ಫಸಲ್ ಬಿಮಾ; 50 ಸಾವಿರ ನೋಂದಣಿ ಗುರಿ
Team Udayavani, Jul 22, 2022, 3:10 PM IST
ಆಳಂದ: ರಾಜ್ಯದಲ್ಲೇ ಮೊದಲ ಹಂತವಾಗಿ ಕಲಬುರಗಿ ವಿಭಾಗದ 10 ತಾಲೂಕಿನಲ್ಲಿ ಅಂಚೆ ಇಲಾಖೆ ಮೂಲಕ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 50 ಸಾವಿರ ರೈತರ ನೋಂದ ಣಿಯ ಗುರಿ ಹೊಂದಲಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಬೆಂಗಳೂರಿನ ದಕ್ಷಿಣ ವಲಯ ರಾಜ್ಯ ನಿರ್ದೇಶಕಿ ಕೆ. ಆರೂರಾ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಅಂಚೆ ಇಲಾಖೆಯಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಾಲೂಕಿನ ರೈತರಿಂದ ಬೆಳೆ ವಿಮೆ ಉಚಿತ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಬಾರಿಗೆ ಫಸಲು ಭೀಮಾ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಪ್ರತಿ ತಾಲೂಕಿಗೆ ಐದು ಸಾವಿರ ಗುರಿಯಂತೆ ಒಟ್ಟು 50ಸಾವಿರ ರೈತರ ನೋಂದಣಿ ಅಭಿಯಾನದ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಬೆಳೆ ವಿಮೆ ಖಾಸಗಿ ಕಂಪನಿಗಿಂತಲೂ ಪ್ರಧಾನ ಮಂತ್ರಿ ಫಸಲು ಭೀಮಾ ಸರ್ಕಾರದ ಬೆಳೆ ವಿಮೆ ಯೋಜನೆಯಾಗಿದ್ದು, ಗ್ರಾಮೀಣ ರೈತರಲ್ಲಿ ಈ ವಿಮೆ ಕೈಗೊಳ್ಳಲು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಳಂದ ತಾಲೂಕಿನಿಂದ ಮೊದಲ ದಿನದಲ್ಲೇ ಒಂದು ಸಾವಿರ ವಿಮೆ ಕೈಗೊಳ್ಳುವಂತೆ ಅರ್ಜಿ ಸಲ್ಲಿಕೆಯಾಗಿವೆ. ವಿಮೆ ಕೈಗೊಳ್ಳಲು ಜು.31 ಕೊನೆ ದಿನವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಬೆಳೆ ವಿಮೆ ನೋಂದಾಯಿತ ರೈತರಿಗೆ ವಿಮಾ ಕಂತು ಪಾವತಿ ರಸೀದಿ ನೀಡಲಾಯಿತು. ಸ್ಥಳೀಯ ಅಂಚೆ ಪೋಸ್ಟ್ ಮಾಸ್ಟರ್ ಗುರುರಾಜ ಕುಲಕರ್ಣಿ ಮಾತನಾಡಿ, ಇಲಾಖೆ ವಹಿಸಿದ್ದ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಿಬ್ಬಂದಿ ಕಾರ್ಯಪ್ರವರ್ತರಾಗಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಅಂಚೆ ಕಚೇರಿ ಇಲ್ಲದೇ ಸಿಬ್ಬಂದಿಗೆ ಮತ್ತು ಗ್ರಾಹಕರಿಗೆ ತೊಂದರೆ ಎದುರಾಗಿದೆ. ಸ್ವಂತ ಕಟ್ಟಡ ನಿರ್ಮಾಣ ಕೈಗೊಳ್ಳಬೇಕು ಎಂದು ಮೇಲಧಿ ಕಾರಿಗಳಿಗೆ ಮನವಿ ಮಾಡಿದರು.
ಬೀದರ ಹಾಗೂ ಜಿಲ್ಲಾ ಅಂಚೆ ಅಧೀಕ್ಷಕ ಮಹ್ಮದ್ ಆಸೀಫ್ ಮಾತನಾಡಿ, ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ವಿಮಾ ನೋಂದಣಿ ನಡೆಯಲಿದೆ. ನಿಗದಿತ ಅವಧಿಯೊಳಗೆ ವಿಮೆ ಕೈಗೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.
ತಾಲೂಕಿನಿಂದ ಬುಧವಾರದಿಂದ ಆರಂಭಗೊಂಡು ಶುಕ್ರವಾರದ ವರೆಗೆ ನೋಂದಣಿ ಅಭಿಯಾನ ನಡೆಸಿ ಉಚಿತವಾಗಿ ರೈತರ ಬೆಳೆವಿಮೆ ನೋಂದಣಿ ಬಳಕವೂ ಜು.31ರ ವರೆಗೆ ಅಂಚೆ ಕಚೇರಿಯಲ್ಲಿ ನೋಂದಣಿ ನಡೆಯಲಿದೆ ಎಂದರು.
ಸ್ಥಳೀಯ ಅಂಚಿ ಸಿಬ್ಬಂದಿ ಲಿಂಗರಾಜ ಬಿರಾದಾರ, ಗಂಜೆಂದ್ರ ಹೂಗಾರ, ರೇವಣಸಿದ್ಧ ಪೂಜಾರಿ, ಗುರುಬಾಯಿ ಸಂಗೋಳಗಿ, ಸಿದ್ಧಣ್ಣಾ ಪಾಟೀಲ, ಮಲ್ಲಿಕಾರ್ಜುನ ತಳವಾರ, ಸತೀಶ ಬಿರಾದಾರ, ಗೌರಿ ನಿಲೂರ, ಸುಶ್ಮಿತಾ ಹತ್ತಿ, ವಿಜಯಲಕ್ಷ್ಮೀ, ಸೌಮ್ಯಾ, ಸ್ನೇಹಾ, ಜಯಶ್ರೀ ಚಿಂಚನೂರ, ರೈತ ಪೀರಪ್ಪ ಜಮಾದಾರ, ಶರಣಬಸಪ್ಪ ನೆಲ್ಲೂರ ಹಾಗೂ ತಾಲೂಕಿನ ಎಲ್ಲ ಗ್ರಾಮದ ಅಂಚೆ ಪಾಲಕರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಸಿಬ್ಬಂದಿ ಲಕ್ಷ್ಮೀಕಾಂತ ಕೊಡ್ಲಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.