ಹಿಡಿತ ಕಳೆದುಕೊಂಡ ತಾಲೂಕು ಆಡಳಿತ
Team Udayavani, Dec 22, 2018, 1:18 PM IST
ಆಳಂದ: ತಾಲೂಕು ಪಂಚಾಯತ ಆಡಳಿತ ಮಂಡಳಿ ನಡೆಸುವ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪದೇಪದೆ ಗೈರಾಗುತ್ತಿರುವುದು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುನರಾವರ್ತನೆ ಆಗಿತ್ತಲ್ಲದೇ ಹಾಜರಾದವರು ಅಸರ್ಮಪಕ ವರದಿ ನೀಡಿದ್ದರಿಂದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತರಾಗಿ ಮೂರು ವರ್ಷವಾದರೂ ಇಲಾಖೆಗಳಲ್ಲಿ ಏನು ನಡೆದಿದೆ ಎನ್ನುವ ಕುರಿತು ಮಾಹಿತಿ ನೀಡುತ್ತಿಲ್ಲ. ಸಭೆಗೆ ಅಧಿಕಾರಿಗಳ ಬದಲು ಸಿಬ್ಬಂದಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಭೂಸೇನಾ ನಿಗಮ, ಬಿಸಿಎಂ ಜೆಸ್ಕಾಂ ಹೀಗೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಗೆ ತಾಪಂ ಅಧ್ಯಕ್ಷರು, ಸದಸ್ಯರು ಬಂದ ಮೇಲೂ ಇಒ ತಡವಾಗಿ ಬರುತ್ತಿದ್ದಾರೆ ಎಂದು ಸದಸ್ಯೆ ಸಂಗೀತಾ ರಾಠೊಡ ಆಕ್ಷೇಪಿಸಿದರೆ, ಇಒ ಅವರು ಯಾವ ಸದಸ್ಯರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಸರಸಂಬಾ ಕ್ಷೇತ್ರದ ಸದಸ್ಯ ಸಾತಲಿಂಗಪ್ಪ ಪಾಟೀಲ ಪ್ರಶ್ನಿಸಿದರು. ಇಲಾಖೆ ಅಧಿಕಾರಿಗಳು ಪ್ರತಿಬಾರಿಯೂ ಸಭೆಗೆ ಗೈರಾಗುತ್ತಾರೆ.
ಹಾಜರಿದ್ದವರು ಪೂರ್ಣ ಮಾಹಿತಿ ನೀಡುತ್ತಿಲ್ಲ. ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ ಎನ್ನುತ್ತಲೇ ಮೂರು ವರ್ಷ ದಿನದೊಡಿದ್ದಾರೆ, ಪೂರ್ಣ ಮಾಹಿತಿಯೊಂದಿಗೆ ಎಲ್ಲ ಅಧಿಕಾರಿಗಳಿಗೂ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಿ ಬಳಿಕ ಸಭೆ ಕರೆಯುವಂತೆ ಸದಸ್ಯ ದೀಪಕ ಸಲಗರ ಒತ್ತಾಯಿಸಿದರು.
ಸದಸ್ಯರ ಮೊಬೈಲ್‌ಗೆ ಇಒ ಸ್ಪಂದಿಸಬೇಕು. ಇಲಾಖೆ ಕಾಮಗಾರಿಗಳ ಬಗ್ಗೆ ವೀಕ್ಷಣೆಗೆ ಸದಸ್ಯರ ಸಮಿತಿ ರಚಿಸಬೇಕು. ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಕೈಗೊಳ್ಳಬೇಕು ಮತ್ತು ತುತ್ತಾರ್ಗಿ ತಾಪಂ ಸಾಮಾನ್ಯ ಸಭೆ ಕರೆಯಬೇಕು ಎಂದು ಹೇಳಿದರು.
ಸಭೆಗೆ ಗೈರಾಗಿದ್ದ ಭೂಸೇನಾ ಅಧಿಕಾರಿ ಜಾಫರ್ ಅವರನ್ನು ಸಂಪರ್ಕಿಸಿದ ಇಒ ಅವರು ಅಲಿ ಸಭೆಗೆ ಮೊಬೈಲ್ ಮೂಲಕ ಕರೆ ಮಾಡಿ ಕರೆಯಬೇಕೋ, ಪೂಜೆ ಮಾಡಿ ಕರೆಯಬೇಕೋ? ಏಕೆ ಸಭೆಗೆ ಬರುತ್ತಿಲ್ಲ. ಸದಸ್ಯರ ಪ್ರಶ್ನೆಗೆ ಯಾರು ಉತ್ತರಿಸಬೇಕು ಎಂದು ಗುಡುಗಿದರು.
ಬೇಸಿಗೆ ಮತ್ತು ಬರಗಾಲ ಎರಡು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಹೇಳಬೇಕೆಂದರೆ ಜೆಸ್ಕಾಂ ಮತ್ತು ಜಿಪಂ ಅಧಿಕಾರಿಗಳೇ ಬಂದಿಲ್ಲ. ಸಭೆ ಮುಂದೂಡಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಕೈ ಮೇಲೆತ್ತುವ ಮೂಲಕ ಆಗ್ರಹಿಸಿದರು. ಆಗ ಇಒ ಅನಿತಾ ಕೊಂಡಾಪುರ ಅನಿವಾರ್ಯವಾಗಿ ಸಭೆ ಮುಂದೂಡಿದರು.
ತಾಪಂ ಅಧ್ಯಕ್ಷೆ ನಾಗಪ್ಪ ಅಶೋಕ ಗುತ್ತೇದಾರ, ಸದಸ್ಯ ಪ್ರಭು ಸರಸಂಬಿ, ಬಸವರಾಜ ಸಾಣಕ, ಶಿವಪ್ಪ ವಾರಿಕ, ಸಿದ್ಧರಾಮ ವಾಘ್ಮೋಡೆ, ಲಕ್ಕಪತಿ ಎಸ್. ಬೋಧನ್, ಮಹಾದೇವಿ ಘಂಟೆ, ಪಾರ್ವತಿ ಮಹಾಗಾಂವ ಇನ್ನಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.