ವಾಡಿ ರೈಲು ನಿಲ್ದಾಣ ದುಸ್ಥಿತಿಗೆ ಡಿಆರ್‌ಎಂ ಆಕ್ರೋಶ

Team Udayavani, Jul 6, 2017, 3:19 PM IST

GUB-3.jpg

ವಾಡಿ: ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ರೈಲ್ವೆ ಇಲಾಖೆಯ ಸೊಲ್ಲಾಪುರ ವಿಭಾಗದ ವ್ಯವಸ್ಥಾಪಕ (ಡಿಆರ್‌ಎಂ) ಮುನೀಂದ್ರಸಿಂಗ್‌ ಉಪ್ಪಲ್‌, ಅಶುಚಿತ್ವ ಕಾರಣಕ್ಕೆ ಗಬ್ಬೆದ್ದು ನಾರುತ್ತಿದ್ದ ನಿಲ್ದಾಣದ ಪರಿಸರವನ್ನು ಕಂಡು ಸ್ಥಳೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗಳ ಮೇಲೆ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿದ ಡಿಆರ್‌ಎಂ ಸಿಂಗ್‌, ನಿಲ್ದಾಣದ ನಿರ್ವಹಣೆ ವೈಖರಿ ಅರಿತುಕೊಳ್ಳುವ ಪ್ರಯತ್ನ ಮಾಡಿದರು. ಎಲ್ಲೆಡೆ ಹರಡಿಕೊಂಡು ಬಿದ್ದಿದ್ದ ಘನತ್ಯಾಜ್ಯದ ರಾಶಿ ಮತ್ತು ಹಳಿ ಪಕ್ಕದಲ್ಲಿ ಸಂಗ್ರವಾಗಿ ನಿಂತಿದ್ದ ಮಳೆ ನೀರನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಅಸಮರ್ಪಕ ಸ್ವತ್ಛತಾ ಕಾರ್ಯ ಕಂಡು ಪಟ್ಟಿಮಾಡಿಕೊಂಡರು. ರೈಲು ನಿಲ್ದಾಣ ಪ್ರವೇಶ ದ್ವಾರದ ಆವರಣವನ್ನು ಪರಿಶೀಲಿಸಲು ಮುಂದಾದ ಅಧಿಕಾರಿ ಮುನೀಂದ್ರ ಸಿಂಗ್‌, ಟಿಕೆಟ್‌ ಕಾರ್ಯಾಲಯದ ಹೊರ ಗೋಡೆಯೊಂದು
ಸಾರ್ವಜನಿಕ ಮೂತ್ರಾಲಯವಾಗಿದ್ದ ದೃಶ್ಯ ಕಂಡು ದುರ್ಗಂಧ ಸಹಿಸಿಕೊಳ್ಳಲಾಗದೆ ಮೂಗು ಮುಚ್ಚಿಕೊಂಡರು.

ರೈಲ್ವೆ ನೌಕರರ ವಾಸಕ್ಕಾಗಿ ಮೀಸಲಿಟ್ಟ ಹಳೆಯ ಕಟ್ಟಡಗಳು ಸಾರ್ವಜನಿಕರು  ಬಹಿರ್ದೆಸೆಗೆ ಬಳಕೆ ಮಾಡಿದ್ದನ್ನು
ಗಮನಿಸಿದರು. ಇಡೀ ರೈಲು ನಿಲ್ದಾಣದ ಪರಿಸರ ದುರ್ಗಂಧದಿಂದ ಕೂಡಿದ್ದಕ್ಕೆ ಸ್ಥಳದಲ್ಲಿಯೇ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಟೆಕೆಟ್‌ ಕಾರ್ಯಾಲಯದ ಸುತ್ತಲ ಪರಿಸರ ಶುಚಿಯಾಗಿದ್ದು, ಹಸಿರಿನಿಂದ
ಕಂಗೊಳಿಸಬೇಕು. ಪಾಳುಬಿದ್ದ ಎಲ್ಲ ರೈಲ್ವೆ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಶೌಚಾಲಯದ ಹಿಂಬದಿ ಜಾಗ ಬಳೆಸಿಕೊಂಡು ಕ್ರೂಸರ್‌ ಮತ್ತು ಆಟೋ ವಾಹನಗಳ ಪಾರ್ಕಿಂಗ್‌ ನಿರ್ಮಿಸಬೇಕು. ಬೈಕ್‌ ಗಳಿಗೂ ನಿಗದಿತ ಸ್ಥಳ ಗುರುತಿಸಿ ನಿಲ್ದಾಣದ ಹೊರಾಂಗಣ ಸೌಂದರ್ಯ ಕಾಪಾಡಬೇಕು ಎಂದು ಖಡಕ್‌ ಆದೇಶ ನೀಡಿದರು. ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳು, ಶೌಚಾಲಯದ ಸೌಲಭ್ಯ
ನಿರಂತರವಾಗಿರಬೇಕು. ನಿಲ್ದಾಣದ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರೈಲು ನಿಲ್ದಾಣ ವ್ಯವಸ್ಥಾಪಕ ಎ.ಎಸ್‌. ಪ್ರಸಾದರಾವ್‌, ಅಧಿಕಾರಿಗಳಾದ ಜೀವನ್‌ ಕದಂ, ಆರ್‌. ಕೆ. ಶರ್ಮಾ, ಪ್ರಭಾಕರ, ವಿಜಯಕುಮಾರ ರೈ, ಐಪಿಎಫ್‌ ಸಂಜಯಕುಮಾರ ಸಿಂಗ್‌, ಸಾಗರ ಗಾಯಕವಾಡ ಹಾಗೂ ಮತ್ತಿತರರು
ಇದ್ದರು.  

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.