ನಟ ವೈಜನಾಥ ಬಿರಾದಾರಗೆ “ಗೌಡ’ ಪ್ರಶಸ್ತಿ
Team Udayavani, Dec 21, 2021, 1:22 PM IST
ಕಲಬುರಗಿ: ದಿ| ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿ ವರ್ಷಕೊಡುವ ಮಾಡುವ “ಗೌಡಪ್ರಶಸ್ತಿ’ಗೆ ಈ ಬಾರಿ ಹಿರಿಯನಟ ವೈಜನಾಥ ಬಿದಾರಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಭಾಷ್ಚಂದ್ರ ಪಾಟೀಲ ಅವರ 32ನೇ ಪುಣ್ಯಸ್ಮರಣೆ ಪ್ರಯುಕ್ತ ಡಿ.25ರಂದು ಬೆಳಗ್ಗೆ 11 ಗಂಟೆಗೆ ನಗರದ ಡಾ|ಎಸ್.ಎಂ.ಪಂಡಿತ ರಂಗಮಂದಿರದಲ್ಲಿ 5ನೇ ವರ್ಷದ ಗೌಡ ಪ್ರಶಸ್ತಿ ಪ್ರದಾನ ಸಮಾರಂಭ, “ಸಾಹಿತ್ಯ ಬ್ರಹ್ಮ’ ವೆಬ್‌ಸೈಟ್ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಅಂದು ನಟ ವೈಜನಾಥ ಬಿದಾರಾರ ಅವರಿಗೆ ಗೌಡ ಪ್ರಶಸ್ತಿ ಮತ್ತು 11 ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಶ್ರೀನಿವಾಸ ಸರಡಗಿಯ ಚಿಕ್ಕ ವೀರೇಶ್ವರ ಹಿರೇಮಠ ಸಂಸ್ಥಾನದ ಡಾ|ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು “ಸಾಹಿತ್ಯಬ್ರಹ್ಮ’ ವೆಬ್ ಸೈಟ್ ಲೋಕಾರ್ಪಣೆ ಮಾಡಲಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶ ಹೊಸಮನಿ ಅವರು “ನಾಗಚಂದ್ರ’ ಕವನ ಸಂಕಲನ ಬಿಡುಗಡೆಗೊಳಿಸುವರು.
ಗುವಿವಿ ಕುಲಪತಿ ಡಾ| ದಯಾನಂದ ಅಗಸರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಗೌಡ ಗೌರವ ಪುರಸ್ಕಾರ: ಅಪ್ಪಾರಾವ್ ಅಕ್ಕೋಣಿ (ಶರಣ ಸಾಹಿತ್ಯ), ಬಳಿರಾಮ ಮಹಾರಾಜರು (ಧಾರ್ಮಿಕ), ನಾಗಪ್ಪ ಹೊನ್ನಳ್ಳಿ (ಸಂಗೀತ), ಸಿದ್ದರಾಮ ಹೊನ್ಕಲ್ (ಸಾಹಿತ್ಯ), ಡಾ|ವಿಜಯಕುಮಾರ ಪರುತೆ (ಸಾಹಿತ್ಯ), ಡಾ|ಅಹ್ಮದ್ ಪಟೇಲ್ (ವೈದ್ಯಕೀಯ), ಈರಣ್ಣ ಕಂಬಾರ (ಶಿಲ್ಪಕಲಾ), ಮಹೇಶ್ವರಿ ವಾಲಿ(ಸಮಾಜ ಸೇವೆ), ಡಾ| ಸಂಗಮೇಶ ಹಿರೇಮಠ(ಶಿಕ್ಷಣ), ಚಂದ್ರಶೇಖರ ಕೌಲಗಾ (ಮಾಧ್ಯಮ),ಡಾ|ಶರಣಬಸಪ್ಪ ವಡ್ಡನಕೇರಿ (ಸಾಹಿತ್ಯ ಮತ್ತು ಶಿಕ್ಷಣ) ಅವರಿಗೆ ಗೌಡ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಿ.ಎಚ್.ನಿರಗುಡಿ, ಡಾ|ಆನಂದ ಸಿದ್ದಾಮಣಿ, ಮಲ್ಲಿನಾಥ ಇದ್ದರು.
ಪ್ರತಿ ವರ್ಷ “ಗೌಡ ಪ್ರಶಸ್ತಿ’ಯೊಂದಿಗೆ 5 ಗ್ರಾಂ ಚಿನ್ನದ ನಾಣ್ಯ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಬಂಗಾರದ ಬದಲು 11 ಸಾವಿರ ನಗದು ನೀಡಲು ಉದ್ದೇಶಿಸಲಾಗಿದೆ.ಈ ಬಗ್ಗೆ ಟ್ರಸ್ಟ್‌ನಲ್ಲಿ ತೀರ್ಮಾನ ಮಾಡಲಾಗಿದೆ. – ಶರಣಗೌಡ ಪಾಟೀಲ ಪಾಳಾ,ಅಧ್ಯಕ್ಷ, ದಿ.ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.