ಪ್ರತಿನಿಧಿಗಳ ನಿಷ್ಕಾಳಜಿಗೆ ಹಿಡಿದ ಕನ್ನಡಿ
ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ¬ಜನರ ಮೌನ-ಅಧಿಕಾರಿಗಳ ನಿರ್ಲಕ್ಷ್ಯ
Team Udayavani, Jan 4, 2021, 4:18 PM IST
ಅಫಜಲಪುರ: ಸಾಮಾನ್ಯವಾಗಿ ಕಸವನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಹಾಕುವುದು ವಾಡಿಕೆ, ಆದರೆ ಮುಖ್ಯರಸ್ತೆ, ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಹಾಕುತ್ತಿರುವುದರಿಂದ ಜನಸಾಮಾನ್ಯರಿಗೆ ಕಿರಿಕಿರಿ ಆಗುತ್ತಿದೆ.
ತಾಲೂಕಿನ ಗೊಬ್ಬೂರ (ಬಿ) ಗ್ರಾಮ ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿದ್ದು, ಗ್ರಾ.ಪಂಕೇಂದ್ರ ಸ್ಥಳವಾಗಿದೆ. ತಾಲೂಕಿನಲ್ಲಿ ದೊಡ್ಡ ಗ್ರಾಮವಾಗಿದೆ. ಗ್ರಾ.ಪಂನವರು ನಿತ್ಯ ಮುಖ್ಯರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ಹಾಕುವ ಮೂಲಕನೈರ್ಮಲ್ಯ ಸಮಸ್ಯೆಗೆ ಕಾರಣ ವಾಗುತ್ತಿದ್ದಾರೆ. ಗೊಬ್ಬೂರ ಮಾತ್ರವಲ್ಲದೇ ತಾಲೂಕಿನ ಅನೇಕಗ್ರಾಮಗಳಲ್ಲಿ ಕಸದ ಸಮಸ್ಯೆ ತಲೆದೋರಿದ್ದು, ಕಸದ ಸಮಸ್ಯೆ ನಿವಾರಣೆಗೆ ಸಂಬಂಧ ಪಟ್ಟವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಗೊಬ್ಬೂರ (ಬಿ), ಕರ್ಜಗಿಗಳಂತೆ ತಾಲೂಕಿನಮಲ್ಲಾಬಾದ, ಮಾತೋಳಿ, ಅತನೂರ, ಮಣೂರ,ಗೊಬ್ಬೂರವಾಡಿ ತಾಂಡಾ ಸೇರಿದಂತೆ ಬಹುತೇಕರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಗ್ರಾಮಗಳಲ್ಲಿಕಸದ ಸಮಸ್ಯೆ ಕಾಡುತ್ತಿದೆ.
ಕಸ ಹಾಕುವುದು ರಸ್ತೆ ಪಕ್ಕದಲ್ಲೇ: ಗೊಬ್ಬೂರ(ಬಿ) ಗ್ರಾಮದಲ್ಲಿ ಪಂಚಾಯಿತಿಗೆ ಸಂಬಂಪಟ್ಟ ಖಾಲಿ ಗೋಮಾಳಗಳಿದ್ದರೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕಸ ಹಾಕಲಾಗುತ್ತಿದೆ. ಸಾರ್ವಜನಿಕರ ಮನೆ ಕಸ, ಚರಂಡಿಯೊಳಗಿನಕಸ, ಅಂಗಡಿ, ಮುಂಗಟ್ಟುಗಳ ಕಸ ಸೇರಿಸಿಹೆದ್ದಾರಿ ಪಕ್ಕದಲ್ಲಿ ತಂದು ಹಾಕಲಾಗುತ್ತಿದೆ.ಇದರಿಂದ ದುರ್ನತ ಬೀರುತ್ತಿದ್ದು ಗ್ರಾಮಸ್ಥರಿಗೆಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕರ್ಜಗಿಯಲ್ಲೂ ಕಸದ ಸಮಸ್ಯೆ: ತಾಲೂಕಿಇನ್ನೊಂದು ದೊಡ್ಡ ಗ್ರಾ.ಪಂ ಕೇಂದ್ರಸ್ಥಳ, ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿರುವ ಕರ್ಜಗಿಯಲ್ಲೂ ಕಸದ ಸಮಸ್ಯೆ ತಲೆದೋರಿದೆ. ಗ್ರಾಮದಲ್ಲಿನ ಕಸ ತಂದು, ರಸ್ತೆಗಳ ಪಕ್ಕದಲ್ಲಿ ಹಾಕುವ್ಯದರಿಂದ ಸೊಳ್ಳೆ ಉತ್ಪತ್ತಿಯಾಗಿ ಹಗಲು-ರಾತ್ರಿ ಜನರು ನೆಮ್ಮದಿ ಕಳೆದುಕೊಳ್ಳುವಂತೆ ಆಗಿದೆ.
ಸಾರ್ವಜನಿಕರಲ್ಲೂ ಬಂದಿಲ್ಲ ಜಾಗೃತಿ: ಇನ್ನು ಗ್ರಾ.ಪಂನವರು ಗ್ರಾಮದ ಕಸ ತಂದು ರಸ್ತೆಗಳ ಪಕ್ಕದಲ್ಲಿ ಹಾಕುತ್ತಾರೆ. ಜೊತೆಗೆ ಗ್ರಾಮಸ್ಥರು,ಸಾರ್ವಜನಿಕರಲ್ಲೂ ಜಾಗೃತಿ ಮೂಡಿಲ್ಲ.
ನಿಯಮ ಗಾಳಿಗೆ: ಸರ್ಕಾರ ಕಸ ವಿಲೇವಾರಿಗಾಗಿಯೇ ವಿನೂತನ ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ. ಕಸವನ್ನು ಹಸಿ ಮತ್ತುಒಣ ಕಸವೆಂದು ವಿಂಗಡಿಸಿ ಪಂಚಾಯಿತಿಒದಗಿಸಿದ ಕಸದ ತೊಟ್ಟಿಗಳಿಗೆ ಹಾಕುವಂತೆನಿಯಮ ರೂಪಿಸಲಾಗಿದೆ. ಆದರೆ ಕಸವನ್ನುಸರ್ಕಾರದ ನಿಯಮತೆ ವಿಲೇವಾರಿ ಮಾಡದೆಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿಮನಸೋ ಇಚ್ಚೆ ಕಸ ಹಾಕುತ್ತಿದ್ದಾರೆ. ಇದರಿಂದಾಗಿಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವಾಹನಗಳಲ್ಲಿ ಚಲಿಸುವಾಗ ಯಾವುದೇಗ್ರಾಮಗಳು ಬಂದರೂ ತಲೆಬಿಸಿ ಶುರುವಾಗುತ್ತದೆ.ಗ್ರಾಮ ಹತ್ತಿರವಾಗುತ್ತಿದ್ದಂತೆ ಕಸದ ರಾಶಿರಸ್ತೆಗಳ ಪಕ್ಕದಲ್ಲಿರುತ್ತದೆ. ಇದರಿಂದ ದುರ್ನಾತಬೀರುತ್ತದೆ. ಆದ್ದರಿಂದ ಕೂಡಲೇ ಕಸ ವಿಲೆವಾಗಿಗೆಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕಜೆ.ಎಂ ಕೊರಬು ಮನವಿ ಮಾಡಿದ್ದಾರೆ.
ಸರ್ಕಾರದ ನಿಯಮದಂತೆ ಕಸ ವಿಲೇವಾರಿ ಆದರೆ ಯಾವ ಊರುಗಳಲ್ಲೂ ಸಮಸ್ಯೆ ಆಗುವುದಿಲ್ಲ. ಪಂಚಾಯಿತಿಯವರಿಗೆ ಕನಿಷ್ಠ ಕಾಳಜಿ ಇಲ್ಲ. ಸಾರ್ವಜನಿಕರಲ್ಲೂ ಜಾಗೃತಿ ಬಂದಿಲ್ಲ. ಹೀಗಾಗಿ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಕಸ ವಿಲೇವಾರಿಗಾಗಿ ಸರ್ಕಾರ ಕೈಗೊಂಡ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.-ಶ್ರೀಮಂತ ಬಿರಾದಾರ, ಹೋರಾಟಗಾರ
ದೇವಲ ಗಾಣಗಾಪುರ, ಮಾಶಾಳ ಸೇರಿದಂತೆ ನಾಲ್ಕೈದು ಕಡೆ ಮಾತ್ರಸ್ಥಳ ಮತ್ತು ವಾಹನ ಸೌಕರ್ಯವಿದೆ.ಉಳಿದ ಕಡೆ ವಾಹನವಿದ್ದರೆ ನಿವೇಶನವಿಲ್ಲ,ನಿವೇಶನವಿದ್ದಲ್ಲಿ ವಾಹನ ಸಮಸ್ಯೆ ಇದೆ.ಇದಕ್ಕಾಗಿ 100ಹಿ100 ನಿವೇಶನ ಬೇಕು.ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. -ನಬಿಸಾಬ್, ತಾ.ಪಂ, ಇಒ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.