ಖತರ್ನಾಕ್ ಏಣಿ ಗ್ಯಾಂಗ್ ಚೋರಿಯರ ಬಂಧನ
Team Udayavani, Nov 15, 2018, 6:50 AM IST
ಕಲಬುರಗಿ: ನಿರ್ಭಯವಾಗಿ ರಾತ್ರಿ ವೇಳೆ ರಸ್ತೆಗಿಳಿದು ಕಳ್ಳತನದಲ್ಲಿ ತೊಡಗುತ್ತಿದ್ದ ಖತರ್ನಾಕ್ ಏಣಿ ಗ್ಯಾಂಗ್‌ನ ನಾಲ್ವರು ಕಳ್ಳಿಯರನ್ನು ನಗರದ ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಂಗರವಾಡಿಯ ಭಾಗುಬಾಯಿ, ಕವಿತಾ,ರವಿನಾ ಮತ್ತು ಕಲ್ಲಿ ಬಂಧಿತ ಕಳ್ಳಿಯರು. ಬಂಧಿತರು ರಾತ್ರೋ ರಾತ್ರಿ ರಸ್ತೆಯಲ್ಲಿ ಏಣಿ ಹಿಡಿದು ಕಳ್ಳತನಕ್ಕೆ ಇಳಿಯುತ್ತಿದ್ದರು. ರಾತ್ರಿ ವೇಳೆ ಏಣಿ ಹಿಡಿದು ಬಹುಮಹಡಿ ಕಟ್ಟಡದ ಅಂಗಡಿಗಳ ಮೇಲೆ ಹತ್ತಿ, ತಮ್ಮ ಕೈಚಳಕ ತೋರಿಸುತ್ತಿದ್ದರು. ಅ.16ರಂದು ನಗರದ ಬಟ್ಟೆ ಅಂಗಡಿಯೊಂದಕ್ಕೆ ಈ ಚೋರಿಯರು ಒಬ್ಬೊಬ್ಬರಾಗಿ ಏಣಿ ಹತ್ತಿ ಕಳ್ಳತನ ಮಾಡುತ್ತಿದ್ದ
ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬ್ರಹ್ಮಪುರ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಾಲ್ವರನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ. ಬಂಧಿತರೆಲ್ಲರೂ 20ರಿಂದ 30 ವರ್ಷದೊಳಗಿ ನವರಾಗಿದ್ದಾರೆ.
ಇವರ ಕೈಚಳಕಕ್ಕೆ ವ್ಯಾಪಾರಿಗಳು ಬೆಚ್ಚಿ ಬಿದ್ದಿದ್ದಾರೆ. ಗ್ಯಾಂಗ್‌ನಲ್ಲಿ ಬರೀ ಹೆಣ್ಣು ಮಕ್ಕಳೇ ಇದ್ದು, ರಾತ್ರಿಯಲ್ಲಿ ಎಂತಹುದೇ ಕಟ್ಟಡ ಇದ್ದರೂ ಏಣಿ ಮೂಲಕ ಹತ್ತಿ, ಒಳಗೆ ನುಗ್ಗಿ, ಕೈಗೆ ಸಿಕ್ಕ ವಸ್ತುಗಳನ್ನು ದೋಚುತ್ತಿದ್ದರು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.