ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು
Team Udayavani, Dec 16, 2017, 6:00 AM IST
ಕಲಬುರಗಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ದರೋಡೆ, ಕೊಲೆ ಸೇರಿ ಇತರ ಅಪರಾಧಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕುಖ್ಯಾತ ರೌಡಿ ಯಶ್ವಂತರಾಯ ಶ್ರೀಪತಿ ಸುಲ್ತಾನಪುರನನ್ನು ಬಂಧಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈತನ ಪ್ರತಿ ದಾಳಿಗೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿ ಯಶ್ವಂತರಾಯ, ಜಿಲ್ಲೆಯ ಕಮಲಾಪುರ ಮೂಲಕ ತಾಜಸುಲ್ತಾನಪುರಕ್ಕೆ ಬರುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಅರಿತು ಕಮಲಾಪುರದಲ್ಲಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಆತ ಮುಂದೆ ಬಂದಿದ್ದ. ತದನಂತರ ತಾವರಗೇರಾ ಕ್ರಾಸ್ ಬಳಿ ಪೊಲೀಸರು ಅಡ್ಡಗಟ್ಟಿ ವಾಹನ ತಡೆಯಲು ಯತ್ನಿಸಿದಾಗ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಪೇದೆಗಳಾದ ಕುಶನ್ ಹಾಗೂ ಕುಪೇಂದ್ರ ಎನ್ನುವವರು ಈ ವೇಳೆ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಪಿಎಸ್‌ಐ ಚಂದ್ರಶೇಖರ ತಿಗಡಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ತಿಗಡಿ ಅವರು ಹಾರಿಸಿದ ಗುಂಡು ಯಶ್ವಂತರಾಯ ಎಡಕಾಲಿಗೆ ತಗುಲಿದೆ. ಗುಂಡು ತಗುಲಿದ ತಕ್ಷಣ ಸ್ಥಳದಲ್ಲಿಯೇ ಆತ ಕುಸಿದು ಬಿದ್ದಿದ್ದು, ವಶಕ್ಕೆ ಪಡೆಯಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪೊಲೀಸರ ಹಾಗೂ ರೌಡಿಗಳ ನಡುವೆ ನಡೆದ 8ನೇ ಗುಂಡಿನ ದಾಳಿ ಪ್ರಕರಣ ಇದಾಗಿದೆ.
ರೌಡಿ ಯಶ್ವಂತರಾಯ ಅಕ್ಟೋಬರ್ 7ರಂದು ನಗರದ ತಾಜಸುಲ್ತಾನಪುರದ ವಿದ್ಯುತ್ ಗುತ್ತಿಗೆದಾರ ಮೋನಪ್ಪ ಸುತ್ತಾರ ಎನ್ನುವವರನ್ನು ಅಪಹರಿಸಿ 6 ಲಕ್ಷ ರೂ. ಪಡೆದಿದ್ದಲ್ಲದೇ ಮೋನಪ್ಪನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಅದಲ್ಲದೇ ಹಲವಾರು ದರೋಡೆ, ಡಕಾಯಿತಿ, ನಾಡಪಿಸ್ತೂಲು ಮಾರಾಟ ಸೇರಿದಂತೆ ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳೆದ ಹಲವಾರು ದಿನಗಳಿಂದ ಯಶ್ವಂತರಾಯನ ಬಂಧನಕ್ಕೆ ಜಾಲ ಬೀಸಲಾಗಿತ್ತು. ಈಶಾನ್ಯ ವಲಯ ಐಜಿಪಿ ಅಲೋಕ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಗೂ ಭೇಟಿ ನೀಡಿ ಗಾಯಗೊಂಡ ಪೇದೆಗಳ ಆರೋಗ್ಯ ವಿಚಾರಿಸಿದ್ದಾರೆ. ಎಸ್ಪಿ ಶಶಿಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳು ಜತೆಗಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.