಾಳ ಗ್ರಾಮದಲ್ಲಿ ಒಟ್ಟು 235 ಹೆಣ್ಣು ಮಕ್ಕಳು 0-10 ವಯಸ್ಸಿನ ಒಳಗಿದ್ದು, ಎಲ್ಲಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಲಾಗಿದೆ. ಹೀಗಾಗಿ ನಿಂಬಾಳ ಗ್ರಾಮವನ್ನು ಸುಕನ್ಯಾ ಸಮೃದ್ಧಿ ಗ್ರಾಮ
ಎಂದು ಘೋಷಣೆ ಮಾಡಿ, ನಾಲ್ಕು ವರ್ಷದ ಭಾಗ್ಯಶ್ರೀ ಎನ್ನುವ ಬಾಲಕಿಯ ಜನ್ಮದಿನವನ್ನು ಮೌನಯೋಗಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಇದೇ ಸಮಯದಲ್ಲಿ ಶಾಂತಲಿಂಗೇಶ್ವರ ಸ್ವಾಮಿಜೀಯವರು ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ಸುಕನ್ಯಾ ಸಮೃದ್ಧಿ ಖಾತೆ ತೆಗೆದ ಎಲ್ಲಾ ಹೆಣ್ಣು ಮಕ್ಕಳಿಗೆ ಅಂಚೆ ಕಚೇರಿ ಪಾಸ್‌ಬುಕ್ ಅನ್ನು ವಿತರಿಸಲಾಯಿತು.
ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶಿವಾನಂದ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ, ಯೋಜನೆಯ ಲಾಭವನ್ನು ಪಡೆದು ಎಲ್ಲರು ತಮ್ಮ ಮಕ್ಕಳ ಆರ್ಥಿಕ ಹಾಗೂ ಶೆ„ಕ್ಷಣಿಕ ಭದ್ರತೆಯನ್ನು ಪಡೆಯಬೇಕೆಂದು ವಿವರಣೆ ನೀಡಿದರು.
ಸಹಾಯಕ ಅಂಚೆ ಅಧೀಕ್ಷಕ ಶಿವಾನಂದ ಆರ್. ಹೀರಾಪುರ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಮಾತನಾಡಿ, ಸುತ್ತಮುತ್ತಲಿನ ಎಲ್ಲ ಗ್ರಾಮದವರು ತಮ್ಮ ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬೇಕೆಂದು ವಿನಂತಿಸಿಕೊಂಡರು. ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್ ಚಿತ್ತಕೋಟೆ ಮಾತನಾಡಿ, ಎಸ್.ಬಿ, ಆರ್.ಡಿ, ಟಿ.ಡಿ, ಪಿಪಿಎಫ್ ಮುಂತಾದ ಉಳಿತಾಯ ಖಾತೆಗಳ ಬಗ್ಗೆ ತಿಳಿ ಹೇಳಿದರು.
ಸಹಾಯಕ ಅಂಚೆ ಅಧೀಕ್ಷಕ ಆರ್.ಕೆ ಉಮ್ರಾಣಿ, ಅಂಚೆ ನಿರೀಕ್ಷಕ ರಾಮಕೃಷ್ಣ ವಂಶಿ ಪ್ರಧಾನ ಮಂತ್ರಿಯವರ ಸುರಕ್ಷಾ ಭೀಮಾ ಯೋಜನೆ, ಜೀವನ ಜ್ಯೋತಿ ಯೋಜನೆ ಹಾಗೂ ಅಟಲ್ ಪೆನ್ ಷನ್ ಯೋಜನೆ ಕುರಿತು ಮಾತನಾಡಿದರು. ಸಿದ್ದಣ್ಣ ಬೋಲಾ ನಿರೂಪಿಸಿದರು. ಸುಶೀಲ ಕುಮಾರ ತಿವಾರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Padubidri: ಅಪರಿಚಿತ ವಾಹನ ಢಿಕ್ಕಿ; ಪಾದಚಾರಿಗೆ ತೀವ್ರ ಗಾಯ
Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ
Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.