ಭೂಸನೂರ ಕಾರ್ಮಿಕರಿಗೆ ಸೌಲಭ್ಯ ಭಾಗ್ಯ
Team Udayavani, May 2, 2017, 3:51 PM IST
ಆಳಂದ: ತಾಲೂಕಿನ ಭೂಸನೂರ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆ 400 ಕೂಲಿ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಉಚಿತ ಪ್ರವಾಸ, ಸಂಬಂಧಿತ ಯೋಜನೆಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಹಾಗೂ ನಿವೇಶನ ಇದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಾಣ ಸೇರಿ ಇನ್ನಿರ ಬೇಡಿಕೆಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ ಭರವಸೆ ನೀಡಿದರು.
ತಾಲೂಕಿನ ಭೂಸನೂರ ಗ್ರಾಪಂ ಆಶ್ರಯದಲ್ಲಿ ಸೋಮವಾರ ಅಮರ್ಜಾ ನದಿಯಲ್ಲಿ ಪ್ರಾರಂಭಿಸಲಾದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸ್ಥಳದಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಪಂ ನಿವೇಶನ ಇದ್ದರೆ ಸರಿ. ಇಲ್ಲವಾದಲ್ಲಿ ಕಂದಾಯ ಇಲಾಖೆ ನಿವೇಶನ ಒದಗಿಸಲಾಗುವುದು.
ಅದು ಸಹ ಲಭ್ಯ ಇಲ್ಲದಿದ್ದಲ್ಲಿ ಖಾಸಗಿ ಜಮೀನು ಸ್ವಾಧಿಧೀನ ಮಾಡಿಕೊಂಡು ನಿವೇಶನ ಒದಗಿಸಲಾಗುವುದು ಎಂದು ಹೇಳಿದರು. ವಿಶೇಷ ಯೋಜನೆ ಅಡಿ ಮನೆ ಮತ್ತು ನಿವೇಶನ ವಂಚಿತರ ಮತ್ತು ವಿಧವೆಯರ, ಅನಾಥರ, ಕುಷ್ಟರೋಗಿಗಳ ಪಟ್ಟಿ ಸಲ್ಲಿಸಿದರೆ ಅವರಿಗೂ ಮನೆ, ನಿವೇಶನ ಒದಗಿಸಲಾಗುವುದು. ಈ ಕುರಿತು ವರದಿ ನೀಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯ ರೆಡ್ಡಿ ಅವರಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿ ಮದ್ಯ ಸೇವಿಸಿ ಪತಿ, ಮಕ್ಕಳು ಹಾಳಾಗುತ್ತಿದ್ದಾರೆ. ನಾವು ಕೆಲಸ ಮಾಡಿದ ಹಣ ಪಡೆದು ಕುಡಿದು ಹಾಳು ಮಾಡುತ್ತಿದ್ದಾರೆ. ಮದ್ಯ ಮಾರಾಟ ತಡೆಯಬೇಕು ಎಂದು ಕೂಲಿ ಕಾರ್ಮಿಕ ಮಹಿಳೆ ಗಂಗಾಬಾಯಿ ಸೇರಿ ಇನ್ನಿತರರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.
ಕಷ್ಟಸುಖ ಆಲಿಸಿದರು: ಸುಮಾರು ಒಂದೂವರೆ ಗಂಟೆ ಕಾರ್ಮಿಕರ ಕಷ್ಟ-ಸುಖ ಆಲಿಸಿದ ಡಿಸಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು, ಉದ್ಯೋಗ ಖಾತ್ರಿ ಕೂಲಿ ಹಣ ಸಮಯಕ್ಕೆ ಬರುತ್ತಿದೆಯೇ? ಬಂದ ಹಣದಿಂದ ಏನು ಮಾಡುತ್ತೀರಿ?
ಮನೆಯಲ್ಲಿ ಶೌಚಾಲಯ ಇಲ್ಲದವರು ಕಡ್ಡಾಯವಾಗಿ ಕಟ್ಟಿಸಿಕೊಳ್ಳಬೇಕು ಎಂದು ಹೇಳಿದರು. ಜಾಗ ಇಲ್ಲದವರಿಗೆ ಸರ್ಕಾರಿ ಜಾಗದಲ್ಲಿ ಪ್ರತ್ಯೇಕ ಶೌಚಾಲಯ ಕಟ್ಟಿ ಸಂಖ್ಯೆ ಹಾಕಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಣ್ಣಗೌಡ ಪಾಟೀಲ ಅವರಿಗೆ ಸೂಚಿಸಿದರು.
ವರ್ಗಾಯಿಸಬೇಡಿ: ಕಾರ್ಮಿಕರಾದ ಶಿವಕಾಂತವ್ವ ಮತ್ತು ಮಲ್ಲಮ್ಮ ಮಾಂಗ ಇತರರು ನಮಗೆ ಇದೇ ವರ್ಷ ಉದ್ಯೋಗ ಖಾತ್ರಿ ಕೆಲಸ ಸಿಕ್ಕಿದೆ. ಹಿಂದೆ ಕೆಲಸದ ಹೆಸರಿನಲ್ಲಿ ಮಧ್ಯವರ್ತಿಗಳು ನಮ್ಮ ಹಣ ಎತ್ತಿ ಹಾಕಿದ್ದಾರೆ. ನಿರಂತರವಾಗಿ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ.
ಪಿಡಿಒ ರಾಜಣ್ಣ ಅವರು ಬಂದ ಬಳಿಕ ಇದರ ಮಹತ್ವ ತಿಳಿಸಿಕೊಟ್ಟಿದ್ದರಿಂದ ಕೆಲಸಕ್ಕೆ ಬಂದಿದ್ದೇವು. ಇದರಿಂದ ಕುಟುಂಬದಲ್ಲಿ ಆರ್ಥಿಕ ನಿರ್ವಹಣೆ ಮಾಡಲು ಅನುಕೂಲವಾಗುತ್ತಿದೆ. ಪಿಡಿಒ ರಾಜಣ್ಣ ಅವರೇ ಇಲ್ಲಿಯೇ ಇರಬೇಕು ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಸ್ಪಂದಿಸುವುದಾಗಿ ಹೇಳಿದರು.
ಕಾರ್ಮಿಕರ ಬೇಡಿಕೆ: ಉದ್ಯೋಗ ಖಾತ್ರಿ 100 ದಿನಗಳ ಕೆಲಸ ಬದಲು 150 ದಿನಕ್ಕೆ ಮತ್ತು 300 ರೂ. ಕೂಲಿ ಹೆಚ್ಚಳ, ಕಾರ್ಮಿಕ ಇಲಾಖೆ ಕಾರ್ಡ್, ಉಚಿತ ಆರೋಗ್ಯ ತಪಾಸಣೆ, ಹೊಲಗಳಲ್ಲಿ ಬದು ನಿರ್ಮಾಣ ಕಾಮಗಾರಿ, ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಸೇರಿ ಇನ್ನಿತರ ಬೇಡಿಕೆ ಮನವಿಯನ್ನು ಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ರೇವಣಸಿದ್ದ ತಾವರಖೇಡ ಅವರು ಕಾಮಗಾರಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.