ಆಧುನಿಕ ಕೃಷಿ ಪದ್ಧತಿ ಅನುಸರಿಸಿ: ಡಾ| ರಾಜಕುಮಾರ
Team Udayavani, Jul 13, 2017, 9:53 AM IST
ನಾರಾಯಣಪುರ: ನೀರಿನ ಮಿತ ಬಳಕೆಗೆ ಆದ್ಯತೆ ನೀಡಿ, ಆಧುನಿಕ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ| ರಾಜಕುಮಾರ ಹೇಳಿದರು.
ಪಟ್ಟಣದ ಶ್ರೀ ಯಲ್ಲಾಲಿಂಗ ದೇವಸ್ಥಾನದ ಮಂಗಲ ಮಂಟಪದಲ್ಲಿ ಬುಧವಾರ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 2017-18 ನೇ ಸಾಲಿನ ಕೃಷಿ ಅಭಿಯಾನ, ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೀರಿನ ಮಿತ ಬಳಕೆಗೆಂದು ಇರುವ ತುಂತುರು, ಹನಿ ನೀರಾವರಿ ಪದ್ಧತಿಗಳನ್ನು ಅನುಸರಿಸಿ ಭೂಮಿ ಸವಳು
ಜವಳು ಆಗುವುದನ್ನು ತಡೆಯಬೇಕು. ಇದಕ್ಕಾಗಿ ತಜ್ಞರ ಮಾರ್ಗದರ್ಶನದಲ್ಲಿ ಬಸಿಗಾಲುವೆ ನಿರ್ಮಿಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ರೈತನು ಜಮೀನಿನಲ್ಲಿನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಭೂಮಿಯಲ್ಲಿ ಮಣ್ಣಿನ ಫಲವತ್ತತೆ ಅರಿತು ಮಿತವಾದ ರಸಾಯನಿಕಗಳನ್ನು ಬಳಕೆ ಮಾಡಿಕೊಂಡು ಕೃಷಿ ಮಾಡಬಹುದು, ಸಾವಯವ ಕೃಷಿಗೆ ಮಹತ್ವ ನೀಡಿ, ಭೂಮಿ ಫಲವತ್ತತೆಗೆ ನೈಸರ್ಗಿಕ ಎರೆಹುಳು ಹಾಗೂ ಹಸಿರೆಲೆ ಗೊಬ್ಬರವನ್ನು ಯಥೇಚ್ಚವಾಗಿ ಬಳಸಿ ಶ್ರಮವಹಿಸಿ ದುಡಿದರೆ ನಾನಾ ಮಾದರಿಯ ಬೆಳೆಗಳನ್ನು ಬೆಳೆಯಬಹುದು ಎಂದು ವಿವರಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಮಾತನಾಡಿ, ಕೃಷಿ ಇಲಾಖೆ ಮಳೆಯಾಶ್ರಿತ ವಲಯದ ರೈತರ ಜೀವನ ಮಟ್ಟ ಉತ್ತಮಗೊಳಿಸಲು ಇಲಾಖೆ ವತಿಯಿಂದ ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎನ್ನುವ ಘೋಷಣೆಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಅನಸೂಬಾಯಿ ಚವ್ವಾಣ ಉದ್ಘಾಟಿಸಿದರು, ಗ್ರಾ.ಪಂ ಅಧ್ಯಕ್ಷ ಧೀರಪ್ಪ ರಾಠೊಡ ಅಧ್ಯಕ್ಷತೆ ವಹಿಸಿದ್ದರು,
ಉಪತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಜಿ.ಪಂ. ಸದಸ್ಯ ಎನ್.ಡಿ. ನಾಯಕ, ಗ್ರಾಪಂ ತಾ.ಪಂ ಸದಸ್ಯ ಮೋಹನ
ಪಾಟೀಲ, ಬಾಲಾಜಿ ಚವ್ವಾಣ, ಶೇಖ ಅಹ್ಮದ, ಕೃಷಿ ಅಧಿಕಾರಿಗಳಾದ ಎಸ್.ಬಿ. ತೆಗ್ಗಿ, ಪಶುಸಂಗೋಪನಾ ಅಧಿ ಕಾರಿ ಡಾ|
ಮೆಹಬೂಬಸಾಬ ಖಾಜಿ, ತೋಟಗಾರಿಗೆ ಅಧಿಕಾರಿ ಶಿವಾನಂದ, ಬಸಮ್ಮ, ಎಸ್.ಬಿ.ಪಾಲ್ಕೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ,
ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಬಾಪೂಜಿ ಶಾಲೆ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು,
ಎಸ್.ಆರ್.ಚಳಗೇರಿ ಸ್ವಾಗತಿಸಿದರು, ಆರ್.ಎಸ್. ಸರ್ಜಾಪುರ ನಿರೂಪಿಸಿದರು. ಕೃಷಿ ಅಧಿ ಕಾರಿ ಚನ್ನಪ್ಪಗೌಡ ಗೌಡರ
ವಂದಿಸಿದರು.
ವಿವಿಧ ಇಲಾಖೆಗಳಿಂದ ಕೃಷಿಯಂತ್ರಗಳ ಪ್ರದರ್ಶನ: ಇಲಾಖೆಯ ನಡೆ ರೈತರ ಮನೆ ಕಡೆ ಕಾರ್ಯಕ್ರಮದಡಿ ರೈತರ ಕೃಷಿಗೆ ಉಪಯೋಗವಾಗುವ ವಿವಿಧ ಯಂತ್ರಗಳ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ವಿಶೇಷ ಗಮನ ಸೆಳೆಯಿತು. ನಾರಾಯಣಪುರಕ್ಕೂ ರೈತ ಸಂಪರ್ಕ ಕೇಂದ್ರ ನೀಡಿ ನಾರಾಯಣಪುರ ಸುತ್ತಮುತ್ತ ಅನೇಕ ಹಳ್ಳಿಗಳಿವೆ. ಇಲ್ಲಿಯೇ ರೈತ ಸಂಪರ್ಕ ಕೇಂದ್ರವಾದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿ ದೊರೆಯುತ್ತದೆ. ಈ
ನಿಟ್ಟಿನಲ್ಲಿ ಕೃಷಿ ಅಧಿ ಕಾರಿಗಳು ಯೋಚಿಸಬೇಕು.
ಸೋಮನಗೌಡ, ರೈತ ಸಂಘದ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.