ಗುರುವಿನ ಮುಖಾಂತರ ಶಿಕ್ಷಣ ಅವಶ್ಯ: ಡಿಗ್ಗಾವಿ
Team Udayavani, Sep 6, 2018, 5:12 PM IST
ಕಲಬುರಗಿ: ಜೀವನದಲ್ಲಿ ಜನ್ಮ ನೀಡಿದ ತಂದೆ-ತಾಯಿ ಹಾಗೂ ಶಿಕ್ಷಣ ಕಲಿಸಿದ ಗುರುಗಳ ಋಣವನ್ನು ಯಾವತ್ತು ಮುಟ್ಟಿಸಲಿಕ್ಕಾಗದು, ವಾಪಸ್ಸು ಕೊಡಲಿಕ್ಕಾಗದು ಎಂದು ರಾಷ್ಟ್ರಪ್ರಶಸ್ತಿ ವಿಜೇತೆ ಶಿಕ್ಷಕಿ ಪ್ರಮಿಳಾಬಾಯಿ ವಿ. ಡಿಗ್ಗಾವಿ
ಹೇಳಿದರು.
ಖಣದಾಳದ ಶರಣಮ್ಮ ಡಿಗ್ಗಾವಿ ಸ್ಮರಣಾರ್ಥದ ಶ್ರೀಗುರು ವಿದ್ಯಾಪೀಠ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಮನುಷ್ಯ ಉನ್ನತ ಸ್ಥಾನಕ್ಕೆ ಹೋಗಲು ಶಿಕ್ಷಕರ ಪಾತ್ರವೇ ಬಹುಮುಖ್ಯವಾಗಿದೆ. ಗುರಿ ಮುಟ್ಟಲು ಗುರುವಿನ ಮುಖಾಂತರ ಶಿಕ್ಷಣ ಅವಶ್ಯಕವಿದೆ. ಇದೇ ಕಾರಣದ ಹಿನ್ನೆಲೆಯಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎನ್ನಲಾಗುತ್ತದೆ ಎಂದರು.
ತಂದೆ-ತಾಯಿ ಹಾಗೂ ಶಿಕ್ಷಕರಿಗೆ ಸದಾ ಗೌರವ ಕೊಡಬೇಕು. ವಿದ್ಯೆಯಿಂದ ಎಲ್ಲ ಪಡೆಯುವ ನಾವು ಶಿಕ್ಷಣವನ್ನು ಅತಿ ಶ್ರದ್ಧೆ ಹಾಗೂ ಆಸಕ್ತಿಯಿಂದ ಕಲಿಯಬೇಕು. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚರಿತ್ರೆ ಓದಿ ಅದರ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಡಿಗ್ಗಾವಿ, ಸದಸ್ಯರಾದ ನಾಗರತ್ನ ಬಿ. ಡಿಗ್ಗಾವಿ, ಪ್ರಾಂಶುಪಾಲರಾದ ಡಾ| ಪಿ.ಎಂ. ಶಿವಕುಮಾರ, ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ ಪಾಟೀಲ ಇದ್ದರು. ಇದೇ ವೇಳೆ ಸಂಸ್ಥೆಯ ಎಲ್ಲ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.