ಅವೈಜ್ಞಾನಿಕ ಶಿಕ್ಷಣ ಪದ್ಧತಿ ತೊಲಗಲಿ
Team Udayavani, Jan 7, 2019, 6:34 AM IST
ವಾಡಿ: ದೇಶದ ಶಾಲಾ ಪಠ್ಯ ಪುಸ್ತಕಗಳು ಕೋಮುವಾದಿಕರಣದಿಂದ ಕೂಡಿವೆ. ಮಕ್ಕಳಿಗೆ ಅವೈಜ್ಞಾನಿಕ ಶಿಕ್ಷಣ ಬೋಧಿಸಲಾಗುತ್ತಿದೆ. ಈ ಪದ್ಧತಿ ತೊಲಗಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್ ಹೇಳಿದರು.
ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಐಡಿಎಸ್‌ಒ ಸಂಘಟನೆಯ 65ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತಮಾಡಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಧರ್ಮಾತೀತ ಪ್ರಜಾಸತ್ತಾತ್ಮಕ ವೈಜ್ಞಾನಿಕ ಶಿಕ್ಷಣ ಬೋಧನೆ ಇಂದಿನ ಅಗತ್ಯವಾಗಿದೆ. ಶಿಕ್ಷಣ ವ್ಯಾಪಾರದ ಸರಕಾಗಿದೆ. ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಲಭ್ಯವಾಗುತ್ತಿದೆ. ಬಡ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾಧಿಸಿದರು. 1954ರ ಡಿಸೆಂಬರ್ ತಿಂಗಳಲ್ಲಿ ಮಹಾನ್ ಮಾರ್ಕ್ಸ್ವಾದಿ ಚಿಂತಕ ಕಾಮ್ರೇಡ್ ಶಿವದಾಸ ಘೋಷ್ ಅವರಿಂದ ಎಐಡಿಎಸ್‌ಒ ಸ್ಥಾಪನೆಗೊಂಡಿದೆ. ದೇಶಾದ್ಯಂತ ಶಿಕ್ಷಣ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸುವ ಜತೆಗೆ ನೈತಿಕ ಮೌಲ್ಯಗಳನ್ನು ಬಿತ್ತಲಾಗುತ್ತಿದೆ.
ಅಶ್ಲೀಲ ಸಿನೆಮಾ, ಸಾಹಿತ್ಯ ಮತ್ತು ಕುಸಂಸ್ಕೃತಿಗಳ ವಿರುದ್ಧ ಜನಪರ ಹೋರಾಟಗಳನ್ನು ಕಟ್ಟಿದೆ. ಭಗತ್ ಸಿಂಗ್, ನೇತಾಜಿ ಸುಬಾಷ್‌ಚಂದ್ರ ಬೋಸ್, ಅಶಾ ಕುಲ್ಲಾ ಖಾನ್ ಅಂತಹ ಮಹಾನ್ ಕ್ರಾಂತಿಕಾರಿಗಳ ಹೋರಾಟದ ಮಾರ್ಗದಲ್ಲಿಯೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಶಿಕ್ಷಣ ಖಾಸಗೀಕರಣ ತೊಲಗಬೇಕು ಮತ್ತು ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಶಿಕ್ಷಣ ಜಾರಿಯಾಗಬೇಕು ಎಂಬುದು ಎಐಡಿಎಸ್‌ಒ ಸಂಘಟನೆಯ ಮುಖ್ಯ ಗುರಿಯಾಗಿದೆ ಎಂದರು.
ಸರಕಾರಿ ಪ್ರೌಢ ಶಾಲೆ ಶಿಕ್ಷಕ ಸಂಜಯ ಮಾನೆ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಹಿರೇಮಠ, ಗೌತಮ ಪರತೂರಕರ,
ಕೃಷ್ಣಾ ಸೈದಾಪುರ, ವಿದ್ಯಾಲತಾ ದೇವಾಪುರ, ಗಾಯತ್ರಿದೇವಿ ಜಿ.ಸಿಂಗ್, ಪ್ರತಾಪಸಿಂಗ್ ಠಾಕೂರ, ಸಂಗೀತಾ ಡಿ. ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.