ಇಂಗ್ಲಿಷ್ ಪ್ರಭಾವ ಹೆಚ್ಚಾಗಿ ಮರೆಯಾಗುತ್ತಿದೆ ಕನ್ನಡ
Team Udayavani, Mar 1, 2022, 10:55 AM IST
ಜೇವರ್ಗಿ: ಇಂಗ್ಲಿಷ್ ಪ್ರಭಾವ ಹೆಚ್ಚಾಗಿ ಕನ್ನಡ ಮರೆಯಾಗುತ್ತಿದೆ. ಹೆಚ್ಚು ಕನ್ನಡ ಪದಗಳನ್ನೇ ಬಳಸಿ ಭಾಷೆ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹಿರಿಯ ವಿದ್ವಾಂಸ, ಸಾಹಿತಿ ಗೋ.ರು. ಚನ್ನಬಸಪ್ಪ ಹೇಳಿದರು.
ಪಟ್ಟಣದ ಹಳೆಯ ತಹಶೀಲ್ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವ್ಯಕ್ತಿ ಪ್ರತಿಷ್ಠೆಯಿಂದ ದೇಶ ಇಂದು ಅಲ್ಲೋಲ ಕಲ್ಲೋಲವಾಗಿದೆ. ಬರಹಗಾರ ತಮ್ಮ ಗಂಭೀರ ಚಿಂತನೆಗಳಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಾಹಿತಿ, ರಾಜಕಾರಣಿ ಹಾಗೂ ಸನ್ಯಾಸಿ ಎಂದಿಗೂ ಅಹಂಕಾರಿಯಾಗಬಾರದು. ಸಾಹಿತ್ಯ ಸಹಜವಾಗಿ ಮೂಡಿಬರಬೇಕು. ಪ್ರಾಚೀನ ಸಾಹಿತ್ಯದ ನಂತರ ನೂರಾರು ಸಾಹಿತ್ಯ ಪ್ರಕಾರಗಳು ಹರಿದು ಬಂದಿದ್ದರೂ ಪ್ರಾಚೀನ ಸಾಹಿತ್ಯ ಗಟ್ಟಿಯಾಗಿ ಉಳಿದಿದೆ. ನಮ್ಮ ಅಭಿರುಚಿ ಹಾಳಾಗಿದೆ. ವಿಕೃತ ಮತ್ತು ವಿಲಕ್ಷಣ ಅಭಿರುಚಿಗಳು ನಮ್ಮ ಯುವ ಜನರ ದಾರಿದೀಪಗಳಾಗಿರುವುದು ದುರ್ದೈವ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಕಾರ್ಯಕ್ರಮಗಳು ಕೇವಲ ಶಿಕ್ಷಕರು, ಅಧಿಕಾರಿಗಳು ಹಾಗೂ ಮಕ್ಕಳಿಗೆ ಸೀಮಿತವಾಗಬಾರದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಯಡ್ರಾಮಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತರಾಯ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಾ, ಕನ್ನಡ ಸಾಹಿತ್ಯ ಪರಿಷತ್ತು ಯಡ್ರಾಮಿ ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಸಜ್ಜನ್ ಭಾಗವಹಿಸಿದ್ದರು. ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ.ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ನೃತ್ಯ, ಶ್ರೀ ಮಹಾಲಕ್ಷ್ಮೀ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾನಪದ ನೃತ್ಯ, ಬಸಯ್ಯಸ್ವಾಮಿ ಹಿರೇಮಠ ಕಾಸರಭೋಸಗಾ ಜಾನಪದ ಹಾಡುಗಳನ್ನು ಹಾಡಿದರು. ಶರಣಮ್ಮ ಸುಂಬಡ ಸಿದ್ದಮ್ಮ ಚನ್ನೂರ ಹಾಗೂ ಸಂಗಡಿಗರು ಶೋಭಾನ ಹಾಡು ಹಾಡಿದರು. ಚಂದಾಸಾಬ್ ಜಲಾಲಸಾಬ್ ಚನ್ನೂರ ಭಜನೆ ಪದಗಳು, ಶಂಕರ ಹಾಗೂ ಸಂಗಡಿಗರು ಡೊಳ್ಳಿನ ಪದಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ„ದ ಸಾಧಕರನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪ್ರೊ.ಯಶವಂತ ರಾಯ ಅಷ್ಠಗಿ, ಶಿವರಾಜ ಅಂಡಗಿ, ವಿನೋದಕುಮಾರ ಜನವರಿ, ಚನ್ನಮಲ್ಲಯ್ಯಸ್ವಾಮಿ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಸೋಮಶೇಖರಗೌಡ ಪಾಟೀಲ ಗುಡೂರ, ಚಂದ್ರಶೇಖರ ಸೀರಿ, ಶಿವಾನಂದ ಘಂಟಿಮಠ, ಪುಂಡಲೀಕ ಗಾಯಕವಾಡ, ಶಶಿ ಮಹೇಂದ್ರಕರ್, ನೀಲಕಂಠರಾಯಗೌಡ ಮಾಲಿಪಾಟೀಲ, ಸಂಗಯ್ಯ ಗುತ್ತೇದಾರ, ಉಮಾಕಾಂತ ಗೋಲಗೇರಿ, ಶ್ರೀಹರಿ ಕರಕಿಹಳ್ಳಿ, ಎಸ್.ಎ,ಪಡಶೆಟ್ಟಿ, ಸುನಂದಾ ಕಲ್ಲಾ, ಜಗನ್ನಾಥ ಇಮ್ಮಣ್ಣಿ, ಮಹಾಂತೇಶ ಪಾಟೀಲ, ಪರಮೇಶ್ವರ ಬಿರಾಳ, ಕಾಶಿನಾಥ ಸಾಹು ಮಂದೇವಾಲ, ಬಸವರಾಜ ಬಾಗೇವಾಡಿ, ವೆಂಕಟರಾವ ಮುಜುಮದಾರ, ಸಂಗಮೇಶ ಸಂಕಾಲಿ, ಎಸ್.ಟಿ.ಬಿರಾದಾರ, ಡಾ|ಹಣಮಂತ್ರಾವ ರಾಂಪೂರೆ, ಶರಣಗೌಡ ಜೈನಾಪೂರ, ಬಸವರಾಜ ತಿಳಗೂಳ, ಭೀಮಯ್ಯ ಗುತ್ತೇದಾರ, ಮೌನಪ್ಪ ವಿಶ್ವಕರ್ಮ, ಭೀಮರಾವ ಭಜಂತ್ರಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಶಿಕ್ಷಕಿ ಸುನಂದಾ ಕಲ್ಲಾ ಸ್ವಾಗತಿಸಿದರು. ಡಾ|ಧರ್ಮಣ್ಣ ಬಡಿಗೇರ ನಿರೂಪಿಸಿದರು. ಬಸವರಾಜ ಬಾಗೇವಾಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.