ಕಲಬುರಗಿ: ರೌಡಿ ಶೀಟರ್ ಮೇಲೆ ಪೊಲೀಸರ ಫೈರಿಂಗ್
Team Udayavani, Jan 10, 2018, 8:31 AM IST
ಕಲಬುರಗಿ: ಕುಖ್ಯಾತ ರೌಡಿ ಶೀಟರ್ ಇದ್ದಿಲು ಮಲ್ಲು ಮೇಲೆ ಬುಧವಾರ ತಡರಾತ್ರಿ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ವರದಿಯಾಗಿದೆ.
9ಕ್ಕೂ ಹೆಚ್ಚು ಪ್ರಕರಣಕ್ಕೆ ಸಂಭದಿಸಿದಂತೆ ಪೊಲೀಸರು ಆತನ ಬಂಧನಕ್ಕೆ ಬಲೆ ಬಿಸಿದ್ದರು. ನಗರದ ಹೊರವಲಯದ ಕೆಸರಟಗಿ ಬಳಿಯ ಮನೆಯೊಂದರಲ್ಲಿ ಅಡಗಿರುವ ನಿಖರ ಮಾಹಿತಿಯನ್ನು ಪಡೆದ ವಿಶ್ವವಿದ್ಯಾಲಯ ಠಾಣಾ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು ಈ ಸಂದರ್ಭದ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿದ್ದಾರೆಂದು ತಿಳಿದು ಬಂದಿದೆ.
ಇದ್ದಿಲು ಮಲ್ಲು ನ ಕಾಲಿಗೆ ಗುಂಡು ತಗುಲಿದ್ದು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾದ ಘಟನೆ ವರದಿಯಾಗಿದೆ.