ಸರಕಾರದಿಂದ ಸಾಮೂಹಿಕ ಮದುವೆಯಾಗಲಿ


Team Udayavani, Mar 21, 2017, 4:24 PM IST

gul2.jpg

ಕಲಬುರಗಿ: ಸತತ ಬರ, ನೋಟು ಬ್ಯಾನ್‌ ಪರಿಣಾಮದಿಂದಾಗಿ ರೈತರು, ಗ್ರಾಮೀಣ ಭಾಗದಲ್ಲಿರುವ ಸಾಮಾನ್ಯ ಜನರ ಹಾಗೂ ಹೆಣ್ಣು ಹೆತ್ತವರ ನೆರವಿಗೆ ಬರಲು ಸರಕಾರಗಳೇ ಸಾಮೂಹಿಕ ಮದುವೆ ಮಾಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಆಗ್ರಹಿಸಿದರು. 

ಅಫಜಲಪುರದ ನ್ಯಾಷನಲ್‌ ಫಂಕ್ಷನ್‌ ಹಾಲಿನಲ್ಲಿ ಕರವೇ ಜಿಲ್ಲಾಧ್ಯಕ್ಷ ಶಿವಕುಮಾರ ನಾಟೀಕಾರ ಅವರ 31ನೇ ಜನ್ಮದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾಮೂಹಿಕ ಮದುವೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತು ನಾವು ಸಮಾಜವನ್ನು ಸರಿಯಾದ ಮತ್ತು ಅರ್ಥಪೂರ್ಣ ಮಾರ್ಗದಲ್ಲಿ ನಡೆಸಬೇಕಿದೆ. 

ಜನನ ಮತ್ತು ಸಾವಿನ ಮಧ್ಯೆ ನಾವು ಮಾಡುವ ಕಾರ್ಯಗಳು ಮಾತ್ರವೇ ಕೊನೆ ವರೆಗೆ ಉಳಿಯುತ್ತವೆ. ಅದರಂತೆ ಈ ಸಣ್ಣ ವಯಸ್ಸಿನಲ್ಲಿ ಶಿವಕುಮಾರ ಮಾಡಿರುವ ಕಾರ್ಯಗಳು ಇವತ್ತು ಎಷ್ಟು ಜನಮಾನಸದಲ್ಲಿ ಉಳಿದಿವೆ ಎಂದರೆ ಇವತ್ತು ಇಲ್ಲಿ ಬಂದಿರುವ ಸಾವಿರಾರು ಜನಸಂಖ್ಯೆಯೇ ಸಾಕ್ಷಿಯಾಗಿದೆ ಎಂದು ಹೇಳಿದರು. 

ಬಿಎಸ್‌ಪಿ ರಾಜ್ಯಾಧ್ಯಕ್ಷ ಹಾಗೂ ಪ್ರಗತಿಪರ ಚಿಂತಕ ಎನ್‌. ಮಹೇಶ ಮಾತನಾಡಿ, ಇವತ್ತು ರಾಜಕಾರಣ ಬದಲಾಗುತ್ತಿದೆ. ಸಮಾಜದಲ್ಲಿನ ಚಟುವಟಿಕೆಗಳು ಬದಲಾಗುತ್ತಿವೆ. ಹೊಸ ನೀರು ಬರಬೇಕು. ಹಳೆ ನೀರು ಕೊಚ್ಚಿ ಹೋಗಬೇಕು. ಆಗಲೇ ಸುಂದರ ಪರಿಸರ ನಿರ್ಮಾಣವಾಗುತ್ತದೆ.

ಅಫಜಲಪುರ ತಾಲೂಕಿನಲ್ಲಿ ತಳವೂರಿರುವ ಪಾಳೆಗಾರಿಕೆ ಸಂಸ್ಕೃತಿಯನ್ನು ಕಿತ್ತು ಹಾಕಲು ನಾಟೀಕಾರ ಅವರಂತಹ ಬಿಸಿ ರಕ್ತದ ಹುಡುಗರು ಸಜ್ಜಾಗಿದ್ದಾರೆ. ಈ ಹೊಸ ನೀರಿಗೆ ಜಾಗೆ ಕೊಡಲೇಬೇಕು. ಆದ್ದರಿಂದ ಜನರು ಇಂತಹ ವ್ಯಕ್ತಿಯನ್ನು ಶಾಸನ ಸಭೆಯಲ್ಲಿ ಇರುವಂತೆ ನೋಡಿಕೊಳ್ಳಿ. ಆಗಲೇ ಇಂತಹ ವ್ಯಕ್ತಿಗಳು ಇನ್ನಷ್ಟು ಒಳ್ಳೆಯ ಕೆಲಸ ಮಾಡಬಹುದು.

ಆ ಶಕ್ತಿಯನ್ನು ನೀವು ನೀಡಬೇಕು ಎಂದು ಹೇಳಿದರು. ಹವಳಗಾದಲ್ಲಿರುವ ರೇಣುಕಾ ಶುಗರ್ ಮಾಲೀಕರಾದ ವಿದ್ಯಾ ಮೂರಕಂಬಿ ಮಾತನಾಡಿ, ಶಿವಕುಮಾರ ನಾಟೀಕಾರ ಅವರಂತಹ ಯುವಕರಿಂದ ರೈತರಿಗೂ ಹಾಗೂ ಜನ ಸಾಮಾನ್ಯರಿಗೂ ಉತ್ತಮ ಬೆಂಬಲ ಸಿಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ವಿಜಯಕುಮಾರ ಸಾಲಿಮನಿ, ಅಫಜಲಪುರ ತಾಲೂಕಿನ ರಾಜಕಾರಣ ನಿಂತ ನೀರಿನಂತಾಗಿದೆ. ಒಂದೇ ಕುಟುಂಬದ ಪಾಳೆಗಾರಿಕೆ ಕಿತ್ತೂಗೆಯಲು ಸಜ್ಜಾಗಬೇಕು. ಅದಕ್ಕಾಗಿ ಈಗ ಒಬ್ಬ ಸೇನಾಧಿಪತಿ ಸಿಕ್ಕಾಗಿದೆ. ಆದ್ದರಿಂದ ಇನ್ನೂ ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತದೆ.

ಅದಕ್ಕೆ ತಾಲೂಕು ರಾಜಕಾರಣದ ಮತ್ತೂಂದು ಮಗ್ಗಲು ಬದಲಿಸಲಿದೆ ಎಂದು ಹೇಳಿದರು. ಕರವೇ ಜಿಲ್ಲಾಧ್ಯಕ್ಷ ಶೀವುಕುಮಾರ ನಾಟೀಕಾರ  31ನೇ ಜನ್ಮದಿನ ಆಚರಿಸಿಕೊಂಡು ಮಾತನಾಡಿ, ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಮನಸ್ಸಿರಬೇಕು. ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ನನ್ನ ಒಬ್ಬನ ಸಾಧನೆಯಲ್ಲ.

ಇದರ ಹಿಂದೆ ಕರವೇ ಬಳಗದ ಮತ್ತು ಒಳ್ಳೆಯ ಮನಸ್ಸಿನ ಸಹಸ್ರಾರು ಜನರು ಕೈಜೋಡಿಸಿದ್ದಾರೆ ಎಂದು ಹೇಳಿದರು. ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬಸವಕೇಂದ್ರದ ಸದಸ್ಯರು 42 ಜೋಡಿಗಳಿಗೆ ಶಾಸ್ತೊಕ್ತವಾಗಿ ಮಂತ್ರಗಳ ಪಠಣಮಾಡಿ ಮಾಲಂಗ್ಯ ಧಾರಣೆ ಮಾಡಿಸಿದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ಅಫಜಲಪುರ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಬಡದಾಳದ ಚನ್ನಮಲ್ಲ ಶಿವಾಚಾರ್ಯ, ಮಾಜಿ ಸಚಿವ ಎಂ.ಸಿ. ಮನಗೂಳಿ, ಶಿವಾನಂದ ಶಿವಾಚಾರ್ಯರು, ಮಳಖೇಡ ದರ್ಗಾದ ಸೈಯ್ಯದ್‌ ಷಾ ಮುಸ್ತಫ್‌ ಖಾದರಿ, ಮುಖಂಡರಾದ ತಿಪ್ಪಣಪ್ಪ ಕಮಕನೂರ, ಜಿಪಂ ಉಪಾದ್ಯಕ್ಷೆ ಶೋಭಾ ಶಿರಸಗಿ, ಸದಸ್ಯ ಅರುಣಗೌಡ ಪಾಟೀಲ,

ಮತೀನ್‌ ಪಟೇಲ್‌, ಮಕೂºಲ್‌ ಪಟೇಲ್‌, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶರಣಪ್ಪ ಮಾನೇಗಾರ, ರಾಜಗೋಪಾಲರೆಡ್ಡಿ ಮುದಿರಾಜ್‌, ಸೂರ್ಯಕಾಂತ ನಾಕೇದಾರ, ರಾಜು ಬಡದಾಳ, ರಾಜು ಉಕ್ಕಲಿ, ಸಿದ್ದಾರ್ಥ ಬಸರಿಗಿಡ ಇದ್ದರು. ಭಗವಂತರಾಯ ಬೆಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಬಾಪುಗೌಡ ಬಿರಾದಾರ ವಂದಿಸಿದರು. ಸಮಾರಂಭದಲ್ಲಿ 20ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.