ನಂದಿನಿಯಿಂದ ರೈತರಿಗೆ ಆರ್ಥಿಕ ಸ್ವಾವಲಂಬನೆ
Team Udayavani, Jun 23, 2017, 3:30 PM IST
ಕಲಬುರಗಿ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಜಿಲ್ಲೆಯ ಹಾಲು ಉತ್ಪಾದಕ ರೈತರಿಂದ ಸಂಗ್ರಹಿಸಿದ ಹಾಲನ್ನು ಸಂಸ್ಕರಿಸಿ ಗ್ರಾಹಕರಿಗೆ ವಿತರಿಸುವ ವ್ಯವಸ್ಥೆಯನ್ನು ಹಾಲುಒಕ್ಕೂಟ ಮಾಡುತ್ತಿದೆ.
ನಂದಿನಿ ರೈತರ ಸಹಕಾರಿ ಸಂಸ್ಥೆಯಾಗಿದ್ದು, ಇದರ ಮುಖ್ಯ ಉದ್ದೇಶ ರೈತರಿಗೆ ಪರ್ಯಾಯ ಆರ್ಥಿಕ ಸ್ವಾವಲಂಬನೆ ಒದಗಿಸುವ ಜೊತೆಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಸುವುದಾಗಿದೆ ಎಂದು ಕಲಬುರಗಿ, ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟ ಹಾಗೂ ಕಹಾಮ ಮಾರಾಟ ಮಳಿಗೆ ಸಹಾಯಕ ವ್ಯವಸ್ಥಾಪಕ ಮುಹಮ್ಮದ ಝಿಯಾಉಲ್ಲಾ ತಿಳಿಸಿದರು.
ನಗರದ ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ಕಲಬುರಗಿ, ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟ ಹಾಗೂ ಕಹಾಮ ಮಾರಾಟ ಮಳಿಗೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಂದಿನಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾಲಿನ ಉದ್ಯಮದಲ್ಲಿ ಬಹಳಷ್ಟು ಅವ್ಯವಹಾರ ನಡೆದಿರುವುದು ಮಾಧ್ಯಮಗಳ ಮೂಲಕ ತಿಳಿದುಬರುತ್ತದೆ. ಆದ್ದರಿಂದ ಗ್ರಾಹಕರು ಹಾಲನ್ನು ಖರೀದಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಚಂದ್ರಶೇಖರ ಕಮಕೇರಿ ಮಾತನಾಡಿ, ಹಾಲು ಮನುಷ್ಯನ ದೇಹಕ್ಕೆ ಬೇಕಾಗಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಸಂಪೂರ್ಣ ಆಹಾರವಾಗಿದೆ.
ಆರೋಗ್ಯವಂತ ಜೀವನಕ್ಕಾಗಿ, ಮೂಳೆ ಸವೆತವನ್ನು ತಡೆಯಲಿಕ್ಕಾಗಿ ಇದರ ಸೇವನೆ ಮಹತ್ವದ್ದಾಗಿದೆ ಎಂದರು. ಹಾಲಿನ ಕೊಬ್ಬಿನಲ್ಲಿರುವ ಕೊಲೆಸ್ಟಿರಾಲ್ ಹೃದ್ರೋಗಕ್ಕೆ ಕಾರಣವಲ್ಲವೆಂದು ಇತ್ತಿಚಿನ ಸಂಶೋಧನೆಗಳಿಂದ ದೃಢಪಟ್ಟಿದೆ.
ನಂದಿನ ಜಾಗತಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ನಂದಿನಿ ಬ್ರಾಂಡಿನ ತುಪ್ಪ, ಪೇಡಾ, ಪಾಯಸ, ರಸಗುಲ್ಲಾ, ಜಾಮೂನು, ಮೈಸೂರಪಾಕ್, ಸುವಾಸಿತ ಹಾಲು ಇತ್ಯಾದಿಗಳ ಪರಿಚಯ ಮಾಡಿದರು.
ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವಿಕರ, ಮಧುಮತಿ, ಒಕ್ಕೂಟದ ಜಂಟಿ ನಿರ್ದೇಶಕರಾದ ತಥಾಗತ ವನಖೇಡ, ಉಪ ವ್ಯವಸ್ಥಾಪಕರಾದ ವಿಜಯೀಂದ್ರ ದೇಶಪಾಂಡೆ, ಕಹಾಮ ಮಾರಾಟ ಮಳಿಗೆಯ ಮೇಲ್ವಿಚಾರಕರಾದ ರಾಜಶೇಖರ ಹಾಗೂ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.