ಭೂಕಂಪ: ಸಿಎಂ ಗಮನಕ್ಕೆ ತಂದ ಸಂಸದ ಜಾಧವ-ತೇಲ್ಕೂರ
Team Udayavani, Oct 14, 2021, 9:55 AM IST
ಚಿಂಚೋಳಿ: ಸರ್ಕಾರದಿಂದ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡವನ್ನು ಗಡಿಕೇಶ್ವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕಳಿಸಿ, ಭೂಕಂಪದ ಸಮಗ್ರ ಅಧ್ಯಯನ ನಡೆಸಿ, ಅಲ್ಲಿನ ನಿವಾಸಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಸೇಡಂ ಶಾಸಕ ರಾಜಕುಮಾರ ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೋರಿದರು.
ತಾಲೂಕಿನ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನಿರಂತರ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿದೆ. ಇದರಿಂದ ಈ ಭಾಗದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ ತಾಲೂಕಿನ ಗ್ರಾಮಗಳಲ್ಲಿ ಕಳೆದ ಐದಾರು ವರ್ಷಗಳಿಂದ ಆಗಾಗ ಭೂಮಿ ನಡುಗುತ್ತಲೇ ಇದೆ. ಹೀಗಾಗಿ ಕೆಲವು ಗ್ರಾಮಸ್ಥರು ತಮ್ಮ ಗೃಹೋಪಯೋಗಿ ವಸ್ತುಗಳೊಂದಿಗೆ ನೆಂಟರ ಮನೆಗೆ ತೆರಳಿದ್ದಾರೆ ಎಂದು ವಿವರಿಸಿದರು.
ನಂತರ ಗಡಿಕೇಶ್ವಾರ, ಹಲಚೇರಾ, ಹೊಸಳ್ಳಿ, ಕೊರವಿ, ಕೆರೋಳಿ, ಭಂಟನಳ್ಳಿ, ರುದನೂರ, ಭೂತಪೂರ, ಚಿಂತಪಳ್ಳಿ, ರಾಯಕೋಡ, ಕೊಡದೂರ, ಮಂಗಲಗಿ, ಬೆನಕನಳ್ಳಿ ಗ್ರಾಮಗಳಲ್ಲಿ ಭೂ ತಜ್ಞರನ್ನು ಕಳಿಸಿ, ಪರಿಹಾರ ಸೂಚಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಸರ್ಕಾರದಿಂದಲೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತದನಂತರ ವಿಪತ್ತು ನಿರ್ವಹಣಾ ಆಯುಕ್ತ ಡಾ| ಮನೋಜರಂಜನ್ ಅವರ ಜತೆ ಈ ಕುರಿತು ಚರ್ಚಿಸಿದರು. ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಸಂಸದರು, ಗಡಿಕೇಶ್ವಾರ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ತೆರಳಿ ಜನರಲ್ಲಿ ಧೈರ್ಯ ತುಂಬುವಂತೆ ಸೂಚಿಸಲಾಗಿದೆ. ಅ. 16ರಂದು ಕೊರವಿ ರಾಮನಗರ ತಾಂಡಾದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.