ಹೆಣ್ಣು ಶಿಶು ಮಾರಾಟ ಕಳವಳಕಾರಿ
Team Udayavani, Mar 16, 2018, 12:03 PM IST
ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಭಾಗದ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದು ಲಂಬಾಣಿ ಸಮಾಜಕ್ಕೆ ಅತ್ಯಂತ ಕಳಂಕ ತರುವಂತದ್ದಾಗಿದೆ ಎಂದು ಗೊಬ್ಬೂರವಾಡಿ ಪೂಜ್ಯ ಬಳಿರಾಮ ಮಹಾರಾಜ ಹೇಳಿದರು.
ತಾಲೂಕಿನ ಶಾದಿಪುರದಲ್ಲಿ ಗುರುವಾರ ನೂತನ ಸಂತ ಶ್ರೀ ಸೇವಾಲಾಲ್ ಮಹಾರಾಜರ ಪುತ್ಥಳಿ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಹೆಣ್ಣು ಗಂಡು ಎಂಬ ಭೇದಭಾವ ಮಾಡಬಾರದು. ಎಷ್ಟೇ ಬಡತನ ಇದ್ದರೂ ಮಕ್ಕಳನ್ನು ಕಷ್ಟಪಟ್ಟು ಸಾಕಬೇಕು ಎಂದು
ಹೇಳಿದರು.
ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರುವಂತ ಕೆಲಸ ಮಾಡಬೇಡಿ. ಸ್ವಾಭಿಮಾನ ಮತ್ತು ಮಾನವೀಯತೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕ್ರಿಶ್ಚಿಯನ್ ಮಿಶನರಿಗಳು ಲಂಬಾಣಿ ಸಮಾಜದವರಿಗೆ ಆಸೆ ಅಮಿಷ ತೋರಿಸಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಳಿಸುತ್ತಿವೆ.
ಯಾರು ಮತಾಂತರಗೊಳ್ಳಬಾರದು. ಇಲ್ಲಿಯ ವರೆಗೆ 6 ಸಾವಿರ ಕುಟುಂಬಗಳು ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡಿವೆ. ಬಾಗಲಕೋಟೆ, ಬೀಳಗಿ, ಹರಪನಹಳ್ಳಿ ತಾಲೂಕಿನಲ್ಲಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಬಂಜಾರ ಸಮಾಜಕ್ಕೆ
ಕರೆ ತರಲಾಗಿದೆ ಎಂದು ಹೇಳಿದರು.
ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್ ಮಾತನಾಡಿ, ನಾನು ಚಿಂಚೋಳಿ ಶಾಸಕನಾಗಿ ಆಯ್ಕೆಯಾದ ನಂತರ ಎಲ್ಲ ಸಮಾಜದವರಿಗೆ ಸರಕಾರದ ಸೌಲಭ್ಯ ಒದಗಿಸಿ ಕೊಟ್ಟಿದ್ದೇನೆ. ಕೆಲವರು ಕೇವಲ ಲಂಬಾಣಿ ತಾಂಡಾದವರಿಗೆ ಸವಲತ್ತು ಒದಗಿಸಿ ಕೊಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಶುದ್ಧ ತಪ್ಪು. ತಾಲೂಕಿನ 140 ತಾಂಡಾಗಳಿಗೆ ಮೂಲ ಸೌಕರ್ಯ ಒದಗಿಸಿ ಕೊಡಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ. ನನಗೆ ರಾಜಕೀಯ ಶಕ್ತಿ ಸಿಕ್ಕಿದೆ. ಸರಕಾರದಿಂದ ಲಂಬಾಣಿ ಸಮಾಜಕ್ಕೆ ಅನೇಕ ಸೌಲಭ್ಯಗಳು ಸಿಕ್ಕರು ಸಹ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ನಡೆಯುತ್ತಿವೆ ಎಂದು ಮರ್ಯಾದೆ ಹಾಳಾಗುತ್ತಿದೆ.
ಇನ್ನು ಇಂತಹ ಘಟನೆ ನಡೆಯಬಾರದು ಎಂದು ಮನವಿ ಮಾಡಿದರು.
ಬೇಟಿ ಪಡಾವೋ ಬೇಟಿ ಬಚಾವೋ ರಾಜ್ಯ ಸಂಚಾಲಕ ಸುಭಾಶ ರಾಠೊಡ, ತಾಂಡೂರ ಭೂ ಕೈಲಾಶ ವಾಸು ಪವಾರ, ರವಿರಾಜ ಕೊರವಿ ಮಾತನಾಡಿದರು.
ಜಿಪಂ ಸದಸ್ಯ ಹೀರುಬಾಯಿ ಜಾಧವ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಬಂಜಾರಾ ಸಮಾಜ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪವಾರ, ಪುರಸಭೆ ಸದಸ್ಯ ರಾಜು ಪವಾರ, ಶಾಮರಾವ ರಾಠೊಡ, ಶಾದಿಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಪೂಜಾರಿ, ಉಪಾಧ್ಯಕ್ಷ ಸಂಜೀವ ಪವಾರ, ಪಾಂಡು ಪೂಜಾರಿ, ಶಂಕರ ಪವಾರ, ತಾರಾಸಿಂಗ ಜಾಧವ್ ಇದ್ದರು. ರಾಮಶೆಟ್ಟಿ ರಾಠೊಡ ಸ್ವಾಗತಿಸಿದರು. ವಿಜಯಕುಮಾರ ರಾಠೊಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.