ನೀರು ಶುದ್ಧೀಕರಣಕ್ಕೆ ಫಿಲ್ಟರ್ ಮೀಡಿಯಾ
ದಶಕದ ನಂತರ ದುರಸ್ತಿಗೊಳ್ಳುತ್ತಿದೆ ಘಟಕ
Team Udayavani, Oct 12, 2020, 4:40 PM IST
ವಾಡಿ: ಪಟ್ಟಣದ ಪುರಸಭೆಗೆ ಸೇರಿದ ಕುಂದನೂರು ಭೀಮಾನದಿ ದಡದ ಜಲ ಶುದ್ಧೀಕರಣ ಘಟಕಕ್ಕೆಮರುಜೀವ ನೀಡಲು ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ.
ಕೆಟ್ಟು ಹೋಗಿದ್ದ ಘಟಕದ ನೀರು ಶುದ್ಧೀಕರಣದ ತುಕ್ಕು ಹಿಡಿದ ಯಂತ್ರಗಳನ್ನು ಬದಲಿ ಹೊಸ ಯಂತ್ರೋಪಕರಣಗಳನ್ನುಅಳವಡಿಸಲಾಗಿದೆ. ಕಳೆದ ಎರಡು ತಿಂಗಳಿಂದ ಶುಚಿತ್ವ ಕಾರ್ಯಮುಂದುವರೆದಿದ್ದು, ವಿವಿಧ ರಾಸಾಯನಿಕ ದಾಸ್ತಾನು ತರಿಸಿಘಟಕದಲ್ಲಿ ಶೇಖರಣೆ ಮಾಡಲಾಗಿದೆ. ಬೃಹತ್ ಜಲ ಸಂಗ್ರಹಗಾರಗಳನ್ನುಶುಚಿಗೊಳಿಸಲಾಗಿದೆ. ಕಲುಷಿತನೀರನ್ನು ಶ್ವೇತವರ್ಣಕ್ಕೆ ತಿರುಗಿಸಲು ಪ್ರಮುಖವಾಗಿ ಬೇಕಾದ ಬ್ಲೀಚಿಂಗ್‌ಫೌಡರ್ ಮತ್ತು ಆಲಂ ತುಂಡುಗಳರಾಶಿಯೇ ಬಂದು ಬಿದ್ದಿದ್ದು,ಸ್ಥಳೀಯರ ದಶಕಗಳ ಶುದ್ಧ ನೀರಿನಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.
ಅಗತ್ಯ ರಾಸಾಯನಿಕವಿಲ್ಲದೆ, ಗುಣಮಟ್ಟದ ಯಂತ್ರೋಪಕರಣಗಳು ಇಲ್ಲದೆ ಹಾಗೂ ಟ್ರ್ಯಾಕ್ಟರ್‌ಗಟ್ಟಲೇ ಹೂಳು ತುಂಬಿದ್ದ ನೀರು ಸಂಗ್ರಹಗಾರಗಳ ಶುಚಿತ್ವವಿಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ನೀರು ಶುದ್ಧೀಕರಣ ಘಟಕವೀಗ ನವೀಕರಣ ಗೊಳ್ಳುತ್ತಿದೆ. ಕಾಂಗ್ರೆಸ್‌ನ ಝರೀನಾಬೇಗಂ ಅವರು ಪುರಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶುದ್ಧ ನೀರಿನ ಘಟಕ ದುರಸ್ತಿಗೆ ಮುಂದಾಗಿರುವುದೇ ಅಗತ್ಯ ಪರಿಕರಗಳು ಖರೀದಿಯಾಗಲು ಸಾಧ್ಯವಾಗಿದೆ ಎನ್ನಬಹುದು. ನೀರು ಫಿಲ್ಟರ್ ಮಾಡಲು ಅತ್ಯಗತ್ಯವಾಗಿ ಬೇಕಾದ ನಾಲ್ಕು ರೂಪದ ಮರಳು ಇಷ್ಟುದಿನ ಹೂಳಿನಲ್ಲಿ ಹೂಳಾಗಿ ಹೋಗಿತ್ತು.
ಈಗ ಮತ್ತೆ ಹೊಸದಾಗಿ ಸ್ಯಾಂಡ್ ಮೀಡಿಯಾ ತರಿಸಲಾಗಿದ್ದು, ಘಟಕದಲ್ಲಿ ಮರಳು ತುಂಬುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ವಾಡಿ ಪಟ್ಟಣದ ಜನತೆಗೆ ಕುಡಿಯಲು ಅತ್ಯಂತ ಶುದ್ಧ ನೀರು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಮುಖ್ಯಾ ಧಿಕಾರಿ ವಿಠuಲ ಹಾದಿಮನಿಹಾಗೂ ಕಿರಿಯ ಅಭಿಯಂತರರಾಜಕುಮಾರ ಅಕ್ಕಿ ಅವರು. ಇದ್ದೂ ಇಲ್ಲದಂತಿದ್ದ ಜಲ ಶುದ್ಧೀಕರಣ ಘಟಕ ಬಹಳ ವರ್ಷಗಳ ನಂತರ ಹೊಸ ರೂಪ ಪಡೆದುಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಫಿಲ್ಟರ್ ನೀರು ಉತ್ಪತ್ತಿಯಾಗಲು ಯೋಗ್ಯವಲ್ಲದಷ್ಟು ಘಟಕ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಯಾವುದೇ ಯಂತ್ರಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಫಿಲ್ಟರ್ ಮೀಡಿಯಾ ಮರಳು ಹೂಳಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.ರಾಸಾಯನಿಕಗಳು ಇರಲಿಲ್ಲ. ನೀರು ಸಂಗ್ರಹಗಾರಗಳು ಹೂಳು ತುಂಬಿಕೊಂಡಿದ್ದವು. ಹೀಗಾಗಿ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಪರಿಶೀಲನೆ ನಡೆಸಿದ ನಂತರ ವಾಸ್ತವ ಸ್ಥಿತಿ ನನಗೆ ತಿಳಿಯಿತು. ಹೀಗಾಗಿ ನೀರು ಶುದ್ಧೀಕರಣ ಘಟಕವನ್ನು ತಳಮಟ್ಟದಿಂದ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದೇವೆ. ನಗರದ ನಾಲ್ಕು ಓವರ್ ಹೆಡ್‌ಟ್ಯಾಂಕ್‌ಗಳ ಹೂಳು ತೆರವುಗೊಳಿಸಲು ಪುರಸಭೆ ಖಜಾನೆಯಲ್ಲಿ ಅನುದಾನದಕೊರತೆಯಿದ್ದು, 14ನೇ ಹಣಕಾಸಿನಲ್ಲಿ 8 ಲಕ್ಷ ರೂ. ಅನುದಾನ ಬಳಕೆಮಾಡಿಕೊಳ್ಳಲು ಅನುಮೋದನೆ ನೀಡುವಂತೆ ಜಿಲ್ಲಾ ಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. -ಝರೀನಾಬೇಗಂ, ವಾಡಿ ಪುರಸಭೆ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.