ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆಗೆ ವೈಜನಾಥ ಆಗ್ರಹ 


Team Udayavani, Aug 11, 2018, 4:22 PM IST

11-agust-15.jpg

ಚಿಂಚೋಳಿ: ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಇರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದರಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ವೈಜನಾಥ ಪಾಟೀಲ ಚಿಂಚೋಳಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹೈದ್ರಾಬಾದ ಮೂಲದ ಟಬೋ ಕಂಪನಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಾಗಿ ಹೇಳಿ ಕಾರ್ಖಾನೆ ಹೆಸರಿನಲ್ಲಿ ಇರುವ ಆಸ್ತಿ ಮೇಲೆ ಹೈದ್ರಾಬಾದ್‌ ನಲ್ಲಿರುವ ಪಂಜಾಬ ನ್ಯಾಶನಲ್‌ ಬ್ಯಾಂಕ್‌ನಲ್ಲಿ 380ಕೋಟಿ ರೂ.ಸಾಲ ಪಡೆದುಕೊಂಡಿತ್ತು. ಆದರೆ ಚಿಂಚೋಳಿ ಸಕ್ಕರೆ ಕಾರ್ಖಾನೆ ಮಾಲೀಕರು ಅಭಿವೃದ್ಧಿ ಕೆಲಸಗಳನ್ನು ಕೇವಲ ತೋರಿಕೆಗಾಗಿ ಮಾಡಿ ನಂತರ ಸ್ಥಗಿತಗೊಳಿಸಿತು ಎಂದು ದೂರಿದರು.

ಕಾರ್ಖಾನೆ ಪ್ರಾರಂಭದಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸದೇ ತುಂಬಾ ಹಳೆಯದಾಗಿರುವ ಕಬ್ಬು ನುರಿಸುವ ಯಂತ್ರ ಮತ್ತು ಹೊಗೆ ಹೊರಗೆ ಹಾಕುವ ಚಿಲುವೆ ಅಳವಡಿಸಿ ಯಂತ್ರ ತಯಾರಿಕೆ ಕಂಪನಿಗಳಿಂದ ಬಿಲ್ಲು ಪಾವತಿಸಿಕೊಂಡಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭಗೊಳ್ಳಲಿದೆ ಎನ್ನುವ ವಿಷಯ ಅರಿತ ರೈತರು ಬ್ಯಾಂಕಿನಿಂದ ಲಕ್ಷಾಂತರ ರೂ. ಸಾಲ ಪಡೆದು ಕಬ್ಬು ಬೆಳೆದರು. ಆದರೆ ಚಿಂಚೋಳಿ ಸಕ್ಕರೆ ಕಾರ್ಖಾನೆ ರೈತರು ಬೆಳೆದ ಕಬ್ಬು ಖರೀದಿಸಲೇ ಇಲ್ಲ. ಕಡೆಗೆ ಆಕ್ರೋಶಗೊಂಡ ಕೆಲವು ರೈತರು ಕಡಿಮೆ ಬೆಲೆಗೆ ಮಾರಿದರೆ, ಇನ್ನು ಕೆಲವರು ಹೊಲದಲ್ಲಿಯೇ ಕಬ್ಬು ಸುಟ್ಟು ಹಾಕಿದರು ಎಂದು ಅಸಮಾಧಾನ ವಕ್ತಪಡಿಸಿದರು.

ಹೈದ್ರಾಬಾದ್‌ನ ಟಬೋ ಕಂಪನಿ ಜಾರ್ಖಂಡ ರಾಜ್ಯದಲ್ಲಿಯೂ ಇದೇ ರೀತಿ ವಂಚಿಸಿದೆ. ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಪಡೆದುಕೊಂಡ ಸಾಲವನ್ನು ಕಾರ್ಖಾನೆ ಅಭಿವೃದ್ಧಿಗೆ ಬಳಸದೇ ಜೈದ್ರಾಬಾದಿನಲ್ಲಿನ ಟರ್ಬೊ ಕಂಪನಿಯ ಶಿಕ್ಷಣ ಸಂಸ್ಥೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಚಿಂಚೋಳಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದಾರೆ. ನಾವು ನೀಡಿದ ದೂರಿನ ಮೇರೆಗೆ ಸಿಬಿಐ ತಂಡ ಚಿಂಚೋಳಿಗೆ ಇನ್ನು ವರೆಗೂ ಭೇಟಿ ನೀಡಿಲ್ಲ. ಚಿಂಚೋಳಿ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ನಡೆದಿರುವ ಸಾಲದ ವಂಚನೆ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಸದಸ್ಯ ಗೌತಮ ಪಾಟೀಲ ಮಾತನಾಡಿದರು. ಆರ್‌. ಗಣಪತರಾವ್‌, ಉಮೇಶ ಪಾಟೀಲ, ಸತೀಶ ಇಟಗಿ, ಶಿವರಾಜ ಸಿಂಧೋಲ, ದಿಲೀಪ ಪಾಟೀಲ, ಮಲ್ಲಿಕಾರ್ಜುನ ಭೂಶೆಟ್ಟಿ, ಪ್ರಭು ಲೇವಡಿ, ಜಗನ್ನಾಥರೆಡ್ಡಿ ತುಮಕುಂಟಾ, ಶರಣಗೌಡ ಮುದ್ದಾ, ತಮ್ಮರೆಡ್ಡಿ ಕೊಳ್ಳೂರ, ತಿಪ್ಪಾರೆಡ್ಡಿ ಭಂಟ್ವಾರ, ಚೆನ್ನಬಸಪ್ಪ ಪಾಟೀಲ, ರಾಜಪ್ಪ ಪೂಜಾರಿ, ರಮೇಶ ಸೀಳಿನ, ಶಂಕರ ಕೊಳ್ಳೂರ, ಬಕ್ಕಪ್ಪ ಕೊಳ್ಳೂರ, ಸಂತೋಷ ರೆಡ್ಡಿ, ರಾಜಶೇಖರ ಪಾಟೀಲ, ಶಂಕರ ಶಿವಪುರಿ, ಪರೀಧ ನಾಗಾಇದಲಾಯಿ ಇದ್ದರು.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

Sedam-yathre

Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್‌ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.