ಜನಮನ ಸೆಳೆದ ಫಲಪುಷ್ಪ ಪ್ರದರ್ಶನ
Team Udayavani, Mar 5, 2017, 2:42 PM IST
ಕಲಬುರಗಿ: ಜಿಲ್ಲೆಯಲ್ಲಿ ತೋಟಗಾರಿಕೆಗೆ ಇರುವ ಅವಕಾಶ ತೆರೆದಿಟ್ಟ ಫಲಪುಷ್ಪ ಪ್ರದರ್ಶನ ಒಂದೆಡೆ ಜನ ಮೆಚ್ಚುಗೆ ಗಳಿಸಿದರೆ, ಇನ್ನೊಂದೆಡೆ ಮೂರುವರೆ ಗಂಟೆಗಳ ಕಾಲ ತಡವಾಗಿ ಉದ್ಘಾಟನೆಗೊಳ್ಳುವ ಮೂಲಕ ರೈತರು ಮತ್ತು ಅಧಿಕಾರಿಗಳನ್ನುಸುಸ್ತು ಮಾಡಿ ಕೆಲ ಕಾಲ ಕಿರಿಕಿರಿಗೆ ಕಾರಣವಾಯಿತು.
ಇದರ ಮಧ್ಯದಲ್ಲೂ ಪ್ರತಿನಿತ್ಯ ಉದ್ಯಾನವನಕ್ಕೆ ಆಗಮಿಸುತ್ತಿದ್ದ ಉದ್ಘಾಟನೆಗೂ ಮುನ್ನವೇ ಫಲಪುಷ್ಪ ಪ್ರದರ್ಶನದಲ್ಲಿ ಇಟ್ಟಿದ್ದ ಇಕಾಬಾನ, ವಿವಿಧ ಹೂವುಗಳು, ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಜನ ಪ್ರಗತಿಪರ ರೈತರು ಬೆಳೆದ ಆಕರ್ಷಕ ತರಕಾರಿ, ಹಣ್ಣುಗಳನ್ನು ನೋಡಿ ಕಣ್ತುಂಬಿಕೊಂಡರು.
ಬೆಂಗಳೂರಿನಿಂದ ಆಗಮಿಸಿದ್ದ ಹರೀಶ ಮತ್ತು ಅವರ ತಂಡ ವಿವಿಧ ತರಕಾರಿ ಮತ್ತು ಕಲ್ಲಂಗಡಿ, ಸಿಹಿ ಕುಂಬಳ, ಹಾಗಲಕಾಯಿ, ಬದನೆಕಾಯಿ, ಮೆಣಸಿನ ಕಾಯಿ ಸೇರಿದಂತೆ ವಿವಿಧ ಹಣ್ಣುಗಳಿಲ್ಲಿ ಮೂಡಿಸಿದ ನವಿಲು, ಶಿವಲಿಂಗ, ವಿವಿಧ ಆಕಾರದ ಹೂವುಗಳು, ಮೊಸಳೆ, ಮೀನುಗಳು, ಹಾವು, ಗಣಪತಿ, ಕೊಕ್ಕರೆ ಮಕ್ಕಳ ಮತ್ತು ಹಿರಿಯ ಮನ ಸೂರೆಗೊಂಡವು.
ಸಾರ್ವಜನಿಕರು ವಿವಿಧ ಜಾತಿಯ ಹೂವುಗಳನ್ನು ನೋಡಿ ಇಷ್ಟು ಜಾತಿಯ ಹೂವುಗಳು ಇವೆಯಲ್ಲಾ ಎನ್ನುವ ಖುಷಿ ಹಂಚಿಕೊಂಡರು. ಜರ್ಬೆರಾ, ಚೆಂಡೂಹೂವು, ಇತರೆ ಹೂವುಗಳು ಪ್ರದರ್ಶನದ ಮೆರಗು ಹೆಚ್ಚಿದವು. ದಾಳಿಂಬೆ, ಅರಿಸಿಣ, ಕಲ್ಲಂಗಡಿ, ದ್ರಾಕ್ಷಿ, ನುಗ್ಗೆಕಾಯಿ, ಡಬ್ಬು ಮೆಣಸಿನಕಾಯಿ, ಈರುಳ್ಳಿ, ಟಮೋಟೋ ಗಮನ ಸೆಳೆದವು.
ಇಡೀ ಪ್ರದರ್ಶನಕ್ಕೆ ಕಳೆ ತಂದದ್ದು ವಿವಿಧ ಶಾಲೆಯ ಮಕ್ಕಳು. ಬೇಗ ಉದ್ಘಾಟನೆಗೊಂಡಿದ್ದರೆ ಇನ್ನೂ ಓಡಾಡಿಕೊಂಡು ನೋಡಬಹುದಿತ್ತು. ಆದರೆ, ಅದೆಲ್ಲವನ್ನೂ ನೋಡಲಿಕ್ಕೆ ಆಗಲಿಲ್ಲ.ಆದರೂ, ಒಳ್ಳೆಯ ಪ್ರಯತ್ನವನ್ನು ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಡಿರುವುದು ಗಮನ ಸೆಳೆಯಿತು.
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
SS Rajamouli’: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.