ಬಲಿದಾನಗಳ ಉಡುಗೊರೆ ಸ್ವಾತಂತ್ರ್ಯ
Team Udayavani, Aug 16, 2017, 11:22 AM IST
ಕಲಬುರಗಿ: ಭಾರತಕ್ಕೆ ಸುಖಾ ಸುಮ್ಮನೆ ಸ್ವಾತಂತ್ರ್ಯ ದೊರಕಲಿಲ್ಲ. ಅದಕ್ಕಾಗಿ ಸಾವಿರಾರು ಜನ ದೇಶ ಭಕ್ತರ ತ್ಯಾಗ, ಬಲಿದಾನಗಳ ಆಗಿ ಹೋಗಿವೆ. ಅದರಿಂದಾಗಿ ನಮಗೆ ಸ್ವಾತಂತ್ರ್ಯದ ಉಡುಗೊರೆ ದೊರೆತಿದೆ ಎಂದು ಕಾಡಾ ಅಧ್ಯಕ್ಷ ಮಹಾಂತಪ್ಪಾ ಕೆ. ಸಂಗಾವಿ ಹೇಳಿದರು. ಅವರು, ನಗರದ ದರಿಯಾಪುರ ಬಡಾವಣೆಯಲ್ಲಿರುವ ಕಾಡಾ ಕಚೇರಿಯಲ್ಲಿ 71 ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು. ಆ.15 ಕೇವಲ ಸ್ವಾತಂತ್ರ್ಯ ದಿನವಷ್ಟೇ ಅಲ್ಲ, ದೇಶಕ್ಕಾಗಿ ಜೀವತ್ಯಾಗ ಮಾಡಿದವರನ್ನು
ನೆನೆಯುವ ದಿನವೂ ಆಗಿದೆ. ನಾವು ಅಹಿಂಸೆ ಮಾರ್ಗ ಅನುಸರಿಸಿ ಸ್ವಾತಂತ್ರ್ಯ ಪಡೆದಿದ್ದೇವೆ. ಮಹಾತ್ಮಾಗಾಂಧಿ ನೇತೃತ್ವದಲ್ಲಿ ಅನೇಕ ಹೋರಾಟಗಳಾದವು. ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಅಸಹಕಾರ ಅಂದೋಲನ ಮುಂತಾದವುಗಳಿಂದ ಭಾರತದ ಜನಶಕ್ತಿಯನ್ನು ಅರಿತ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು ಎಂದರು. ಆಡಳಿತಾಧಿಕಾರಿ ಚವ್ಹಾಣ ಉನ್ಯಾ
ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ನಡೆದ ಹೋರಾಟದ ಹಾದಿಗಳನ್ನು ಮೆಲುಕು ಹಾಕಿದರು. ಕಾಡಾ ನಿರ್ದೇಶಕರಾದ ದಶರಥ ಬಾಬು ವಂಟಿ, ಮಾರುತಿರಾವ್, ದೇವಿಕಾ ಆರ್.ಶ್ರೀಕಟ್ಟಿ ರಾಠೊಡ, ಸುರೇಶ ಕಮ್ಮಣ್ಣ, ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಹಾಗೂ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.