41,364 ಮಕ್ಕಳಿಗೆ ಬಿಸಿಯೂಟ ಆಹಾರ ಧ್ಯಾನ ವಿತರಿಸುವ ಗುರಿ
Team Udayavani, Aug 1, 2020, 3:02 PM IST
ಸಾಂದರ್ಭಿಕ ಚಿತ್ರ
ಆಳಂದ: ದೇಶದಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ ಮೇಲಿಂದ ಮೇಲೆ ಲಾಕ್‌ಡೌನ್ ಜಾರಿ ಆಗುತ್ತಿದೆ. ಈ ವೇಳೆ ಮಕ್ಕಳಿಗೆ ಪಠ್ಯ, ಪುಸ್ತಕ, ಸಮವಸ್ತ್ರದೊಂದಿಗೆ ಅಕ್ಕಿ, ಬೆಳೆ, ಎಣ್ಣೆ ನೀಡುತ್ತಿರುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಾಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಡಾ| ರಾಜಕುಮಾರ ಪಾಟೀಲ್ ಹೇಳಿದರು.
ತಾಲೂಕಿನ ಧಂಗಾಪುರ ಪ್ರತಿಬಿಂಬ ಸೇವಾ ಸಂಸ್ಥೆ ಕಾರ್ಯಾಯದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಆಹಾರ ಧ್ಯಾನ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಒಟ್ಟು 279 ಶಾಲೆಗಳು ಅನುದಾನಿತ ಮತ್ತು ಸರಕಾರಿ ಪ್ರೌಢಶಾಲೆ 59 ಇದ್ದು, ಒಟ್ಟು 41,364 ಮಕ್ಕಳು ಇದ್ದಾರೆ. 3 ಎನ್‌ಜಿಒ ಮುಖಾಂತರ 1,575 ಮಕ್ಕಳು ಒಳಪಡುತ್ತವೆ. ಒಟ್ಟು 19 ಸಾವಿರ ಕ್ವಿಂಟಲ್ ಅಕ್ಕಿ ಗುರಿ ಇದ್ದು, ಅದರಲ್ಲಿ 18 ಸಾವಿರ ಕ್ವಿಂಟಲ್ ಲಭ್ಯವಿದೆ. 1090 ಕ್ವಿಂಟಲ್ ಬೆಳೆ ಬೇಕಾಗಿದ್ದು, ಅದರಲ್ಲಿ 380 ಕ್ವಿಂಟಲ್ ಬೆಳೆ ಇದೆ. ಈಗಾಗಲೇ 3,032 ಮಕ್ಕಳಿಗೆ ಆಹಾರ ಧ್ಯಾನ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರೌಢಶಾಲೆ ಮುಖ್ಯಗುರು ಸ್ನೇಹಲತಾ ಕುಲಕರ್ಣಿ ಮಾತನಾಡಿ, ನಮ್ಮ ಶಾಲೆಗೆ ಪ್ರತಿಬಿಂಬ ಸೇವಾ ಸಂಸ್ಥೆಗಳ ಮೂಲಕ ಸುಮಾರು ವರ್ಷಗಳಿಂದ ಬಿಸಿಯೂಟ ಪಡೆಯುತ್ತಿದ್ದೇವೆ. ಸಂಸ್ಥೆಯ ಸಹ ಭಾಗಿತ್ವದಲ್ಲಿ ಮಕ್ಕಳಿಗೆ ಆಹಾರ ಧ್ಯಾನ ವಿತರಣೆ ಆಗುತ್ತಿದೆ ಎಂದರು.
ಗ್ರಾಮ ಸುಧಾರಣಾ ಸಮಿತಿಯ ಚಂದ್ರಶೇಖರ ಶೇಗಜಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಕೇಶ ಚವ್ಹಾಣ, ಅಶೋಕ ಗಾಯಕವಾಡ, ಸುರೇಶ ಕುಲಕರ್ಣಿ, ಅಂಬಿಕಾ ಅಷ್ಠಗಿ, ಪುತಳಾಬಾಯಿ ತಳವಾರ ಹಾಗೂ ಹಣಮಂತ ಕುಲಕರ್ಣಿ, ಜಗದೀಶ ಕೋರೆ, ಶಾಂತಪ್ಪ ಕೋರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.