7ನೇ ವೇತನ ಜಾರಿಗೆ ಶಿಕ್ಷಕರ ಸಂಘ ಒತ್ತಾಯ
Team Udayavani, Apr 26, 2017, 3:29 PM IST
ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಕಲಬುರಗಿ, ಆಳಂದ, ಅಫಜಲಪುರ ಹಾಗೂ ಸೇಡಂನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಸಾಂಕೇತಿಕ ಧರಣಿ ನಡೆಸಲಾಯಿತು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇವೆಲ್ಲ ತಾಲೂಕುಗಳಲ್ಲೂ ಪ್ರತಿಭಟನಾಕಾರರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಲಬುರಗಿಯಲ್ಲಿ ಸಂಘದ ಉತ್ತರ ವಲಯದ ಅಧ್ಯಕ್ಷ ಮುರುಘೇಂದ್ರ ವೀರಶೆಟ್ಟಿ ಮಹಾಗಾಂವ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಂ.ಜೋಗದ, ಉಪಾಧ್ಯಕ್ಷ ಮಿಟ್ಟೇಸಾಬ್ ಮುಲ್ಲಾ, ಅಶೋಕ ಸೊನ್ನ, ಧನರಾಜ, ನಂದಾ ಪಾಟೀಲ, ಮಲ್ಲಿಕಾರ್ಜುನ, ಜಯಶೀ ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು.
ಆಳಂದ: ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನರಸಪ್ಪಾ ಬಿರಾದಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ಮಾಡಿಯಾಳ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಎಸ್ಸಿ ಎಸ್ಟಿ ನೌಕರರ ಸಂಘದ ರಮೇಶ ಪಾತ್ರೆ, ಸಂಘದ ಉಪಾಧ್ಯಕ್ಷ ಗುಂಡೇರಾವ್ ಹಳಿಮನಿ, ಮಲ್ಲಿಕಾರ್ಜುನ ಮಲಶೆಟ್ಟಿ,
ಲಾಲಭಾಷಾ, ಸತೀಶ ಷಣ್ಮೂಖ, ಹುಸೇನಭಾಷಾ ರಮೇಶ, ಅಶೋಖ ಡಿಗ್ಗಿ, ಕಲ್ಯಾಣಪ್ಪ ಬಿಜ್ಜರ್ಗಿ, ದೇವಿಂದ್ರ ರಾಠೊಡ, ಬಸಣ್ಣ ಸಿಗರಕಂಟಿ, ಕಲ್ಲಪ್ಪ ಮಂಠಾಳೆ, ಶಿವಶರಣಪ್ಪ ಪಾಟೀಲ, ಸಂತೋಷ ವೇದಪಾಠಕ, ನಿಂಗಣ್ಣಾ ಪೂಜಾರಿ, ಮಲ್ಲಮ್ಮ, ತಬಸಮ್ ಬೇಗಂ ಮನಸೂರ್, ಶಶಿಕಾಂತ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ಸೇಡಂ: ಕ್ಷೇತ್ರ ಶಿಕ್ಷಣಾಧಿಧಿಕಾರಿಗಳ ಕಾರ್ಯಾಲಯದ ಎದುರು ಜಮಾಯಿಸಿದ್ದ ನೂರಾರು ಶಿಕ್ಷಕರು ಬೆಳಗ್ಗೆ 11:00 ಗಂಟೆಯಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು. ನೂತನ ಪಿಂಚಣಿ ಯೋಜನೆ ಅಭದ್ರತೆಯ ಯೋಜನೆಯಾಗಿದ್ದು, ಶಿಕ್ಷಕ ವೃಂದದಲ್ಲಿ ಆತಂಕವುಂಟು ಮಾಡಿದೆ. ನಿವೃತ್ತಿ ನಂತರ ಶಿಕ್ಷಕರ ಜೀವನ ಅಂಧಕಾರದಲ್ಲಿ ಮುಳುಗಿದಂತಾಗುತ್ತದೆ.
ಕೂಡಲೇ ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡು ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಂದೆ ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಿಕ್ಷಕರು ಎಚ್ಚರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಲೂಕು ಅಧ್ಯಕ್ಷ ಶಂಭುಲಿಂಗಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ. ಸಾಗರ, ಶಿಕ್ಷಕ ಅಶೋಕ ತೊಟ್ನಳ್ಳಿ ಪಾಲ್ಗೊಂಡಿದ್ದರು.
ಅಫಜಲಪುರ: ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸಂಘದ ಅಧ್ಯಕ್ಷ ಶ್ರೀಶೈಲ ಮ್ಯಾಳೇಸಿ ಅಧ್ಯಕ್ಷತೆಯಲ್ಲಿ ಧರಣಿ ನಡೆಸಿ ಕ್ಷೇತ್ರ ಶಿಕ್ಷಣಾಧಿಧಿಕಾರಿ ಚಿತ್ರಶೇಖರ ದೇಗಲಮಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಇಒ ದೇಗಲಮಡಿ ಮನವಿಯನ್ನು ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು.
ಶಿಕ್ಷಕರಾದ ಜಗನ್ನಾಥ ಸಾತಲಗಾಂವ, ಮಲ್ಲಿಕಾರ್ಜುನ ಯಂಕಂಚಿ, ಮಲ್ಲಿಕಾರ್ಜುನ ಚೌಡಿಹಾಳ, ಶಿವಾನಂದ ಪ್ರಜಾರಿ, ದೇವಣ್ಣ ಕಿರಸಾವಳಗಿ, ಭೀಮಶಾ ತೆಲ್ಲೂಣಗಿ, ಗೊಲ್ಲಾಳಪ್ಪ ಜೇವರ್ಗಿ, ಶಿವುಕುಮಾರ, ಸಿದ್ದಣ್ಣ ಚಿಂಚೋಳಿ, ಬಸವರಾಜ, ಸಂಗಮನಾಥ ಸಾಳೂಂಕೆ, ಸಾತಮ್ಮ ಪಾಟೀಲ, ಸಾವಿತ್ರಿ ನಂದಿ, ಸುರೇಖಾ ಅಂಬೂರೆ, ಮಹಾನಂದಾ ಹೆಗ್ಗಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.