ರೈಲುಗಳ ನಿಲುಗಡೆಗೆ ಒತ್ತಾಯ
Team Udayavani, Sep 8, 2017, 11:24 AM IST
ಸೇಡಂ: ಲೇಡಿ ಪ್ಯಾಸೆಂಜರ್‌ಕೋ ಪಿಶಾಬ್ ಕರ್ನೆಕು ಜಗಾನಯಿ ಸಾಬ್. ಸ್ಟೇಷನ್ ರಿಪೇರಿ ಮಾಡ್ಲಾಕ್ ಶುರು ಮಾಡಿ
ವರ್ಷಗಳೇ ಕಳೆದ್ರು, ಇನ್ನು ಮುಗಿದಿಲ್ಲ ಸರ್. ಟಿಕೆಟ್ ದೇನೆ ವಾಲೆಕೋ ಕನ್ನಡ್ ನಹಿ ಆತಾ. ಕಬ್ ಸುಧಾರೇಂಗೆ ಇಸ್
ಸ್ಟೇಷನ್‌ಕೋ?.
ಹೀಗೆ ಕೆಲವರು ಹಿಂದಿ, ಮತ್ತೆ ಕೆಲವರು ಕನ್ನಡ ಭಾಷೆಯಲ್ಲಿ ತಮ್ಮ ತೊಂದರೆಗಳನ್ನು ಹೇಳಿಕೊಂಡದ್ದು ದಕ್ಷಿಣ
ಮಧ್ಯ ರೈಲ್ವೆ ಸಿಕಂದ್ರಾಬಾದ ವಿಭಾಗದ ವ್ಯವಸ್ಥಾಪಕ ಅಮಿತ್ ವರ್ಧಾ ಅವರಿಗೆ.
ಬುಧವಾರ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಸ್ವಾಗತಿಸುವರು ಕಮ್ಮಿ, ಅವ್ಯವಸ್ಥೆ ಕುರಿತು ದೂರು
ನೀಡುವವರೇ ಜಾಸ್ತಿ ಜಮಾಯಿಸಿದ್ದರು.
ಕೆಲವರು ರೈಲ್ವೆ ನಿಲ್ದಾಣದಲ್ಲಿ ಶೌಚಾಲಯವಿದ್ದರೂ ಬಳಕೆಗೆ ಅವಕಾಶವಿಲ್ಲದಂತೆ ಆಗಿದೆ. ಇದರಿಂದ ಮಹಿಳಾ
ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರೈಲ್ವೆ ನಿಲ್ದಾಣ ನವೀಕರಣ ನೆಪದಲ್ಲಿ ವರ್ಷದ ಹಿಂದೆ ಕೈಗೊಂಡ
ಕಾಮಗಾರಿ ಇನ್ನೂ ಮುಗಿದಿಲ್ಲ. ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ. ಸರಿಯಾದ ವಿಶ್ರಾಂತಿ ಕೊಠಡಿ ಇಲ್ಲದೆ
ಪ್ರತಿನಿತ್ಯ ಪ್ರಯಾಣಿಕರು ಛೀಮಾರಿ ಹಾಕುತಿದ್ದಾರೆ ಎಂದು ದೂರಿದರು.
ನಂತರ ವ್ಯವಸ್ಥಾಪಕ ವರ್ಧಾ ಅವರಿಂದ ಸಮಂಜಸ ಉತ್ತರದ ನಿರೀಕ್ಷೆಯಲ್ಲಿದ್ದ ದೂರುದಾರರಿಗೆ, ಕೇವಲ
ದೇಖೆಂಗೆ ಎನ್ನುವ ಉಡಾಫೆ ಉತ್ತರ ಮತ್ತಷ್ಟು ಕೆರಳಿಸಿತು. ವಿಚಾರಣೆ ಮತ್ತು ಟಿಕೆಟ್ ನೀಡುವ ಕೋಣೆಗಳಲ್ಲಿ
ಕನ್ನಡ ಭಾಷೆ ಬಲ್ಲವರಿಲ್ಲ. ಈ ರೀತಿ ಅಸೌಕರ್ಯದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ
ಸಮಸ್ಯೆಗಳನ್ನು ಪರಿಹರಿಸಿ ಎಂದು ಒತ್ತಾಯಿಸಿದರು.
ನಂತರ ಲೋಕಮಾನ್ಯ ತಿಲಕ್ ಎಕ್ಸಪ್ರಸ್, ಗುಲಬರ್ಗಾ-ಹೈದ್ರಾಬಾದ ಇಂಟರ್‌ಸಿಟಿ, ಗರೀಬ ರಥ,
ಔರಂಗಾಬಾದ-ರೇಣಿಗುಂಟಾ ಎಕ್ಸಪ್ರಸ್, ತಿರುಪತಿ ನಿಜಾಮಾಬಾದ ಎಕ್ಸ್‌ಪ್ರೆಸ್, ಪುಣೆ-ಸಿಕಂದ್ರಾಬಾದ ಎಕ್ಸಪ್ರಸ್,
ತಿರುಪತಿ-ಶ್ರೀನಗರ ಎಕ್ಸಪ್ರಸ್, ಮುಂಬೈ-ಕಾಕಿನಾಡ ಎಕ್ಸಪ್ರಸ್, ಯಶ್ವಂತಪುರ-ಮಾತಾ ವೈಷ್ಣೋದೇವಿ ಎಕ್ಸಪ್ರಸ್
ರೈಲುಗಳನ್ನು ಸೇಡಂ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ನಗರಾಧ್ಯಕ್ಷ ಅನಿಲ ಐನಾಪುರ, ಶ್ರೀಮಂತ ಅವಂಟಿ, ರಾಮು ರಾಠೊಡ, ಪರಮೇಶ್ವರ ತೇಗಲತಿಪ್ಪಿ,
ನೀಲಾಧರಶೆಟ್ಟಿ, ನಾಗರಾಜ ಹಾಬಾಳ, ಪ್ರದೀಪ ಪ್ಯಾಟಿ, ಅಂಬಾದಾಸ್, ರಾಜು ರಾಠೊಡ, ಹಣಮಂತ ಸಕ್ರಿ
ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.