ಮತದಾನಕ್ಕೂ ಮೊದಲೇ 91 ಗೆಲುವಿನ ನಗೆ
Team Udayavani, Dec 22, 2020, 4:21 PM IST
ಚಿತ್ತಾಪುರ: ತಾಲೂಕು ವ್ಯಾಪ್ತಿಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಸ್ಥಾನಕ್ಕೆ ಹರಾಜು ಪ್ರಕ್ರಿಯೆ ನಡೆದರೂ ಅವಿರೋಧ ಆಯ್ಕೆಯ ಬಣ್ಣಹಚ್ಚುವ ಮೂಲಕ 91 ಅಭ್ಯರ್ಥಿಗಳು ಮತದಾನಕ್ಕೂ ಮೊದಲೇ ಗೆಲುವಿನ ನಗೆ ಬೀರಿದ್ದಾರೆ.
ತಾಲೂಕಿನಲ್ಲಿ ಎರಡನೇ ಹಂತದಲ್ಲಿ ಒಟ್ಟು 27 ಗ್ರಾ.ಪಂ ಪೈಕಿ 24 ಪಂಚಾಯಿತಿಗಳಿಗೆಚುನಾವಣೆ ನಡೆಯಲಿದೆ. ಡಿ. 27ರಂದು 24 ಪಂಚಾಯಿತಿಗಳಲ್ಲಿನ ಒಟ್ಟು 410 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ಆಯೋಗದ ಆದೇಶದಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ನಡೆದಿದೆ. 410 ಸ್ಥಾನಗಳಲ್ಲಿನಾಮಪತ್ರ ಸಲ್ಲಿಸಿದ 1160 ಅಭ್ಯರ್ಥಿಗಳಲ್ಲಿ 302 ಜನ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. 91ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಹೀಗಾಗಿ 319 ಸ್ಥಾನಗಳಿಗೆ 767 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದು, ತಾಲೂಕು ಆಡಳಿತ ಸಿದ್ಧತೆಯಲ್ಲಿ ತೊಡಗಿದೆ.
ಅವಿರೋಧ ಆಯ್ಕೆಯಾದವರು: ಗುಂಡಗುರ್ತಿ-2, ಇವಣಿ-3, ಮಾಡಬೂಳ-1, ದಂಡೋತಿ-1, ಮುಗಳನಾಗಾಂವ-2, ಭಾಗೋಡಿ-7, ರಾವೂರ-32, ಕಮರವಾಡಿ-4, ಕರದಾಳ-3, ಹಲಕಟ್ಟಾ-11, ಅಳ್ಳೊಳ್ಳಿ-7, ಅಲ್ಲೂರ (ಬಿ)-1,ಯಾಗಾಪುರ-13, ಕಡಬೂರ-2, ಸನ್ನತಿ-2ಸೇರಿದಂತೆ ತಾಲೂಕಿನ ವಿವಿಧ ಗ್ರಾಪಂಗಳಲ್ಲಿಒಟ್ಟು 91 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಕೋಟಿ ಅನುದಾನದ ಆಸೆ: ಅವಿರೋಧ ಆಯ್ಕೆಯಾಗುವ ಗ್ರಾ.ಪಂಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲರೇವೂರ ಘೋಷಿಸಿದ್ದಾರೆ. ಹೀಗಾಗಿ ತಾಲೂಕಿನ ಕೆಲ ಗ್ರಾಪಂಗಳು ಈ ನಿಟ್ಟಿನಲ್ಲಿ ಯತ್ನಿಸಿವೆ. ಆದ್ದರಿಂದ ಕೆಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾವೂರ ಗ್ರಾಮ ಪಂಚಾಯಿತಿಯಲ್ಲಿ 32 ಸದಸ್ಯರು ಅವಿರೋಧಆಯ್ಕೆಯಾಗಿದ್ದಾರೆ. ಈ ಮೂಲಕ ಅಧ್ಯಕ್ಷರು ಹೇಳಿದಂತೆ ಕೋಟಿ ರೂ. ಅನುದಾನಕ್ಕೆಮಾನ್ಯತೆ ಪಡೆದಿದೆ. ಮುಂದೆ ಈ ಅನುದಾನಲಭ್ಯವಾಗಬಲ್ಲದೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.
ಹರಾಜು ಪ್ರಕ್ರಿಯೆಗೆ ಅವಿರೋಧ ಬಣ್ಣ :
ಚುನಾವಣೆ ಆಯೋಗದ ನಿಯಮದಂತೆ ಅಭ್ಯರ್ಥಿಗಳನ್ನು ಹರಾಜು ಹಾಕುವುದು ಕಾನೂನಿನ ಪ್ರಕಾರ ಅಪರಾಧ ಹಾಗೂ ನೀತಿ ಸಂಹಿತೆ ಉಲ್ಲಂಘನೆ .ಆದರೆ ಕೆಲ ಗ್ರಾಮಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನಡುವೆ ರಾತ್ರಿ ವೇಳೆ ಹರಾಜು ನಡೆಸಿ, ಬೆಳಗ್ಗೆಅವಿರೋಧ ಆಯ್ಕೆ ಎಂದು ಹೇಳಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳುಹೆಚ್ಚಿವೆ. ಆದರೆ ಈ ಪ್ರಕರಣಗಳಿಗೆ ಸೂಕ್ತದಾಖಲೆ ಸಿಗದ ಪರಿಣಾಮ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
410 ಸ್ಥಾನಗಳಲ್ಲಿ 91 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 319 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು. ಮತದಾನಕ್ಕೆ ತಾಲೂಕು ಆಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳು ಆಯ್ಕೆಯಾದ ಮಾಹಿತಿ ಬಂದರೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. – ಉಮಾಕಾಂತ ಹಳ್ಳೆ, ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.