ಎಲ್ಲೆಡೆ ಕಾರಹುಣ್ಣಿಮೆ ಸಂಭ್ರಮ


Team Udayavani, Jun 29, 2018, 10:14 AM IST

gul-1.jpg

ಶಹಾಬಾದ: ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸುವುದು ಹಾಗೂ ಕರಿ ಹರಿಯುವ ವಿಶಿಷ್ಟವಾದ ಕಾರ್ಯಕ್ರಮ ಗುರುವಾರ ಸಡಗರ-ಸಂಭ್ರಮದಿಂದ ನಡೆಯಿತು.

ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಮೇಯಿಸಿದ್ದ ಜೋಡೆತ್ತುಗಳನ್ನು ಬಂಡಿಗೆ ಕಟ್ಟಿದರು. ಬಂಡಿಯಲ್ಲಿ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ವಿಶೇಷ ಪೂಜೆ ಸಲ್ಲಿಸಿದರು.

ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯ ಗಮನ ಸೆಳೆಯಿತು. ನಂತರ ಬಂಡಿಯೂ ಊರೊಳಗೆ ಪ್ರವೇಶಿಸಿ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯವನ್ನು ನೋಡಲು ಸಾವಿರಾರು ಜನರು ಕಿಕ್ಕಿರಿದು ಸೇರಿದ್ದರು. ಖಡ್ಗದಾರಿಯಾದ ಕುಲಕರ್ಣಿ ಅವರು ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರ ಮಾಡಿದರು. 

ಶಾಸಕ ಬಸವರಾಜ ಮತ್ತಮೂಡ, ಗ್ರಾಮದ ಮುಖಂಡರಾದ ಚನ್ನವೀರಪ್ಪ ಪಾಟೀಲ, ಶಶಿಕಾಂತ ಪಾಟೀಲ, ಲಕ್ಷ್ಮೀಕಾಂತ ಕಂದಗೂಳ, ಡಾ| ಸುರೇಶ ಪಾಟೀಲ, ಭೀಮರಾಯ ಸಿರಗೊಂಡ, ಪ್ರಕಾಶ ಪಾಟೀಲ, ಶರಣಬಸಪ್ಪ ಧನ್ನಾ, ಸುರೇಶ ಮೆಂಗನ್‌, ಎಚ್‌. ವೈ. ರಡ್ಡೇರ ಸೇರಿದಂತೆ ಅನೇಕ ಮುಖಂಡರು ಇದ್ದರು.

ಆಂಧ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಶಹಾಬಾದ, ವಾಡಿ, ರಾವೂರ, ಮುತ್ತಗಿ, ಶಂಕರವಾಡಿ, ಭಂಕೂರ ವಾಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ , ಅಲ್ದಿಹಾಳ, ಪೇಠಸಿರೂರ, ಗೋಳಾ, ಮಾಲಗತ್ತಿ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆ ನಿಮಿತ್ತ ಸಿಪಿಐ ಅಸ್ಲಾಂಭಾಷಾ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಜಾತ್ರೆ ನಿಮಿತ್ತ ಭಕ್ತರು ಮಂದಿರಗೊಳಗೆ ದೇವಿ ದರ್ಶನ ಪಡೆಯಲು ಹೋಗಿಬಂದ ಸಂದರ್ಭದಲ್ಲಿ ಮೊಬೈಲ್‌, ಬಂಗಾರದ ಚೈನ್‌, ಹಣ ಕಳವು ಮಾಡಿದ ಘಟನೆ ನಡೆದಿದೆ. ನಮ್ಮೂರ ಜಾತ್ರೆಯಲ್ಲಿ ಇದೇ ಮೊದಲನೇ ಬಾರಿ ಕಳ್ಳರು ಬಂದು ದೋಚಿರುವುದು ಕಂಡು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ತಳೀರು ತೋರಣಗಳಿಂದ ಕರಿ ಬಂಡಿ ಶೃಂಗಾರ 

ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ರೈತರ ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಮುಲ್ಲಾಮಾರಿ ನದಿಯಲ್ಲಿ ಪಟ್ಟಣದ ರೈತರು ತಮ್ಮ ಎತ್ತುಗಳ ಮೈ ತೊಳೆದು ಅವುಗಳಿಗೆ ಪೂಜೆ ಸಲ್ಲಿಸಿ ಅಲಂಕಾರಿಕ ಸಾಮಗ್ರಿ ಹಾಕಿ ಮಧ್ಯಾಹ್ನದಿಂದಲೇ
ಓಡಾಡಿಸಿ ಸಂಭಮಿಸಿದರು.

ಪಟ್ಟಣದ ದೇವತೆ ಗುಡಿ ಹತ್ತಿರ ಸಂಜೆ ಐದು ಗಂಟೆಗೆ ಕರಿ ಕಡಿಯುವ ಬಂಡಿನ ಹಿಂದೆ ಓಡಿಸುವ ಎತ್ತುಗಳನ್ನು ಮುಲ್ಲಾಮಾರಿ ನದಿಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ದೇಶಮುಖ ದೇವಡಿಯಿಂದ ಹೊರಡುವ ಕರಿ ಬಂಡಿಗೆ ತಳೀರು ತೋರಣಗಳಿಂದ ಸಿಂಗರಿಸಿ ಹಿರೇ ಅಗಸಿ ಲಕ್ಷ್ಮೀದೇವತೆ ಗುಡಿ ಹತ್ತಿರ ಬಂದು ತಿರುಗಿ ಹೋದ ನಂತರ ಅದರ ಹಿಂದೆ ಪ್ರಥಮ ಸ್ಥಾನ ಯಾರ ಗೆಲ್ಲುತ್ತಾರೋ ಎಂಬುದನ್ನು ನೋಡಲು ಸಾವಿರಾರು ಜನರು ಆಗಮಿಸಿದ್ದರು.

ಕಾರ ಹುಣ್ಣಿಮೆ ಎತ್ತಿನ ಬಂಡಿ ಓಟಕ್ಕೆ ಶಾಸಕ ಡಾ| ಉಮೇಶ ಜಾಧವ ಚಾಲನೆ ನೀಡಿದರು. ಜಿಪಂ ಸದಸ್ಯ ಗೌತಮ ಪಾಟೀಲ, ರೈತ ಅಶೋಕ ಪಾಟೀಲ, ಅಬ್ದುಲ್‌ ಬಾಸೀತ್‌, ಕೆ.ಎಂ. ಬಾರಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ ಠಾಕೂರ, ಗೋಪಾಲರಾವ ಕಟ್ಟಿಮನಿ, ಮಗದುಮಖಾನ್‌ ಟೇಲರ್‌, ಶಂಭಲಿಂಗಪ್ಪ ಭಾಗವಹಿಸಿದ್ದರು.

ತಾಲೂಕಿನ ಕೋಡ್ಲಿ, ಸುಲೇಪೇಟ, ಕುಂಚಾವರಂ, ಐನೋಳಿ, ಹಸರಗುಂಡಗಿ, ಚಂದನಕೇರಾ, ಐನಾಪುರ, ಗಡಿಕೇಶ್ವಾರ, ನಿಡಗುಂದಾ ಗ್ರಾಮಗಳಲ್ಲಿ ರೈತರು ತಮ್ಮ ಎತ್ತುಗಳ ಮೇಲೆ ವಿವಿಧ ಬಣ್ಣದ ಬಟ್ಟೆಗಳನ್ನು ಮತ್ತು ಗೆಜ್ಜೆಗಳನ್ನು ಕಟ್ಟಿ ಓಡಾಡಿಸಿ ಸಂತಸಪಟ್ಟರು.

ಜೇವರ್ಗಿ: ಮುಂಗಾರು ಬಿತ್ತನೆಗೆ ಮುನ್ನುಡಿ ಬರೆಯುವ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ರೈತರು ಎತ್ತುಗಳನ್ನು ಶೃಂಗರಿಸಿ ಓಡಿಸುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿ ಖುಷಿಪಟ್ಟರು. ಬೆಳಗ್ಗೆ ದನ, ಕರುಗಳ ಮೈತೊಳೆದರು. ನಂತರ ಪಟ್ಟಣದ ಷಣ್ಮುಖ ಶಿವಯೋಗಿ ವಿರಕ್ತ ಮಠದ ಆವರಣದಲ್ಲಿ ಸೇರಿದ ರೈತರು ತಮ್ಮ ಎತ್ತುಗಳಿಗೆ ಮೈಗೆ ಹಾಗೂ ಕೋಡುಗಳಿಗೆ ವಿವಿಧ ರೀತಿಯ ಬಣ್ಣ ಬಳಿದು ಗೆಜ್ಜೆ, ಮೊಗಡಾ, ರಿಬ್ಬನ್‌, ಬಣ್ಣದ ಗೊಂಡೆ, ಹಣೆ ಗೆಜ್ಜೆ ಹಾಕಿ ಶೃಂಗಾರಗೊಳಿಸಿದರು. ಶೃಂಗರಿಸಿದ ಎತ್ತುಗಳಿಗೆ ಮುತ್ತೆçದೆಯರು ಆರತಿ ಮಾಡಿ
ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಸಂಜೆ 5:00ಕ್ಕೆ ಊರ ಹೂಗಾರ ಮನೆಯಿಂದ ಆರಂಭವಾದ ಕುಂಭ ಮೆರವಣಿಗೆ ಲಕ್ಷಿ¾à ದೇವಸ್ಥಾನದ ಅಗಸಿಗೆ ಬಂದಾಕ್ಷಣ ಎತ್ತುಗಳ ನಡುವೆ ಕರಿ ಹರಿಯುವ ಸ್ಪರ್ಧೆ ನಡೆಯಿತು. ನಂತರ ಕರಿ ಹರಿದ ಗುಲಾಮ್‌ ಸೇಠ ಗಿರಣಿ ಎಂಬುವರ ಎತ್ತುಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಕರಿ ಹರಿಯುವ ಸಂದರ್ಭದಲ್ಲಿ ಬಸವರಾಜ ಸಾಹು ಗೋಗಿ, ಷಣ್ಮುಖಪ್ಪಗೌಡ ಹಿರೇಗೌಡ, ದಂಡಪ್ಪಗೌಡ ಪೊಲೀಸ್‌ ಪಾಟೀಲ, ಸೋಮಣ್ಣ ಕಲ್ಲಾ, ಯಶವಂತರಾಯ ಕೋಳಕೂರ, ಸಿದ್ದಣ್ಣಗೌಡ ಹಳಮನಿ, ಚಂದ್ರಶೇಖರ ಸೀರಿ, ಶಿವಶರಣಪ್ಪಗೌಡ ಮಾಲಿಪಾಟೀಲ, ರವಿ ಕೋಳಕೂರ, ರಾಮಣ್ಣ ಪೂಜಾರಿ, ಶರಣಗೌಡ ಸರಡಗಿ, ಮಹಿಬೂಬಸಾಬ್‌
ಚನ್ನೂರ, ಕಾಂತಪ್ಪ ಪೂಜಾರಿ, ಶ್ರೀನಿವಾಸ ಕುಲಕರ್ಣಿ, ಅನೀಲ ರಾಂಪುರ, ಗುಂಡು ಸಾಹು ಗೋಗಿ, ಕಾಳಪ್ಪ ಪತ್ತಾರ, ಷಣ್ಮುಖಯ್ಯ ಘಂಟಿಮಠ, ರಾಜು ಕಲ್ಲಾ, ಪಂಚಯ್ಯಸ್ವಾಮಿ ಮಠಪತಿ, ಬಸಣ್ಣ ಮದ್ರಕಿ, ಚಂದ್ರು ಕೊಡಚಿ, ಚಿದಾನಂದ ಕಡಪಟ್ಟಿ, ಪ್ರಕಾಶ ಪುಲಾರೆ, ಶಿವಾನಂದ ಮಠಪತಿ, ಯೂನುಸ್‌ ಬಾಗವಾನ, ಲಿಂಗರಾಜ ಮಾಸ್ಟರ್‌, ರಾಜು ತಳವಾರ, ತಿಪ್ಪಣ್ಣ ತಳವಾರ, ದತ್ತಪ್ಪ ತಳವಾರ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ವಿವಿಧ ಬಣ್ಣದಿಂದ ಎತ್ತುಗಳ ಅಲಂಕಾರ
 ಚಿತ್ತಾಪುರ: ಪಟ್ಟಣ ಹಾಗೂ ತಾಲೂಕಿನ ಅಳ್ಳೋಳ್ಳಿ, ಸಾತನೂರ, ದಂಡೋತಿ, ಭಾಗೋಡಿ, ಮುಡಬೂಳ, ಅಲ್ಲೂರ (ಬಿ) ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಕಾರಹುಣ್ಣಿಮೆ ಹಬ್ಬವನ್ನು ರೈತರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. 

ಎತ್ತುಗಳಿಗೆ ವಿವಿಧ ಬಣ್ಣ ಹಚ್ಚಿ ಅಲಂಕಾರಿಕ ವಸ್ತಗಳಿಂದ ಸಿಂಗರಿಸಿ ಮೆರವಣಿಗೆ ಮಾಡುವುದು ಕಂಡು ಬಂತು. ರಾಸುಗಳಿಗೆ ಹೊಸ ನೂಲಿನ ಮೊಗಡ, ಗೋಂಡ್ಯಾ, ಮುದಗಾಣಿ ಕುರಣಿಗಳಿಂದ ಮತ್ತು ಕೋಡುಗಳನ್ನು ಬಣ್ಣದಿಂದ ಅಲಂಕರಿಸಿ ಗ್ರಾಮ ದೇವತೆ ಬಳಿಗೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು. 

ಪಟ್ಟಣದ ಸಿನಿಮಾ ಮಂದಿರದ ಅಗಸಿ ಬಾಗಿಲಿನಲ್ಲಿ ಕರಿ ಹರಿಯುವ ಕಾರ್ಯಕ್ರಮ ನಡೆಯಿತು. ಪಟ್ಟಣದ ದರ್ಗಾ ಅಗಸಿ, ತಳಗೇರಿ, ಇಂದಿರಾ ನಗರ, ಆಶ್ರಯ ಕಾಲೋನಿ, ಪೊಲೀಸ್‌ ಸ್ಟೇಷನ್‌ ಏರಿಯಾ, ಆಸರ್‌ ಮೋಹಲ್ಲಾದ ಅಗಸಿ
ಸೇರಿ ಕೆಲವು ವಾರ್ಡ್‌ಗಳಲ್ಲಿ ಸಾಂಪ್ರಾದಾಯಿಕ ಮನೆತನದವರು ತಮ್ಮ ಎತ್ತುಗಳನ್ನು ಮೆರವಣಿಗೆ ಮೂಲಕ ತಂದು ಕರಿ ಹರಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಕರು ಎಳೆ ರಾಸುಗಳನ್ನು ಓಡಿಸುವ ಮೂಲಕ ಕಾರ ಹುಣ್ಣಿಮೆ ಸಂಭ್ರಮ ಹೆಚ್ಚಿಸಿದರು. 

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.