ಸಸಿ ನೆಡುವ ಕೈಗೆ ಅರಣ್ಯ ಇಲಾಖೆ ನೆರವು

•ಎರಡು ವಿಧದಲ್ಲಿ ಕಾರ್ಯ ಹಂಚಿಕೊಂಡು ನಿರ್ವಹಿಸುತ್ತಿದೆ ಅರಣ್ಯ ಇಲಾಖೆ

Team Udayavani, Jun 11, 2019, 1:07 PM IST

kalburgi-tdy-2..

ಆಳಂದ: ಪ್ರಸಕ್ತ ಹಂಗಾಮಿನ ಅರಣ್ಯೀಕರಣ ಕಾರ್ಯಕ್ಕೆ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಬೆಳೆಸಲಾದ ಎತ್ತರದ ಬೇವಿನಮರದ ಸಸಿಗಳನ್ನು ಅಧಿಕಾರಿ ಜಗನಾಥ ಕೋರಳ್ಳಿ ಪರಿಶೀಲಿಸಿದರು.

ಆಳಂದ: ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗೆ ಅರಣ್ಯ ಇಲಾಖೆ ಮೂಲಕ ಜೂನ್‌ ತಿಂಗಳಲ್ಲಿ ಸರ್ಕಾರ ಸಸಿಗಳನ್ನು ನೆಡಲು ಅನೇಕ ಜಾಗೃತಿ, ಉಪನ್ಯಾಸ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಕಲಬುರಗಿ ಜಿಲ್ಲೆಯನ್ನು ಒಳಗೊಂಡು ಆಳಂದ ತಾಲೂಕಿನ ಅಲ್ಲಲ್ಲಿ ಮಳೆ ಶುರುವಾಗಿದೆ. ಆದ್ದರಿಂದ ಮನೆ, ಕಚೇರಿ, ಶಾಲೆ, ಕಾಲೇಜು ಸಂಘ, ಸಂಸ್ಥೆ ಆವರಣಗಲ್ಲಿ ಸಸಿ ನೆಡಲು ಮುಂದಾಗುವ ಕೈಗಳಿಗೆ ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಹಾಗೂ ಉದ್ಯೋಗ ಖಾತ್ರಿಯಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಕಾಯ್ದಿಟ್ಟ ಅರಣ್ಯ ಪ್ರದೇಶ ಹಾಗೂ ಹೆದ್ದಾರಿ, ಇನ್ನಿತರ ಪ್ರಮುಖ ರಸ್ತೆ ಮಾರ್ಗದ ಬದಿಗಳಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವ ಕಾರ್ಯವಾಗುತ್ತಿದೆ. ಅದೇ ರೀತಿ ಶಾಲೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಸಿ ನೆಡಲು ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಣ್ಯೀಕರಣ ಹಾಗೂ ಸಸಿಗಳನ್ನು ವಿತರಿಸುವ ಕೆಲಸ ನಡೆಯುತ್ತದೆ. ಹೀಗೆ ಅರಣ್ಯ ಇಲಾಖೆ ಎರಡು ವಿಧದಲ್ಲಿ ಕಾರ್ಯ ಹಂಚಿಕೊಂಡು ನಿರ್ವಹಿಸುತ್ತಿದೆ. ಹೀಗೆ ಇಲಾಖೆಯಿಂದ ಒಟ್ಟು 293080 ಸಸಿಗಳನ್ನು ಬೆಳೆಸಲಾಗಿದೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಸಾರ್ವಜನಿಕವಾಗಿ ಸಸಿಗಳು (ಆರ್‌ಎಸ್‌ಪಿಡಿ), ಮನೆಗೊಂದು ಮರ ಹಾಗೂ ಶಾಲೆಗೊಂದು ವನ (ಎಂಎಂಎಸ್‌ವಿ) ಎನ್ನುವ ಯೋಜನೆಗಳ ಮೂಲಕ ವಿವಿಧ ರೀತಿಯ ಸಸಿಗಳನ್ನು ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಆಸಕ್ತರು ಸಸಿಗಳನ್ನು ಖರೀದಿಸಬಹುದಾಗಿದೆ.

171080 ಸಸಿ ಉತ್ಪಾದನೆ:

ಪ್ರಾದೇಶಿಕ ಅರಣ್ಯ ವಲಯದ ಎರಡು ಸಸ್ಯ ಸಂರಕ್ಷಣಾ ಕ್ಷೇತ್ರ ಕೋರಳ್ಳಿ, ಕಡಗಂಚಿಯಲ್ಲಿ ಪ್ರಸಕ್ತ ಹಂಗಾಮಿಗಾಗಿ ಒಟ್ಟು 171080 ಸಸಿಗಳನ್ನು ಬೆಳಸಲಾಗಿದೆ. 171080 ಸಸಿಗಳಲ್ಲಿ 39 ಸಾವಿರ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ತಲಾವೊಂದಕ್ಕೆ 3 ರೂ. ಗಳಂತೆ ಮಾರಾಟ ಮಾಡಲಾಗುವುದು. 14 ಸಾವಿರ ಸಸಿಗಳನ್ನು ಹಸಿರು ಕರ್ನಾಟಕ ಯೋಜನೆಯಲ್ಲಿ ಸಂಘ, ಸಂಸ್ಥೆ, ಶಾಲೆ, ಕಾಲೇಜು ಮತ್ತು ಮಕ್ಕಳಿಗೆ ವಿತರಣೆಗಾಗಿ ಹಾಗೂ ಬಾಕಿ 12808 ಸಸಿಗಳು ಅರಣ್ಯೀಕರಣ ಗುರಿಹೊಂದಲಾಗಿದೆ. •ಜಗನಾಥ ಕೋರಳ್ಳಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ
122000 ಸಸಿ ನೆಡುವ ಗುರಿ:

ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತ್ರಿ ಅಡಿಯಲ್ಲಿ ತಾಲೂಕಿನ ಅಮರ್ಜಾ ಅಣೆಕಟ್ಟು ಪ್ರದೇಶ, ಬಬಲೇಶ್ವರ ಸಸ್ಯ ಉತ್ಪಾದನೆ ಹಾಗೂ ಸಂರಕ್ಷಣಾ ಕ್ಷೇತ್ರದಲ್ಲಿ ಆಲ, ಅರಳಿ, ಬೇವು, ಹೊಂಗೆ, ಚಳ್ಳೆ, ಮಹಾಗನಿ, ಶಿಶು, ಸಿರಸಿ, ಹುಣಸೆ, ಹೆಬ್ಬೇವು, ಪೇರು, ನುಗ್ಗೆ ತಪಸಿ, ಹಿಪ್ಪೆನೆರಳೆ, ಶ್ರೀಗಂಧ ಹೀಗೆ 122000 ಸಸಿಗಳು ಲಭ್ಯವಾಗಿವೆ. ಇವುಗಳಲ್ಲಿ ರಸ್ತೆ ಬದಿ, ವನಮೋತ್ಸವ, ದೇವಸ್ಥಾನ, ಸ್ಮಶಾನ ಭೂಮಿ, ಶಾಲೆ, ಕಾಲೇಜುಗಳಲ್ಲಿ ಇಲಾಖೆಯಿಂದಲೇ ನೆಡಲಾಗುವುದು. ಅಲ್ಲದೆ, ಉದ್ಯೋಗ ಖಾತ್ರಿ ಅಡಿಯಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ರೈತಾಪಿ ವರ್ಗದವರು ಇಲಾಖೆಯ ನೆರವಿನ ಲಾಭ ಪಡೆಯಬೇಕು. •ಮೌಲಾಲಿ, ಸಾಮಾಜಿಕ ಅರಣ್ಯ ಅಧಿಕಾರಿ

ಟಾಪ್ ನ್ಯೂಸ್

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.