ಅಕ್ಷರ-ಅನ್ನ ಆರೋಗ್ಯ ಸೇವೆಗೆ ಪ್ರೋತ್ಸಾಹ ಅಗತ್ಯ: ಪಾಟೀಲ
Team Udayavani, Sep 2, 2017, 11:13 AM IST
ಆಳಂದ: ತಾಲೂಕಿನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ಅಕ್ಷರ, ಅನ್ನ ಮತ್ತು ಆರೋಗ್ಯ
ಸಂರಕ್ಷಣೆಯಂಥ ಸಮಾಜ ಕಾರ್ಯಕ್ಕೆ ಕಾಲಿಡುತ್ತಿರುವ ನಮಗೆ ಜನರ ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ನಿಂತರವಾಗಿ ಈ ಕಾರ್ಯಕ್ರ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನ ಕ್ಯಾಡಮ್ಯಾಕ್ಸ್ ಸಲ್ಯೂಶನ್ ಹಾಗೂ ಎಂಎಸ್‌ಎಂಇ ವತಿಯಿಂದ ದ್ವಿತೀಯ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ
ಅರುಣಕುಮಾರ ಪಾಟೀಲ ಹಳ್ಳಿಸಲಗರ ಹೇಳಿದರು.
ತಾಲೂಕಿನ ಖಜೂರಿ ಕೋರಣೇಶ್ವರ ಮಠದಲ್ಲಿ ಶುಕ್ರವಾರ ಶ್ರೀಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿಗಳ 57ನೇ ಜನ್ಮದಿನದ ಪ್ರಯುಕ್ತ ಹಳ್ಳಿಸಲಗರದ ಶ್ರೀ ಚನ್ನಬಸಪ್ಪ ಪಾಟೀಲ ಮೆಮೋರಿಯಲ್ ಟ್ರಸ್ಟ್, ಕಲಬುರಗಿಯ ಎಚ್‌ಸಿಜಿ ಆಸ್ಪತ್ರೆ, ಎಚ್‌ಕೆಇ ಸಂಸ್ಥೆಯ ಎಸ್. ನಿಜಲಿಂಗಪ್ಪ
ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಖಜೂರಿ ಶ್ರೀಗಳ ಜನ್ಮದಿನದ ನಿಮಿತ್ತ ಆರೋಗ್ಯ ಶಿಬಿರದಂತ ಕಾರ್ಯಕ್ರಮದ ಮೂಲಕವೇ
ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದೇನೆ. ತಮ್ಮ ಒಡೆತನದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯಿಂದ 16
ಸಾವಿರ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 20 ರಿಂದ 30 ಸಾವಿರ ಮಂದಿಗೆ
ಉಚಿತ ಕೌಶಲ್ಯ ತರಬೇತಿ ನೀಡಿದ್ದರಿಂದ ಅವರು ಉದ್ಯೋಗದಲ್ಲಿ ತೊಡಗಿದ್ದಾರೆ. ಇದರ ಫಲವಾಗಿ ಉದ್ಯಮ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.
ಶಿಬಿರದಲ್ಲಿ ಕ್ಯಾನ್ಸರ್ ಸೇರಿ ಇನ್ನಿತರ ನುರಿತ ತಜ್ಞ ವೈದ್ಯರನ್ನು ಆಮಂತ್ರಿಸಿ ಆರೋಗ್ಯ ತಪಾಸಣೆ
ಮತ್ತು ಚಿಕ್ಸಿತೆ ಕೊಡಲು ಮುಂದಾಗಲಾಗಿದೆ. ಜನರು ಇದರ ಲಾಭ ಪಡೆಯಬೇಕು ಎಂದರು.
ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ ಮಾತನಾಡಿ, ತನು, ಮನ ಶುದ್ಧಿಯಾಗಿ ಬಂದ ಗಳಿಕೆಯಿಂದ ತಮ್ಮ ಜನ್ಮದಿನದ ಅಂಗವಾಗಿ ಗ್ರಾಮೀಣ ಜನರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡ ಪಾಟೀಲ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯ ಜನಪರವಾಗಿದೆ. ಮುಂದಿನ ದಿನಗಳಲ್ಲಿ
ಉತ್ತರೋತ್ತರವಾಗಿ ಅರುಣಕುಮಾರ ಪಾಟೀಲ ಬೆಳೆದು ಜನ ಸೇವೆ ಮಾಡುವ ಶಕ್ತಿ ಬರಲಿ ಎಂದು ಹಾರೈಸಿದರು.
ಮಾಡಿಯಾಳ ಒಪ್ಪತ್ತೇಶ್ವರ ಮಠದ ಮರುಳಸಿದ್ಧ ಮಹಾಸ್ವಾಮೀಜಿ, ಮಾದನಹಿಪ್ಪರಗಾ ಮಠದ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶ್ರೀಗಳ ಜನ್ಮದಿನದ ಅಂಗವಾಗಿ ಪಾಟೀಲ ಮೆಮೋರಿಯಲ್ ಟ್ರಸ್ಟ್‌ನಿಂದ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ
ಎಂದರು. ಕಲಬುರಗಿ ಎಚ್‌ಸಿಜಿ ಆಸ್ಪತ್ರೆಯ ವೈದ್ಯಕೀಯ ಅ ಧೀಕ್ಷಕ ಡಾ| ಶಾಂತಲಿಂಗ ನಿಗ್ಗುಡಗಿ ಮಾತನಾಡಿದರು.
ಜೆಡಿಎಸ್ ರಾಜ್ಯ ಸಂಘಟನಾ ನೂತನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಮದಗುಣಕಿ, ಮುಖಂಡ ಮಲ್ಲಿನಾಥ ನಿಂಬಾಳ, ಗ್ರಾಪಂ ಉಪಾಧ್ಯಕ್ಷ ಶ್ರೀಶೈಲ ಬಂಡೆ, ಇಟಗಾದ ಶ್ರೀ ಶಿವಾನಂದ ಸ್ವಾಮೀಜಿ, ಡಾ| ಶಿವಶಂಕರ ಚಾಕೂರ, ಡಾ| ರಾಮ ಮೋಹನ, ಚಂದ್ರಶೇಖರ ಪಾಟೀಲ, ಸಿದ್ದಣಗೌಡ ಪಾಟೀಲ
ಪಾಲ್ಗೊಂಡಿದ್ದರು.
ಗಂಗಾಧರ ಕುಂಬಾರ ನಿರೂಪಿಸಿದರು. ಮಂಜುನಾಥ ಕಂದಗುಳೆ ವಂದಿಸಿದರು. ನಂತರ ಪಾಲ್ಗೊಂಡಿದ್ದ ಖಜೂರಿ ಸೇರಿ ಸುತ್ತಮುತ್ತಲಿನ ಗ್ರಾಮಗಳ 450 ಜನರಿಗೆ ವಿವಿಧ ರೋಗಳಿಗೆ ಆರೋಗ್ಯ ತಪಾಸಣೆ ಕೈಗೊಂಡು ಔಷಧ-ಮಾತ್ರೆ ವಿತರಿಸಲಾಯಿತು. 25ಕ್ಕೂ ಹೆಚ್ಚಿನ ನುರಿತ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.