ರೈತರ ಧರಣಿಗೆ ಮಠಾಧಿಧೀಶರ ಬೆಂಬಲ


Team Udayavani, Dec 28, 2020, 4:06 PM IST

ರೈತರ ಧರಣಿಗೆ ಮಠಾಧಿಧೀಶರ ಬೆಂಬಲ

ಕಲಬುರಗಿ: ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದುಆಗ್ರಹಿಸಿ ಮತ್ತು ದಿಲ್ಲಿ ಚಲೋ ರೈತ ಹೋರಾಟ ಬೆಂಬಲಿಸಿ ನಗರದಲ್ಲಿ ನಡೆಯುತ್ತಿರುವರೈತರ ಹಕ್ಕೊತ್ತಾಯಗಳಿಗಾಗಿ ಧರಣಿಗೆ ವಿವಿಧ ಮಠಾಧಿಧೀಶರು ರವಿವಾರ ಬೆಂಬಲ ಸೂಚಿಸಿ, ಧರಣಿಯಲ್ಲಿ ಪಾಲ್ಗೊಂಡರು.

ಇಲ್ಲಿನ ಜಗತ್‌ ವೃತ್ತದಲ್ಲಿ ಕರ್ನಾಟಕಪ್ರಾಂತ ಕೃಷಿ ಕಾರ್ಮಿಕರು ಸಂಘಟನೆ, ಜನವಾದಿ ಮಹಿಳಾ ಸಂಘಟನೆಗಳನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು,ರವಿವಾರ 14 ದಿನಗಳನ್ನು ಪೂರೈಸಿದೆ. ರೈತಪರವಾದ ಈ ಧರಣಿಯಲ್ಲಿ ಸುಲಫಲಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾ ಸ್ವಾಮೀಜಿ, ಸೊನ್ನದ ಶಿವಾನಂದ ಮಹಾಸ್ವಾಮಿ, ಉಸ್ತರಗಿ ಕೋರಣೇಶ್ವರ ಮಹಾಸ್ವಾಮಿ, ಪ್ರಭುಶ್ರೀ ಅಮ್ಮನವರು,ಗುರುಮಠಕಲ್‌ ಖಾಸಾ ಮಠದ ಶ್ರೀಗಳುಭಾಗವಹಿಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಡಾ| ಸಾರಂಗಧರ ಮಹಾ ಸ್ವಾಮೀಜಿ ಮಾತನಾಡಿ, ಜಗತ್ತು ನಿಂತಿರುವುದು ನೇಗಿಲಮೇಲೆ. ರೈತರು ನಮ್ಮೆಲ್ಲರ ಹೊಟ್ಟೆಗೆ ಅನ್ನ ಕೊಟ್ಟವರು. ಅನ್ನ ಕೊಟ್ಟವರ ವಿರುದ್ಧ ಕಾನೂನು ತರುವುದು ತಪ್ಪು. ಪ್ರಧಾನಿ,ರಾಷ್ಟ್ರಪತಿಯೂ ಹೊಟ್ಟೆಗೆ ಉಣ್ಣುವುದು ರೈತರು ಬೆಳೆದ ಅನ್ನವನ್ನೇ. ಹೀಗಿದ್ದಾಗ ರೈತವಿರೋಧಿ ಕಾಯ್ದೆಗಳನ್ನು ತರುವುದೆಂದರೆ ಅದು ದೇಶದ ವಿರುದ್ಧವೇ ಆಗುವುದು. ಆದ್ದರಿಂದ ಸರ್ಕಾರ ರೈತರ ಮಾತು ಕೇಳಬೇಕು ಎಂದರು.

ಮಠಾಧಿಧೀಶರು ಈ ಹೊತ್ತಿನಲ್ಲಿ ರೈತರ ಜೊತೆಗೆ ನಿಲ್ಲಬೇಕಾದದ್ದು ಧರ್ಮ. ಶರಣ ಸಂಸ್ಕೃತಿ ಎಂದರೆ ಕಾಯಕ ಸಂಸ್ಕೃತಿ. ಅದುವೇ ಕೃಷಿ ಸಂಸ್ಕೃತಿ. ಈಗ ಕೃಷಿಸಂಸ್ಕೃತಿಯನ್ನೇ ನಾಶ ಮಾಡುವಂತಹ ಕಾನೂನು ಬರುವುದಾದರೆ ನಾವೆಲ್ಲರೂ ಅದನ್ನು  ಧಿಕ್ಕರಿಸಬೇಕೆಂದು ಕೋರಣೇಶ್ವರ ಮಹಾಸ್ವಾಮೀಜಿ ಹೇಳಿದರು.

ಕೃಷಿಕರೊಂದಿಗೆ ನಿಲ್ಲುವುದು ಲಿಂಗಾಯತ ಮಠಗಳ ಪರಂಪರೆಯೂ ಆಗಿದೆ. ಕ್ರಿ.ಶ. 16ನೇ ಶತಮಾನದಲ್ಲಿ ಮೈಸೂರು ಸಂಸ್ಥಾನರೈತರ ಮೇಲೆ ತೆರಿಗೆ ಹೊರೆ ಹಾಕಿದ್ದನ್ನುಮೊದಲಿಗೆ ವಿರೋಧಿಸಿದವರು ಲಿಂಗಾಯತ ಸ್ವಾಮಿಗಳು. ಅಂದು ಅನೇಕ ಸ್ವಾಮಿಗಳ ಬಲಿದಾನವೂ ಆಯಿತು. ಹೀಗೆ ಜೀವದ ಹಂಗು ತೊರೆದು ರೈತರೊಂದಿಗೆ ನಿಂತಜೀವಪರ ನ್ಯಾಯದ ಪರಂಪರೆಯು ನಮ್ಮದಾಗಿದೆ. ಆದ್ದರಿಂದಲೇ ನಾವು ರೈತರ ಪರವಾಗಿ ಈ ಧರಣಿಗೆ ಬೆಂಬಲಿಸಿದ್ದೇವೆ ಎಂದರು.

ಧರಣಿಯಲ್ಲಿ ಮುಖಂಡರಾದ ಭೀಮ ಶೆಟ್ಟಿ ಯಂಪಳ್ಳಿ, ಶರಣಬಸವ ಮಮಶೆಟ್ಟಿ,ಕೆ.ನೀಲಾ, ಆರ್‌.ಕೆ. ಹುಡುಗಿ, ಅಲ್ತಾಫ್‌ಇನಾಮದಾರ, ಶ್ರೀಮಂತ ಬಿರಾದಾರ, ಜಾವೇದ್‌ ಹುಸೇನ್‌ ಭಾಗವಹಿಸಿದ್ದರು.

ಟಾಪ್ ನ್ಯೂಸ್

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.