ಬೀದರನಿಂದ ಕೆಎಸ್‌ಆರ್‌ಪಿ ಸೈಕಲ್ ಜಾಥಾಕ್ಕೆ ಚಾಲನೆ
Team Udayavani, Jul 13, 2017, 9:56 AM IST
ಬೀದರ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಆಯೋಜಿಸಿರುವ ಕೆಎಸ್‌ಆರ್‌ಪಿ ಕರ್ನಾಟಕ ದರ್ಶನ ರಾಜ್ಯ ಮಟ್ಟದ ಸೈಕಲ್ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ ಪಾರಿವಾಳ ಹಾಗೂ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪೊಲೀಸ್ ಅ ಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಒಂದಿಲ್ಲೊಂದು ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ. ಅವರು ಒತ್ತಡ ಮುಕ್ತ ಬದುಕು ಸಾಗಿಸಲಿ ಎನ್ನುವ ಉದ್ದೇಶದಿಂದ ಜಾಥಾ ಆಯೋಜಿಸಿರುವುದು ಶ್ಲಾಘನೀಯ. ಜಾಥಾ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸುತ್ತಿರುವುದು ಅಭಿನಂದನಾರ್ಹ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.. ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಮಾತನಾಡಿ, ಆರೋಗ್ಯದ ಹಿತದೃಷ್ಟಿಯಿಂದ ಸೈಕಲ್ ಬಳಕೆ ಅಗತ್ಯತೆ ಅತಿ ಅವಶ್ಯವಾಗಿದೆ ಎಂಬುದನ್ನು ಒತ್ತಿ ಹೇಳುವ ಉದ್ದೇಶದಿಂದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಯಶ ಕಾಣಲಿ. ಜನತೆಗೆ ಸೂಕ್ತ ರೀತಿಯಲ್ಲಿ ಸಂದೇಶ ತಲುಪುವಂತಾಗಲಿ ಎಂದು ಶುಭ ಹಾರೈಸಿದರು.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಮಾತನಾಡಿ, ಕೆಎಸ್‌ಆರ್‌ಪಿ ರಾಜ್ಯ ಪೊಲೀಸ್ ಇಲಾಖೆಯ ಬಹುಮುಖ್ಯ ಅಂಗವಾಗಿದೆ. ಬೆಂಗಳೂರಿನಲ್ಲಿ 4, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೋಗ್ಗ, ಶಿಗ್ಗಾವಿ ಹಾಗೂ ಹಾಸನದಲ್ಲಿ ತಲಾ ಒಂದು ಕೆಎಸ್‌ಆರ್‌ಪಿ ಪಡೆಗಳಿವೆ. ಮುನಿರಾಬಾದ್ ಹಾಗೂ ವಿಜಯಪುರದಲ್ಲಿ ತಲಾ ಒಂದು ಇಂಡಿಯಾ ರಿಸರ್ವ್ ಬೆಟಾಲಿಯನ್ ಹಾಗೂ ಮುನಿರಾಬಾದ್ ಮತ್ತು ಬೆಳಗಾವಿಯಲ್ಲಿ ತಲಾ ಒಂದು ತರಬೇತಿ ಶಾಲೆಗಳಿವೆ. ಈ ಎಲ್ಲ ಕೇಂದ್ರಗಳಿಂದ ತಲಾ ಮೂವರು ಸಿಬ್ಬಂದಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜುಲೈ 25ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಸೈಕಲ್
ಜಾಥಾ ಸಮಾವೇಶಗೊಳ್ಳಲಿದೆ. ಜಾಥಾ ವೇಳೆ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ, ಶೌಚಾಲಯದ ಮಹತ್ವ, ಪರಿಸರ ಸಂರಕ್ಷಿಸಲು ಸಸಿ
ನೆಡುವಂತೆ ಜನತೆಗೆ ತಿಳಿ ಹೇಳಲಾಗುವುದು ಎಂದು ಹೇಳಿದರು.
ಶಾಸಕ ರಹೀಮ್ ಖಾನ್, ಜಿಪಂ ಸಿಇಒ ಡಾ| ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ
ಪೊಲೀಸ್ ವರಿಷ್ಠಾ ಧಿಕಾರಿ ಶ್ರೀಹರಿ ಬಾಬು ಹಾಗೂ ಪೊಲೀಸ್ ಅಧಿ ಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಪಿಎಸ್‌ಐ ವೀರಣ್ಣ ಮಗ್ಗಿ
ನಿರೂಪಿಸಿದರು.
ಜಾಥಾ ಸಂಚರಿಸುವ ಮಾರ್ಗ
ಸೈಕಲ್ ಜಾಥಾ ಮೊದಲ ದಿನ ಬೀದರನಿಂದ ಕಲಬುರಗಿಗೆ 115 ಕಿಮೀ ಸಂಚರಿಸಿತು. ಜುಲೈ 13ರಂದು ಕಲಬುರಗಿಯಿಂದ ವಿಜಯಪುರ 115 ಕಿಮೀ, 14ರಂದು ವಿಜಯಪುರದಿಂದ ಜಮಖಂಡಿ ಮಾರ್ಗವಾಗಿ ಬೆಳಗಾವಿಗೆ 210 ಕಿಮೀ ಸಂಚರಿಸಲಿದೆ. 15ರಂದು ವಿಶ್ರಾಂತಿ ದಿನ. 16ರಂದು ಬೆಳಗಾವಿಯಿಂದ ಬಾಗಲಕೋಟೆ 141 ಕಿಮೀ, 17ರಂದು ಬಾಗಲಕೋಟೆಯಿಂದ ಮುನಿರಾಬಾದ್ 146 ಕಿಮೀ, 18ರಂದು ಮುನಿರಾಬಾದ್‌ನಿಂದ ಗದಗ ಮಾರ್ಗವಾಗಿ ಶಿಗ್ಗಾವಿ 158 ಕಿಮೀ, ಜು. 19ರಂದು
ಶಿಗ್ಗಾವಿಯಿಂದ ಶಿವಮೋಗ್ಗ 165 ಕಿಮೀ ಸಂಚರಿಸಲಿದೆ. 20ರಂದು ವಿಶ್ರಾಂತಿ ದಿನ. 21ರಂದು ಶಿವಮೋಗ್ಗದಿಂದ ಮಂಗಳೂರು 220 ಕಿಮೀ, 22ರಂದು ಮಂಗಳೂರದಿಂದ ಹಾಸನ 168 ಕಿಮೀ, 23ರಂದು ಹಾಸನದಿಂದ ಮೈಸೂರು 125 ಕಿಮೀ ಸಂಚರಿಸಲಿದೆ. 24ರಂದು ವಿಶ್ರಾಂತಿ ದಿನ. 25ರಂದು ಸೈಕಲ್ ಜಾಥಾ ಮೈಸೂರಿನಿಂದ ಹೊರಟು ಬೆಂಗಳೂರಿಗೆ (140 ಕಿಮೀ) ಪಯಣ ಬೆಳೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.