ಪಟಾಕಿ ಸದ್ದಿಲ್ಲ: ಆಕಾಶ ದೀಪಕ್ಕೆ ಬರವಿಲ್ಲ
Team Udayavani, Oct 20, 2017, 10:53 AM IST
ವಾಡಿ: ಎಂದಿನಂತೆ ಗುರುವಾರ ಪಟ್ಟಣದ ಮಾರುಕಟ್ಟೆ ಜನರಿಂದ ತುಂಬಿ ಗಿಜಿಗುಡುತ್ತಿತ್ತು. ಎಲ್ಲೆಡೆ ಪಟಾಕಿಗಳ ಅಂಗಡಿಗಳ ಬೀಡು. ನೇತಾಡುವ ಸಾಲು ಸಾಲು ಆಕಾಶ ದೀಪಗಳ ರಾಶಿ. ಹೂ ಹಣ್ಣು ಮಾರುವವರ ಚೀರಾಟ ಒಂದೆಡೆಯಾದರೆ, ದೀಪಗಳ ಪಣತಿ, ಬಾಳೆದಿಂಡು, ತೆಂಗಿನಕಾಯಿ ಎಲೆಗಳ ಖರೀದಿಗೆ ನಿಂತ ನೂರಾರು ಜನರು ಇನ್ನೊಂದೆಡೆ. ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದವರ ಪೈಕಿ ನಾರಿಯರದ್ದೇ ಸಂಖ್ಯೆಯೇ ಹೆಚ್ಚಿದ್ದರಿಂದ ಮಾರುಕಟ್ಟೆ ರಂಗುರಂಗಾಗಿ ಕಂಗೊಳಿಸುತ್ತಿತ್ತು.
ಬೆಲೆ ಏರಿಕೆಯ ಮಧ್ಯೆಯೂ ಬೆಳಕಿನ ಹಬ್ಬ ದೀಪಾವಳಿಯ ಖರೀದಿ ಜೋರಾಗಿತ್ತು. ಸಂಕಟದ ಮಧ್ಯೆಯೂ ಜನರ ಸಂಭ್ರಮ ಎದ್ದು ಕಾಣಿಸಿತು. ದೀಪಾವಳಿ ಹಬ್ಬ ಎಂದರೆ ಸಾಮಾನ್ಯವಾಗಿ ಎಲ್ಲೆಡೆ ಪಟಾಕಿಗಳ ಸದ್ದೇ ಕೇಳಿಬರುತ್ತದೆ. ವಿಪರ್ಯಾಸವೆಂದರೆ ಈ ಬಾರಿ ಪಟಾಕಿಗಳ ಸದ್ದಡಗಿ, ಸಾಲು ದೀಪಗಳ ಬೆಳಕು ಮೇಳೈಸಿದ್ದು ಸ್ಪಷ್ಟವಾಗಿ ಕಾಣಿಸಿತು. ಆಕಾಶ ದೀಪಗಳ ಖರೀದಿಗೂ ಜನರು ಮೊದಲ ಆದ್ಯತೆ ನೀಡಿದ್ದು, ಬೆಳಕಿನ ಹಬ್ಬದಲ್ಲಿ ಸಿಡಿಮದ್ದುಗಳ ಪಟಾಕಿ ಸಿಡಿಯದೇ ತಣ್ಣಗಾಗಿತ್ತು.
ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಪಟಾಕಿ ಖರೀದಿಗೆ ಬರ ಎದ್ದು ಕಾಣಿಸಿತು. ಮಣ್ಣಿನಿಂದ ತಯಾರಿಸಲಾಗಿದ್ದ ದೀಪಗಳ ಪಣತಿಗಳಿಗೆ ಬೇಡಿಕೆ ಹೆಚ್ಚಿತ್ತು ಎನ್ನಬಹುದು. ಅಪಾಯಕಾರಿ ಪಟಾಕಿಗಳ ಖರೀದಿ ಕಳೆಗುಂದಿದ್ದರಿಂದ ಪಟಾಕಿ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತೆ ಆಯಿತು. ಕಾಸಿಲ್ಲದೆ ನಲುಗಿದ ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ ದೀಪಾವಳಿಯ ಬೆಳಕಿಗೆ ಕೊರತೆಯುಂಟಾಗಲಿಲ್ಲ. ದೇವರನ್ನು ಪೂಜಿಸಿ, ಬಂಧುಗಳಿಗೆ ಸಿಹಿ ಹಂಚಿ, ಮನೆಯ ಬಾಗಿಲುಗಳಿಗೆ ದೀಪಗಳಿಂದ ಶೃಂಗರಿಸಿ ಸರಳವಾಗಿ ದೀಪಾವಳಿ ಆಚರಿಸಿದ್ದು ಬಹಿರಂಗ ಸತ್ಯದಂತಿತ್ತು. ಅಪಾಯ ತಂದಿಡುವ ಕಿವಿಗಡಚಿಕ್ಕುವ ಪಟಾಕಿಗಳ ತಂಟೆಗೆ ಹೋಗದೆ ಸುರ್‌ಸುರ್ ಬತ್ತಿಯ ಬೆಳಕು ಮಕ್ಕಳ ಸಂಭ್ರಮ ಹೆಚ್ಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.