ಮಗುವಿಗೆ ಗುಣಮಟ್ಟದ ಆಹಾರ ನೀಡಿ
Team Udayavani, Jan 9, 2018, 11:34 AM IST
ಶಹಾಬಾದ: ಗುಣಮಟ್ಟದ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಿ.ಎಂ. ಸಜ್ಜನ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಳಂದದ ವಿಶ್ವ ಜ್ಯೋತಿ ಕಲಾ ತಂಡದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಜನಪದ ಕಲಾ ಪ್ರದರ್ಶನ ಹಾಗೂ ಬೀದಿ ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತ ಶಿಶು ಬೆಳೆಸಿ ಸಮಾಜಕ್ಕೆ ಕೊಡುವಲ್ಲಿ ತಾಯಿಯ ಪಾತ್ರ ಹಿರಿದು. ಸ್ತನ್ಯಪಾನ ಮಾಡಿಸುವುದರಿಂದ ತಾಯಿಯ ಸೌಂದರ್ಯ ಹಾಳಾಗುವುದಿಲ್ಲ. ಬೆಳೆಗಳಲ್ಲಿ ಅತಿಯಾದ ರಾಸಾಯನಿಕ ಬಳಸುವುದು ತಾಯಿ ಹಾಗೂ ಶಿಶುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಆಳಂದದ ವಿಶ್ವ ಜ್ಯೋತಿ ಕಲಾದವರು ಜನಪದ ಹಾಡುಗಳ ಮೂಲಕ ಹಾಗೂ ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ
ಮೂಡಿಸಿದರು. ಸಮುದಾಯ ಆಸ್ಪತ್ರೆಯ ಮೋಹನಕುಮಾರ ಗಾಯಕವಾಡ, ಕೌಸರ್ ನಿಯಾಜ ಮಹ್ಮದ್, ಯೂಸುಫ
ನಾಕೇದಾರ, ಶಿವಶಾಲಕುಮಾರ ಪಟ್ಟಣಕರ್, ಭೀಮಾಶಂಕರ ಕಾಂಬಳೆ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.