ಪ್ರತಿಭೆ ಪ್ರೋತ್ಸಾಹಿಸುವ ಕಾಯಕ ಅಮೋಘ
Team Udayavani, May 5, 2017, 4:03 PM IST
ಕಲಬುರಗಿ: ರಂಗ ಕಲೆ ಜನಮಾನಸದಲ್ಲಿದ್ದು, ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳಲ್ಲಿ ನಾಟಕ, ಇನ್ನಿತರ ಕಲೆಗಳ ಬಗ್ಗೆ ಆಸಕ್ತಿ ಬೆಳೆಸುವಂತ ಕೆಲಸವನ್ನು ಕಾಯಕ ಫೌಂಡೇಷನ್ ಸಂಸ್ಥೆ ಮಾದರಿಯಾಗಿ ಮಾಡುತ್ತಿದೆ ಎಂದು ಹಿರಿಯ ರಂಗ ಕರ್ಮಿ ಪ್ರೊ| ಪ್ರಭಾಕರ್ ಸಾಥಖೇಡ ಹೇಳಿದರು.
ನಗರದ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ಕಾಲೇಜಿನ ಆವರಣದಲ್ಲಿ ಬುಧವಾರ ರಾತ್ರಿ ನಡೆದ ಕಾಯಕ ಫೌಂಡೇಷನ್ ಎಜುಕೇಷನ್ ಟ್ರಸ್ಟ್, ಆರ್ಟ್‌ಥಿಯೇಟರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಹಾಂತೇಶ ನವಲ್‌ಕಲ್ ರಚಿಸಿರುವ ಮತ್ತು ಅನಿಲ್ ರೇವೂರ ನಿರ್ದೇಶಿಸಿರುವ “ಪಂಚಾವರಂ’ ನಾಟಕದ ಪ್ರಥಮ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಧುನಿಕ »ರಾಟೆಯಲ್ಲಿಯೂ ಮಕ್ಕಳಿಗೆ ನಾಟಕ ಅಭಿರುಚಿ ಮೂಡಿಸುವಂತ ಕೆಲಸ ನಡೆದಿರುವುದು ಅಮೋಘ. ನಾಟಕದಿಂದ ಉತ್ತಮ ಸಂದೇಶಗಳನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಯವರು ನಾಟಕಕ್ಕೆ ಇಷ್ಟೊಂದು ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಬದಲಾವಣೆ ತರಲು ಶ್ರಮಿಸುತ್ತಿರುವುದು ಮಾದರಿಯಾಗಿದೆ.
ಕಾಯಕ ಕಾಲೇಜಿನ ಮಾದರಿಯಲ್ಲಿಯೇ ಇತರರು ರಂಗಕಲೆಯನ್ನು ಮಕ್ಕಳಲ್ಲಿ ಬೆಳೆಸಲು ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಹೊಸತನ ಮೂಡಿಸುವ ವಿಚಾರಧಾರೆ ಬೆಳೆಸುವ ನಿಟ್ಟಿನಲ್ಲಿ ಶಿವರಾಜ ಪಾಟೀಲ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ನಾಟಕವನ್ನು ನಗಾರಿ ಬಾರಿಸುವ ಮೂಲಕ ರಂಗ ಸಮಾಜದ ಸದಸ್ಯರಾದ ಪ್ರಾಧ್ಯಾಪಕಿ ಡಾ| ಸುಜಾತಾ ಜಂಗಮಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಯಕ ಫೌಂಡೇಷನ್ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಶಿವರಾಜ ಟಿ. ಪಾಟೀಲ ಮಾತನಾಡಿ, ನಾಟಕಗಳು, ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಾಗಿರುತ್ತವೆ.
ಇದರಿಂದಾಗಿ ನಾಟಕ ಪ್ರದರ್ಶನ, ರಂಗ ತಾಲೀಮು ನಡೆಸಲು ಸಂಸ್ಥೆ ಬೆಂಬಲಿಸುತ್ತದೆ ಎಂದರು. ಕಾಯಕ ಫೌಂಡೇಷನ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸಪ್ನಾ ಶಿವರಾಜ ಪಾಟೀಲ, ಕಲಬುರಗಿ ಆರ್ಟ್ ಥಿಯೇಟರ್ ಅಧ್ಯಕ್ಷ ಸುನೀಲ ಮಾನ್ಪಡೆ, ನಿರ್ದೇಶಕ ಅನೀಲ ರೇವೂರ, ಕಾನೂನು ಸಲಹೆಗಾರರಾದ ಬಸವರಾಜ ಬಿರಾದಾರ ಸೊನ್ನ ವೇದಿಕೆ ಮೇಲಿದ್ದರು.
ಮುಖಂಡರಾದ ಅಮೃತರೆಡ್ಡಿ ಪಾಟೀಲ ಬಸವಕಲ್ಯಾಣ, ಕಾಯಕ ಫೌಂಡೇಷನ್ ಕಾಲೇಜಿನ ಪ್ರಾಚಾರ್ಯ ವಿನಾಯಕ ಬಾರಡ, ಕಾಯಕ ಫೌಂಡೇಷನ್ ಪ್ರೌಢಶಾಲೆ ಪ್ರಾಚಾರ್ಯ ವಿಜಯಕುಮಾರ ಕಟ್ಟಿಮನಿ, ಪ್ರಾಥಮಿಕ ಶಾಲೆ ಪ್ರಾಚಾರ್ಯರಾದ ವೈಶಾಲಿ ಗೋತಗಿ, ಭಾಸ್ಕರ್, ಗೋವಿಂದ. ಗುರುರಾಜ ಕುಲಕರ್ಣಿ, ಮಹೇಶ, ನಜೀರ್, ಗೋಪಾಲ, ಶೆಗುಪ್ತಾ ನಾಜ್, ಗೌರಿಶಂಕರ ಗೋಗಿ, ಶಿವಯೋಗಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.