ಜಿಲ್ಲಾದ್ಯಂತ ಸಂಭ್ರಮದ ಈದ್ ಮಿಲಾದ್
Team Udayavani, Nov 22, 2018, 10:28 AM IST
ಆಳಂದ: ಪಟ್ಟಣದಲ್ಲಿ ಸಡಗರ-ಸಂಭ್ರಮದ ಮಧ್ಯ ಬುಧವಾರ ಮುಸ್ಲಿಂರು ಈದ್ ಮಿಲಾದ್ ಆಚರಿಸಿದರು. ಪಟ್ಟಣದ ದಾರುಲ್‌ರಂನಿಂದ ಪ್ರಮುಖ ರಸ್ತೆಗಳ ಮೂಲಕ ಕೈಗೊಂಡ ವಿವಿಧ ರೀತಿಯ ಮಸೀದಿ, ಮೆಕ್ಕಾ ಮದಿನಾ, ಹಜ್ ಸೇರಿದಂತೆ ದರ್ಗಾಗಳ ವಿದ್ಯುತ್ ದೀಪ ಅಲಂಕೃತ ಸ್ತಬ್ದ ಚಿತ್ರಗಳ ಆಕರ್ಷಕ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
ಮಾಜಿ ಶಾಸಕ ಬಿ.ಆರ್. ಪಾಟೀಲ, ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ರೈತ ಮುಖಂಡ ಮೌಲಾ ಮುಲ್ಲಾ, ಅಬ್ದುಲ್ ಸಲಾಂ ಸಗರಿ, ಬಸವಲಿಂಗಪ್ಪ ಗಾಯಕವಾಡ, ಇದ್ರೀಸ್ ಮೌಲಾನಾ, ಮೋಹೀಜ್ ಕಾರಬಾರಿ, ಸುಲೆಮಾನ್ ಮುಕುಟ, ಡಾ| ಶಫಿ ಅಹ್ಮದ್, ಅಹೆಮದ್ ಅಲಿ ಚುಲಬುಲ್, ಮುಸ್ತಾಕ ಮೌಲಾನಾ, ಸೈಯದ ಮಜರ ಹುಸೇನ, ಪುರಸಭೆ ಸದಸ್ಯ ಅಮ್ಜದ್ ಅಲಿ ಖರ್ಜಗಿ, ಫಿರದೋಸ್ ಅನ್ಸಾರಿ, ಅಫಜಲ್ ಅನ್ಸಾರಿ ಮತ್ತಿತರರು ಪಾಲ್ಗೊಂಡಿದ್ದರು. ಮುಖಂಡರು ಪರಸ್ಪರ ಹಬ್ಬದ ಶುಭಾಯ ಕೋರಿದರು. ನಂತರ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಯಿತು.
ಚಿತ್ತಾಶಾವಲಿ ದರ್ಗಾದಲ್ಲಿ ಧ್ವಜಾರೋಹಣ
ಚಿತ್ತಾಪುರ: ಶಾಂತಿಧೂತ ವಿಶ್ವ ಪ್ರವಾದಿ ಮಹ್ಮದ್ ಪೈಗಂಬರ್ ಅವರ 1493ನೇ ಜನ್ಮದಿನವನ್ನು ಬುಧವಾರ ಪಟ್ಟಣದಲ್ಲಿ ಮುಸ್ಲೀಂರು ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಚಿತ್ತಾವಲಿ ಚೌಕ್‌ನಲ್ಲಿ ಬೆಳಗ್ಗೆ 10ಕ್ಕೆ ಚಿತ್ತಾಶಾವಲಿ ದರ್ಗಾದ ಮುತುವಲ್ಲಿ ಸೈಯದ್ ಮಿನಾಜೋದ್ದಿನ್ ಚಿಸ್ತಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ವಿಶೇಷ ಪ್ರಾರ್ಥನೆ ನೆರವೇರಿತು. ನಂತರ ಮುಸ್ಲಿಂರು ಪಟ್ಟಣದ ಪ್ರಮುಖ ಬೀದಿಗಳಾದ ಚಿತ್ತಾವಲಿ ಚೌಕ್, ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ಚೌಕ್, ಲಾಡ್ಜಿಂಗ್ ಕ್ರಾಸ್, ಸ್ಟೇಷನ್ ರಸ್ತೆ, ನಾಗಾವಿ ಚೌಕ್ ಸೇರಿದಂತೆ ಇತರೆ ಪ್ರಮುಖ ಬೀದಿಗಳಲ್ಲಿ ಹಝ್ರತ್ ಮಹ್ಮದ್ ಮುಸ್ತಫಾ ಜನ್ಮ ದಿನಾಚರಣೆ ಪ್ರಯುಕ್ತ ರ್ಯಾಲಿ ನಡೆಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ದಂಡೋತಿ, ವಾಡಿ, ರಾವೂರ, ಬಾಗೋಡಿ, ಕಮರವಾಡಿ, ರಾವೂರ್, ಅಲ್ಲೂರ್, ಅಳ್ಳೋಳ್ಳಿ, ಭಂಕಲಗಾ, ಮುಡಬೂಳ, ಸಾತನೂರ್, ಹೊಸ್ಸುರ್, ತೆಂಗಳಿ ಸೇರಿದಂತೆ ಇನ್ನಿತರ ಗ್ರಾಮಗಳ ಮುಸ್ಲಿಮರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಸಂದರ್ಭದಲ್ಲಿ ಮದರಸಾ ವಿದ್ಯಾರ್ಥಿಗಳು ಧಪ್ ನೃತ್ಯ ಪ್ರದರ್ಶಿಸಿದರು. ಚಿತ್ತಾಶಾವಲಿ ದರ್ಗಾದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ದರ್ಗಾದ ಮುತುವಲ್ಲಿ ಸೈಯದ್ ಮಿನಾಜೋದ್ದಿನ್ ಚಿಸ್ತಿ ಮಾತನಾಡಿ, ಪ್ರವಾದಿ ಮಹ್ಮದ್ ಪೈಗಂಬರ್ ಅವರ ಆದರ್ಶವನ್ನು ಎಲ್ಲರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮೌಲಾನಾ ನಜೀರ್, ಹೆಲ್ಪಲೈನ್ ಅಧ್ಯಕ್ಷ ಇಬ್ರಾಹಿಂ, ಮಹ್ಮದ್ ಇಬ್ರಾಹಿಂ, ಅಫ್ಜಲ್ ಖುರೇಶಿ, ಮಹೇಮೂದ್, ಮೋಸಿನ್ ಖಾನ್, ಸೈಯದ್ ಶಬ್ಬೀರ್, ಫಯಾಜ್ ಬಬ್ಲು, ಮಹೇಬೂಬ್, ಸದ್ಧಾಂ, ಮೌಲಾ, ಹುಸೇನ್, ಇಮಾಮ ಅಲಿ, ಇಮ್ರಾನ್ ಶೇಖ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.