ಆ.15ರಿಂದ 30 ಮೆಗ್ಯಾವಾಟ್ ವಿದ್ಯುತ್ ಉತ್ಪಾದನೆ
ಕೇಂದ್ರ ಸರಕಾರದಿಂದ ಸಿಗುವ ಎಲ್ಲ ಸಹಾಯ ಸಹಕಾರ ನೀಡುತ್ತೇನೆ
Team Udayavani, Jun 28, 2022, 5:51 PM IST
ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಇನ್ನು ಮುಂದೆ ಶಾಪ ಮುಕ್ತವಾಗುವುದಕ್ಕಾಗಿ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಉತ್ಪಾದನೆ ಕೆಲಸಗಳು ಭರದಿಂದ ನಡೆಯುತ್ತಿವೆ. ಒಟ್ಟು 450 ಕೋಟಿ ರೂ.ಯೋಜನೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಜೋಡಣೆ ನಡೆಯುತ್ತಿದ್ದು, 30 ಮೆಗ್ಯಾವಾಟ್ ವಿದ್ಯುತ್ ಉತ್ಪಾದನೆ ಆಗಸ್ಟ್ 15ಕ್ಕೆ ಪ್ರಾರಂಭ ಆಗಲಿದೆ ಎಂದು ವಿಜಯಪುರ ಶಾಸಕರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ವಿಭಾಗದಿಂದ ಸಿದ್ಧಸಿರಿ ಸಂಕೀರ್ಣಗಳ, ಗೋಶಾಲೆ, ಸಿಬಿಎಸ್‌ಸಿ ಪಬ್ಲಿಕ್ ಶಾಲೆ, 108 ಹಾಸಿಗೆವುಳ್ಳ ಆಸ್ಪತ್ರೆ, ಎಸ್.ಮಾರ್ಟ್, ಕಲ್ಯಾಣ ಮಂಟಪ, ಕೃಷಿ ಸೇವಾ ಕೇಂದ್ರ, ಇಂಧನ ಕೇಂದ್ರಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು 37.74ಕೋಟಿ ರೂ.ಗಳನ್ನು ನೀಡಿ ಹರಾಜು ಟೆಂಡರ್‌ನಲ್ಲಿ ಪಡೆದುಕೊಂಡಿದ್ದೇನೆ. ದೇಶದಲ್ಲಿಯೇ 4.23 ಲಕ್ಷ ಟನ್ ಎಥೆನಾಲ್ ಉತ್ಪಾದನೆ 10 ಟನ್ ಸಿಎನ್‌ಜಿ ಉತ್ಪಾದಿಸಲಾಗುವುದು. 213 ಎಕರೆ ಜಮೀನುದಲ್ಲಿ 96 ಎಕರೆ ಜಮೀನು ಕಾರ್ಖಾನೆಗೆ ಒಳಪಟ್ಟಿದೆ. 113 ಎಕರೆ ಪಂಜಾಬ್ ಬ್ಯಾಂಕ್ ನೀಡುತ್ತಿದೆ. ಮುಂದಿನ ವರ್ಷ 10 ಲಕ್ಷ ಟನ್ ಎಥೆನಾಲ್ ಉತ್ಪಾದನೆ ಮಾಡಲಾಗುವುದು. ರೈತರು ನಮ್ಮ ಮೇಲೆ ವಿಶ್ವಾಸ ಇರಬೇಕು. ಈಗಾಗಲೇ ಕಾರ್ಖಾನೆಯಲ್ಲಿ 154 ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗಿದೆ ಎಂದರು.
ನಾನು ಯಾರಿಗೂ ಲಂಚ ಕೊಡುವುದು ಇಲ್ಲ ಲಂಚ ಕೊಟ್ಟಿದ್ದರೆ ನಾನು ಆಗಲೇ ಮಂತ್ರಿಯಾಗುತ್ತಿದ್ದೆ. ನಮ್ಮಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಗುಂಡಾಗಿರಿಯಿಂದಲೇ ರಾಜಕೀಯ ಪ್ರಾರಂಭಿಸಿದ್ದೇನೆ. ಚಿಂಚೋಳಿ ತಾಲೂಕು ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತಹದಾಗಲಿದೆ. ನನಗೆ ಇಳಿಸುವುದು ಏರಿಸುವುದು ಎಲ್ಲವೂ ಗೊತ್ತಿದೆ. ಮುಂದೆ ನಾನು ಜ್ಯೋತಿಷ್ಯ ಆಗುತ್ತೇನೆ ನಗೆ ಚಟಾಕಿ ಹಾರಿಸಿದರು.
ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ನಮ್ಮ ಮತಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಎಥೆನಾಲ್ ಮತ್ತು ಪವರ್ ಘಟಕ ಪ್ರಾರಂಭಿಸುವುದಕ್ಕಾಗಿ 450 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಇನ್ನು ಮುಂದೇ ದೇಶದಲ್ಲಿ ಎಥೆನಾಲ್ ಬೇಡಿಕೆ ಹೆಚ್ಚಾಗಲಿದೆ. ಸಂಸದ ಡಾ|ಉಮೇಶ ಜಾಧವ್ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದರೆ ಈ ಕಾರ್ಖಾನೆ ಪ್ರಾರಂಭಗೊಳ್ಳುತ್ತಿರಲಿಲ್ಲ. ಬಿಜೆಪಿ ಬಂದ ನಂತರ ಎಲ್ಲ ಉತ್ತಮ ಬೆಳವಣಿಗೆ ಆಗಿವೆ. ಕೇಂದ್ರ ಸರಕಾರದಿಂದ ಸಿಗುವ ಎಲ್ಲ ಸಹಾಯ ಸಹಕಾರ ನೀಡುತ್ತೇನೆ ಎಂದು ಸಚಿವ ಖುಬಾ ಭರವಸೆ ನೀಡಿದರು.
ಅರಣ್ಯ ಸಚಿವ ಉಮೇಶ ಕತ್ತಿ ಮಾತನಾಡಿ, ಕಾರ್ಖಾನೆ ಪ್ರಾರಂಭದಿಂದ ಹಿಂದುಳಿದ ಪ್ರದೇಶ ಇನ್ನು ಹೆಚ್ಚು ಅಭಿವೃದ್ಧಿ ಆಗಲಿದೆ. ನಾನು ರೊಕ್ಕ ಕೊಟ್ಟು ಮಂತ್ರಿಯಾಗಿಲ್ಲ. 8 ಸಲ ಶಾಸಕನಾಗಿದ್ದೇನೆ. ಸಚಿವರಾಗಿ ಕೆಲಸ ಮಾಡಿದ್ದರಿಂದ ನನಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಹೇಳಿದರು.ಸಂಸದ ಡಾ| ಉಮೇಶ ಜಾಧವ್ ಮಾತನಾಡಿದರು.
ಶಾಸಕರಾದ ಡಾ|ಅವಿನಾಶ ಜಾಧವ್, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು. ರಾಮನಗೌಡ ಪಾಟೀಲ ಯತ್ನಾಳ, ಜಗದೀಶ ಕ್ಷತ್ರಿ, ಹಾರಕೂಡ ಪೀಠಾಧಿಪತಿ ಡಾ| ಚೆನ್ನವೀರ ಶಿವಾಚಾರ್ಯರು, ಜಗದೇವಿ ಗಡಂತಿ, ಶಿವಶರಣಪ್ಪ ಜಾಪಟ್ಟಿ, ಬಸಯ್ಯ ಹಿರೇಮಠ, ಶಿವಾನಂದ, ಸಾಯಿಬಾಬಾ, ರಮೇಶ ಬೀರಾದಾರ, ಶೈಲಜಾ ಪಾಟೀಲ, ಸೋಮಶೇಖರ ಬಂಡಿ, ಗಣಪತಿ, ಜ್ಯೋತಿಬಾ ಸಿದ್ರಾಮಪ್ಪ ದಂಗಾಪೂರ, ಬಸವಣ್ಣಪ್ಪ ಕುಡಹಳ್ಳಿ ಇನ್ನಿತರಿದ್ದರರು. ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಸಂಗನಬಸಪ್ಪ ಸಜ್ಜನ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.