ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ರೈತರು ಭಾಗಿ
Team Udayavani, Jan 11, 2019, 6:25 AM IST
ಆಳಂದ: ವಿಜಯಪುರ ಸಮೀಪದ ಕಗ್ಗೋಡ ಶ್ರೀರಾಮನಗೌಡ ಬಾ ಪುಗೌಡ ಪಾಟೀಲ (ಯತ್ನಾಳ), ಗೋರಕ್ಷ ಆವರಣದಲ್ಲಿ ಡಿ. 24ರಿಂದ 31ರ ವರೆಗೆ ಭಾರತ ವಿಕಾಸ ಸಂಗಮ, ವಿಜಯಪುರ ಶ್ರೀ ಸಿದ್ಧೇಶ್ವರ ಸಂಸ್ಥೆ, ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟ ಆಶ್ರಯದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ-5ರಲ್ಲಿ ತಾಲೂಕಿನ ಅನೇಕ ರೈತರು ಭೇಟಿ ನೀಡಿ ಕೃಷಿ, ತಂತ್ರಜ್ಞಾನ, ವಿಜ್ಞಾನ ಹೀಗೆ ಅನೇಕ ರೀತಿಯ ಮಾಹಿತಿ ಕಲೆಹಾಕಿದರು.
ಕ್ಷೇತ್ರ ಶಾಸಕ ಸುಭಾಷ ಗುತ್ತೇದಾರ ಆಯೋಜಿತ ಆಯ್ದ ರೈತರ ಪ್ರವಾಸಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರತಿನಿಧಿ ಹಾಗೂ ಕೃಷಿ ಪಂಡಿತ ಆದಿನಾಥ ಹೀರಾ, ಶ್ರೀಮಂತ ನಾಮಣೆ ತಡಕಲ್ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರು ಉತ್ಸವದಲ್ಲಿ ಆಯೋಜಿಸಿದ್ದ ಕೃಷಿ ಸಂಗಮದಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಮಾಹಿತಿ ಕಲೆಹಾಕಿದರು.
ಕೃಷಿ ಸಂಗಮವು ರೈತ, ರೈತ ಮಹಿಳೆ, ಗೋವು, ಸಾವಯವ ಕೃಷಿ, ನೀರು ಪ್ರಕೃತಿಗೆ ಮೀಸಲು ಭಾರತೀಯ ಕೃಷಿ ಪದ್ಧತಿ, ಗೋವು ಸಂವರ್ಧನೆ, ಕಡಿಮೆ ಬಂಡವಾಳದಿಂದ ಹೆಚ್ಚಿನ ಸ್ವಾಸ್ಥ್ಯವರ್ಧಕ ಇಳುವರಿ, ಆರ್ಥಿಕ ಸ್ವಾವಲಂಬನೆ ಪಡೆಯುವ ತಂತ್ರಗಳ ಆವಿಷ್ಕಾರ ಮಾಹಿತಿ, ಕೃಷಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳ ಕುರಿತು ವ್ಯವಹಾರಿಕ ರೂಪದ ಪ್ರಾತ್ಯಕ್ಷಿಕೆ ಅನುಭವ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.