ಕೆರೆ ಒಡ್ಡು ಒಡೆಯುವ ಭೀತಿ-6 ವರ್ಷವಾದ್ರೂ ದುರಸ್ತಿಯಿಲ್ಲ
Team Udayavani, Aug 10, 2022, 4:57 PM IST
ಅಫಜಲಪುರ: ನೂರಾರು ಎಕರೆ ಜಮೀನುಗಳಿಗೆ ನೀರೊದಗಿಸುವ, ಜಲಮೂಲಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಪಟ್ಟಣದ ಕೆರೆ ಒಡ್ಡಿಗೆ ಬಿರುಕು ಬಿಟ್ಟು ಆರು ವರ್ಷ ಗತಿಸಿದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಕಳೆದ ಆರು ವರ್ಷಗಳ ಹಿಂದೆ ಕೆರೆ ಒಡ್ಡಿಗೆ ಬಿರುಕು ಬಿಟ್ಟು, ನೆಲ ಕುಸಿದು ಆತಂಕ ಹೆಚ್ಚಿಸಿತ್ತು. ಆಗಿನಿಂದ ಈಗಿನವರೆಗೆ ಬಿರುಕು ಬಿಟ್ಟಾಗಲೊಮ್ಮೆ ಮುರುಮ್ ಹಾಕಲಾಗುತ್ತಿದೆಯೇ ವಿನಃ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿಲ್ಲ.
ಲಕ್ಷಾಂತರ ರೂ. ಖರ್ಚು: ಕೆರೆ ಒಡ್ಡಿಗೆ ಬಿರುಕು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆಯಾದರೂ ಶಾಶ್ವತ ಪರಿಹಾರ ಮಾತ್ರ ದೊರಕುತ್ತಿಲ್ಲ.
ಒಡ್ಡು ಒಡೆಯುವ ಭೀತಿ: ಕಳೆದ ಆರು ವರ್ಷದ ಹಿಂದೆ ಕೆರೆ ಒಡ್ಡಿಗೆ ಬಿರುಕು ಬಿಟ್ಟು ಆತಂಕ ಹೆಚ್ಚಿಸಿತ್ತು. ಸಣ್ಣ ನೀರಾವರಿ ಇಲಾಖೆಯವರು ಆಗಿನಿಂದ ಇಲ್ಲಿಯವರೆಗೆ ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಇಷ್ಟೊತ್ತಿಗೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯ ಒಡ್ಡು ಒಡೆಯುವ ಹಂತಕ್ಕೆ ಬಂದಿದೆ.
ಒಂದು ವೇಳೆ ಕೆರೆ ಒಡೆದರೆ ಇಡೀ ಪಟ್ಟಣವೇ ಜಲಾವೃತವಾಗುವುದು ನಿಶ್ಚಿತ. ಕೆರೆ ಒಡ್ಡಿಗೆ ಬಿರುಕು ಬಿಟ್ಟಾಗಲೊಮ್ಮೆ ಮುರುಮ್ ಹಾಕಿಸಿ ಕೈ ತೊಳೆದುಕೊಳ್ಳುತ್ತಿರುವ ಬದಲು ತಜ್ಞರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಯಿಂದ ಯಾವುದೇ ಅಪಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಮಳೆಯಿಂದಾದ ಹೊಡೆತ ತಡೆದುಕೊಳ್ಳಲು ಪ್ಲಾಸ್ಟಿಕ್ ಮುಚ್ಚಲಾಗಿದೆ. ಇದು ಎಷ್ಟು ದಿನ ಮಳೆಯ ರಭಸ ತಡೆದುಕೊಳ್ಳುತ್ತದೆ ಎಂಬುದು ತಿಳಿಯುತ್ತಿಲ್ಲ.
ಕೆರೆಯ ಒಡ್ಡು (ಏರಿಯು) ಬಿರುಕು ಬಿಟ್ಟ ಸ್ಥಳದಲ್ಲಿ ಮಳೆಯ ನೀರು ಹೋಗಬಾರದೆಂದು ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ರವಿವಾರದಂದು ಮುಖ್ಯ ಎಂಜಿನಿಯರ್ ಅವರಿಗೆ ಭೇಟಿಯಾಗಿ ಕೆರೆಯ ಬಿರುಕು ಬಿಟ್ಟ ಸ್ಥಳದಲ್ಲಿ ಮುರುಮ್ ಹಾಕಿದ ಸ್ಥಳದಲ್ಲಿ ಮತ್ತೆ ಬಿರುಕು ಬಿಡುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದೇನೆ. ಆದರೆ ಮುಖ್ಯ ಎಂಜಿನಿಯರ್ ಹೇಳಿದ ಹಾಗೆ ಮುರುಮ್ ಎಷ್ಟು ಇಳಿಯುತ್ತೆ ಇಳಿಯಲು ಬಿಡಿ. ಆದರೆ ಕೆರೆಗೆ ಹೆಚ್ಚುವರಿ ಬರುವ ಹೆಚ್ಚುವರಿ ನೀರು ಹೊರಗೆ ಹರಿದು ಬಿಡಲು ಹೇಳಿದ್ದಾರೆ. ಅವರು ಹೇಳಿದ ಹಾಗೆ ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲಾಗುತ್ತಿದೆ. -ಶಾಂತಪ್ಪ ಜಾಧವ, ಎಇಇ, ಸಣ್ಣ ನೀರಾವರಿ ಇಲಾಖೆ, ಅಫಜಲಪುರ
ಕೆರೆ ಒಡ್ಡು ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯವರು ಮಾಡಬೇಕು. ಪುರಸಭೆ ವತಿಯಿಂದ ಈ ಕುರಿತು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ. -ಸುರೇಶ ಬಬಲಾದ, ಮುಖ್ಯಾಧಿಕಾರಿ, ಪುರಸಭೆ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.