ಕಲಬುರಗಿಯಲ್ಲಿ ಲಘು ಭೂಕಂಪ : 4.1 ತೀವ್ರತೆ ದಾಖಲು
Team Udayavani, Oct 12, 2021, 7:48 AM IST
ಕಲಬುರಗಿ: ಜಿಲ್ಲೆಯ ಹಲವೆಡೆ ಭೂಮಿ ಮತ್ತೆ ಕಂಪಿಸಿದ್ದು. ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಲಘು ಭೂಕಂಪನ ಉಂಟಾಗಿದೆ.
ಸೋಮವಾರ ರಾತ್ರಿ 9.54ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲಾಗಿದೆ. ಚಿಮ್ಮನಚೋಡ, ಮುಕರಂಬಾ, ಟೆಂಗಳಿ, ಕೋಡ್ಲಿ, ಹೊಡೆಬಿರನಳ್ಳಿ, ಗಡಿಕೇಶ್ವರ, ಹೊಸಳ್ಳಿ, ತಾಜಾಲಾಪುರ ಸೇರಿ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ.
ರಾತ್ರಿ ಭೂಮಿ ಕಂಪಿಸುತ್ತಿದ್ದಂತೆ ಕೆಲ ಗ್ರಾಮಗಳ ಜನರು ಮನೆಯಿಂದ ಓಡಿ ಬಂದಿದ್ದಾರೆ. ಜಿಲ್ಲೆಯಲ್ಲಿ ಪದೇ-ಪದೇ ಭೂಮಿ ಕಂಪಿಸುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದೆ
ಶನಿವಾರ ಮತ್ತು ರವಿವಾರ ಕೂಡ ಭೂಕಂಪನವಾಗಿತ್ತು. ರವಿವಾರ ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿತ್ತು. ಗಡಿಕೇಶ್ವರ, ತೇಗಲತಿಪ್ಪಿ, ಬೆನಕನಳ್ಳಿ, ಭೂತನೂರ, ಹೊಸಳ್ಳಿ ಮತ್ತಿತರ ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಚಿಂಚೋಳಿ ಭಾಗದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದರೂ ಸರ್ಕಾರ ಮತ್ತು ಅಧಿಕಾರಿಗಳು ಮಾತ್ರ ಗಮನಹರಿಸಿಲ್ಲ ಎಂದು ಸಿಟ್ಟಿಗೆದ್ದ ಗ್ರಾಮಸ್ಥರು ಸೋಮವಾರ ಹೋರಾಟ ಕೂಡ ಮಾಡಿದ್ದರು.
ಭೂಮಿಯಲ್ಲಿ ಕಂಪನವಾದಾಗ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ನಮಗೆ ನಿಖರವಾದ ಮಾಹಿತಿಯನ್ನೇ ಹೇಳುವುದಿಲ್ಲ. ಅಪಾಯದ ಮುನ್ಸೂಚನೆ ಇದ್ದರೆ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ಎಂಬುದು ಭೀತಿಗೊಳಗಾದ ಗ್ರಾಮಸ್ಥ ಒತ್ತಾಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.