ಪ್ರಾಚೀನ ಶಿಕ್ಷಣದಲ್ಲಿ ಕಲಬುರಗಿಗೆ ಮುಂಚೂಣಿ ಸ್ಥಾನ
Team Udayavani, Mar 30, 2019, 2:06 PM IST
ಆಳಂದ: ಪ್ರಾಚೀನ ಕರ್ನಾಟಕದ ಶಿಕ್ಷಣ ರಂಗದಲ್ಲಿ ಕಲಬುರಗಿ ಜಿಲ್ಲೆ ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಡಾ| ಶ್ರೀನಿವಾಸ ಸಿರನೂರಕರ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ಮತ್ತು ಪರಂಪರೆ ಮೇಲೆ ಹೊಸ ಬೆಳಕು ಎನ್ನುವ ಕಾರ್ಯಾಗಾರದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಶೈಕ್ಷಣಿಕ ಪರಂಪರೆ ಕುರಿತು ವಿಷಯ ಮಂಡಿಸಿ ಅವರು ಮಾತನಾಡಿದರು.
ಜಿಲ್ಲೆಯ ಜೇವರ್ಗಿ ತಾಲೂಕಿನ ಅವರಾದಿಯಲ್ಲಿ ಪತ್ತೆಯಾಗಿರುವ ಸುಮಾರು ಎರಡನೇ ಶತಮಾನದ ಶಾತವಾಹನರ ಶಿಲಾಶಾಸನದ ಪ್ರಕಾರ ಆ ಗ್ರಾಮದಲ್ಲಿ ವಿದ್ಯಾಲಯ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಪ್ರಾಚೀನ ಕಾಲದ ಸಾಂಸ್ಥಿಕ ಶಿಕ್ಷಣ ಸ್ವರೂಪದ ಅತ್ಯಂತ ಮಹತ್ವದ ಸಂಗ್ರಹವಾಗಿದೆ ಎಂದು ಬಣ್ಣಿಸಿದರು.
ಕ್ರಿ.ಶ. 350ರ ಸುಮಾರಿನ ಶಿವಮೊಗ್ಗ ಜಿಲ್ಲೆಯ ತಾಳಗುಂದಾದ ಅಗ್ರಹಾರವೇ ರಾಜ್ಯದ ಮೊದಲ ಅಗ್ರಹಾರ ಎನ್ನುವ ಖ್ಯಾತಿ ಇದ್ದರೂ, ಇದಕ್ಕೂ ಸಾಕಷ್ಟು ಮುಂಚೆಯೇ ಕಲಬುರ್ಗಿ ಭಾಗದಲ್ಲಿ ಸಾಂಸ್ಥಿಕ ಶಿಕ್ಷಣದ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂದು ಪ್ರತಿಪಾದಿಸಿದರು.
ಪ್ರಾಚೀನ ಶಿಕ್ಷಣ ಯಜ್ಞದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಅನೇಕ ಶಾಸನಗಳಿಂದ ತಿಳಿದು ಬಂದಿದೆ. ಕುಳಗೇರಿಯ ವಿದ್ಯಾ ಕೇಂದ್ರಕ್ಕೆ ಸಾಮಾನ್ಯ ದಾಸಿಯೊಬ್ಬಳು ದಾನ ನೀಡಿದ ಸಂಗತಿ ಮಹತ್ವದ್ದಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಾಗಾವಿ ಘಟಿಕಾ ದಕ್ಷಿಣದ ನಾಳಂದಾ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ನಾಗಾವಿ ಗ್ರಂಥಾಲಯ ಕರ್ನಾಟಕದ ಏಕೈಕ ಶಾಸನೋಕ್ತ ಗ್ರಂಥಾಲಯವಾಗಿತ್ತು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ, ಉರ್ದು ಸಾಹಿತ್ಯ, ವಚನ ಸಾಹಿತ್ಯದ ತವರೂರು ಆಗಿರುವ ಹೈದ್ರಾಬಾದ ಕರ್ನಾಟಕದಲ್ಲಿ ಪ್ರಾಚೀನ ಮತ್ತು ಮಧ್ಯಯುಗದ ಕಾಲದಲ್ಲಿ ಅಗ್ರಹಾರ, ಬ್ರಹ್ಮಪುರಿ, ಮಠ ಮತ್ತು ಘಟಿಕಾ ಎನ್ನುವ ನಾಲ್ಕು ಪ್ರಕಾರದ ಶಿಕ್ಷಣ ಸಂಸ್ಥೆಗಳು ವಿದ್ಯಾದಾನದಲ್ಲಿ ಪ್ರಧಾನ ಪಾತ್ರ ವಹಿಸಿವೆ. 16ನೇ ಶತಮಾನದ ಬೀದರ್‌ನ ಮೆಹಮೂದ್ ಗವಾನ್ ಮದರಸಾ ಒಂದು ವಿಶ್ವವಿದ್ಯಾಲವಾಗಿದ್ದು, ವಿದೇಶಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೆ ಬರುತ್ತಿದ್ದರು ಎಂದು ವಿವರಿಸಿದರು.
ಹೆಸರಾಂತ ಪುರಾತತ್ವ ತಜ್ಞ ಧಾರವಾಡದ ಪ್ರೊ| ರವಿ ಕೋರಿಶೆಟ್ಟರ್ ಭೀಮಾ ಕಣಿವೆಯ ಪ್ರಾಗೈತಿಹಾಸ, ಪಶ್ಚಿಮ ಬಂಗಾಳದ ವಿದ್ಯಾಸಾಗರ್ ವಿಶ್ವವಿದ್ಯಾಲಯದ ಡಾ| ಶಮಿತಾ ಸರ್ಕಾರ್ ಭಾರತದಲ್ಲಿ ಹೈದ್ರಾಬಾದ ಕರ್ನಾಟಕ ವಿಲೀನ ಮತ್ತು ಕರ್ನಾಟಕ ರಾಜ್ಯ ನಿರ್ಮಾಣದ ಮಹತ್ವ ಹಾಗೂ ಹೈದ್ರಾಬಾದನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡಾ| ಡ್ಯಾನಿಷ್ ಮೋಮಿನ್ ಕುತುಬ್ ಶಾಹಿ ಮತ್ತು ಬರೀದ್ ಸುಲ್ತಾನರ ನಾಣ್ಯ ಸಂಪ್ರದಾಯದ ಅರಿವು ವಿಷಯಗಳ ಮೇಲೆ ತಮ್ಮ ಪ್ರಬಂಧ ಮಂಡಿಸಿದರು.
ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಮೊಹ್ಮದ್ ಸಜರುಲ್ ಬಾರಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.