ಸುಳ್ಳು ವರದಿ: ಸಿಬಿಐ ತನಿಖೆಗೆ ಆಗ್ರಹಿಸಿ ಧರಣಿ
Team Udayavani, Mar 24, 2017, 4:18 PM IST
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಸೌತ್ ಇಂಡಿಯಾ ಸಿಮೆಂಟ್ ಕಂಪನಿಯನ್ನು ರೋಗಗ್ರಸ್ತ ಕಂಪನಿಯಾಗಿ ಪರಿವರ್ತಿಸುವ ಕುರಿತಂತೆ ಸುಳ್ಳು ವರದಿ ನೀಡಿದ್ದರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಹಾಗೂ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಂಪನಿ ಕಾರ್ಮಿಕರು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ ಸಲ್ಲಿಸಿ, ಸೌತ್ ಇಂಡಿಯಾ ಸಿಮೆಂಟ್ ಕಂಪನಿ 1984ರ ಮಾರ್ಚ್ 30ರಂದು ಕಂಪನಿ ಕಾಯ್ದೆಯಡಿ ನೋಂದಣಿಯಾಗಿದೆ. ಕೇವಲ ಸ್ವಲ್ಪ ದಿನಗಳಲ್ಲಿ ಕಂಪನಿ ಮಾಲಿಕ ವರ್ಗದವರು 1993ರ ಡಿಸೆಂಬರ್ 21ರಂದು ಕಾರ್ಖಾನೆಯನ್ನು ರೋಗಗ್ರಸ್ತ ಕಂಪನಿಯಾಗಿ ಪರಿವರ್ತಿಸಲಾಗಿದೆ (ಬಿಐಎಫ್‌ಆರ್) ಎಂದು ಅರ್ಜಿ ಸಲ್ಲಿಸಿದ್ದಾರೆ.
ಕಂಪನಿ ಸಲ್ಲಿಸಿದ ಸುಳ್ಳು ವರದಿಯಿಂದಾಗಿ ರೋಗಗ್ರಸ್ತ ಕಾಯ್ದೆ 15(1) 1985ರ ಅನ್ವಯ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು. ಯಾವುದೇ ಕಾರಣವಿಲ್ಲದೆ, ಸರ್ಕಾರದ ಪರವಾನಿಗೆ ಇಲ್ಲದೆ ಕಂಪನಿಯನ್ನು ಮುಚ್ಚಿ ಕಾರ್ಮಿಕರನ್ನು ದಿವಾಳಿ ಎಬ್ಬಿಸಿದ್ದಾರೆ.
ಆದ್ದರಿಂದ ಕಾರ್ಮಿಕರ ಕಾಯ್ದೆಯಡಿಯಲ್ಲಿ ಯುಎಸ್33-ಸಿ(1) ಐ.ಡಿ, ಕಾಯ್ದೆ 1947, ಕಾರ್ಮಿಕರ ಬಾಕಿ ವೇತವನ್ನು ಸುಮಾರು 35 ಲಕ್ಷ ರೂ. ನೀಡಲು ಉಪ ಕಾರ್ಮಿಕ ಆಯುಕ್ತರು ಆದೇಶಿಸಿದ್ದು, ಜಿಲ್ಲಾಧಿಕಾರಿಗಳು ಕರ್ನಾಟಕ ಭೂ ಕಾಯ್ದೆಯಡಿ ವಸೂಲಾತಿ ಮಾಡಿ ಕಾರ್ಮಿಕರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಮಾಲಿಕ ವರ್ಗದವರು ಕಾರ್ಮಿಕರಿಗೆ ಬರಬೇಕಾದ ಭವಿಷ್ಯ ನಿಧಿ ಹಣ ಸುಮಾರು 11,87,383.80ರೂ. ಗಳನ್ನು ಇದೆ. ಇದರಿಂದ ಜಿಲ್ಲಾ ಭವಿಷ್ಯ ನಿಧಿ ಆಯುಕ್ತರು ಬಂಧನದ ವಾರೆಂಟ್ ಹೊರಡಿಸಿದ್ದರು. ಕಾರ್ಮಿಕರ ಹಣ ಸಂದಾಯ ಮಾಡದೇ ಇದ್ದುದರಿಂದ ಈ ವಾರೆಂಟ್ ಜಾರಿಯಾಗಿತ್ತು. ಮಾಲಿಕರು ಹೈಕೋಟ್ ìಗೆ ಮೊರೆ ಹೋದರು.
ಆ ಸಂದರ್ಭದಲ್ಲಿ ಮಾಲಿಕ ವರ್ಗದವರು 4ಲಕ್ಷ ರೂ.ಗಳನ್ನು ನಾಲ್ಕು ಕಂತುಗಳಲ್ಲಿ ತುಂಬುವುದಾಗಿ ಒಪ್ಪಿಕೊಂಡಿದ್ದರು. ಕಳೆದ 2001ರಿಂದ ಇಲ್ಲಿಯವರೆಗೆ ಕಾರ್ಮಿಕರಿಗೆ ಬರಬೇಕಾದ ಹಣವನ್ನು ತುಂಬಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭವಿಷ್ಯನಿಧಿ ವಿಭಾಗದ ಆಯುಕ್ತರ ಗಮನಕ್ಕೆ ಎರಡು ಬಾರಿ ತಂದರೂ ನೆಪ ಹೇಳಿ ಕಾರ್ಮಿಕರಿಗೆ ದ್ರೋಹ ಮಾಡಲಾಗುತ್ತಿದೆ.
ಕಾರ್ಖಾನೆಯವರು 645.52 ಲಕ್ಷ ರೂ.ಗಳನ್ನು ಬೇರೆ, ಬೇರೆ ಬ್ಯಾಂಕುಗಳಿಂದ ಸಾಲ ಪಡೆದು ಕಾರ್ಖಾನೆಯಲ್ಲಿ ವಿನಿಯೋಗಿಸದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಂಪೆನಿಯ ಕಾರ್ಮಿಕ ಒಕ್ಕೂಟದ (ಎಐಟಿಯುಸಿ) ಮುಖಂಡ ಡಾ| ಸಜ್ಜನ್ ಮಲ್ಲೇಶಿ, ಅಧ್ಯಕ್ಷ ಜಬ್ಟಾರಖಾನ್, ಉಪಾಧ್ಯಕ್ಷ ಜೈರಾಮ ರಾಠೊಡ, ಗುರುನಾಥ ಪಂಚಾಳ, ಮಹಿಬೂಬ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಶರಣು ಪೂಜಾರಿ, ರಾಮಲಿಂಗಯ್ಯ ನ್ಯಾಮ್, ವಿಠೊಬಾ ಮುಂತಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.