ಹುಳ ಹಿಡಿದ ಕಾರ್ಮಿಕರ ದಿನಸಿ ಪದಾರ್ಥ
Team Udayavani, Aug 22, 2021, 4:34 PM IST
ಅಫಜಲಪುರ: ಸರ್ಕಾರ ಕೋವಿಡ್‌ಸೋಂಕಿನಿಂದ ತೊಂದರೆಯಲ್ಲಿರುವನೋಂದಾಯಿತ ಕಾರ್ಮಿಕರಿಗೆಸಹಾಯವಾಗುವ ನಿಟ್ಟಿನಲ್ಲಿ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲುಕಾರ್ಮಿಕ ಇಲಾಖೆ ಮೂಲಕಪೂರೈಸಿದ್ದರೂ ಅವು ಕಾರ್ಮಿಕರ ಕೈಸೇರದೇ ಧೂಳು ತಿನ್ನುತ್ತಿವೆ.
ತಾಲೂಕಿನ ಬಂದರವಾಡ ಗ್ರಾಮದಲ್ಲಿಕಾರ್ಮಿಕರಿಗಾಗಿ ಬಂದಿರುವ ಕಿಟ್‌ಗಳುಕಾರ್ಮಿಕರ ಕೈ ಸೇರದೆ ಗ್ರಾ.ಪಂನಲ್ಲಿಧೂಳು ತಿನ್ನುತ್ತಿವೆ. ಸುಮಾರು ದಿನಗಳಿಂದಕಿಟ್‌ಗಳನ್ನು ಇಟ್ಟಲ್ಲೇ ಇಟ್ಟಿದ್ದರಿಂದ ಕಿಟ್‌ನಲ್ಲಿಯ ದಿನಸಿ ಪದಾರ್ಥಗಳಿಗೆ ಹುಳಹತ್ತಿಕೊಳ್ಳುತ್ತಿವೆ.
ಕಾರ್ಮಿಕರ ಸಂಖ್ಯೆಗಿಂತ ಕಡಿಮೆ ಕಿಟ್:ಜಿಲ್ಲೆಯಲ್ಲಿ 1.80 ಲಕ್ಷ ನೋಂದಾಯಿತಕಾರ್ಮಿಕರಿದ್ದಾರೆ. ಈ ಪೈಕಿ ಕೇವಲ94 ಸಾವಿರ ಕಿಟ್‌ಗಳು ಮಾತ್ರಬಂದಿವೆ. ಇದರಲ್ಲಿ ಅಫಜಲಪುರತಾಲೂಕಿನಲ್ಲಿ 18971 ನೋಂದಾಯಿತಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗಾಗಿಕೇವಲ ಆರು ಸಾವಿರ ಕಿಟ್‌ಗಳು ಬಂದಿವೆ.ಇನ್ನು 12 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರಿಗೆಕಿಟ್‌ಗಳ ಕೊರತೆ ಎದುರಾಗಿದೆ.
ಶಾಸಕ ಎಂ.ವೈ. ಪಾಟೀಲ ಆರುಸಾವಿರ ಕಿಟ್‌ಗಳ ಪೈಕಿ 2300 ಕಿಟ್‌ಗಳನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿಕಾರ್ಮಿಕರಿಗೆ ವಿತರಿಸಿದ್ದಾರೆ. ಉಳಿದ3700 ಕಿಟ್‌ಗಳನ್ನು ತಾಲೂಕಿನ 28ಗ್ರಾ.ಪಂಗಳಿಗೆ ಹಂಚಿಕೆ ಮಾಡಲಾಗಿದೆ.ಬಂದರವಾಡದಲ್ಲಿ ಸಮಸ್ಯೆ: ತಾಲೂಕಿನಬಂದರವಾಡ ಗ್ರಾಮದಲ್ಲಿ 159ನೋಂದಾಯಿತ ಕಾರ್ಮಿಕರಿದ್ದುಕೇವಲ 90 ಕಿಟ್‌ಗಳನ್ನು ಕಾರ್ಮಿಕಇಲಾಖೆಯವರು ಗ್ರಾ.ಪಂಗೆ ಹಸ್ತಾಂತರಮಾಡಿದ್ದಾರೆ.
ಆದರೆ 90 ಜನರಿಗೆವಿತರಿಸಿ, ಉಳಿದ 69 ಜನರಿಗೆ ಕಿಟ್‌ನೀಡದಿದ್ದರೇ ಸಮಸ್ಯೆಯಾಗುತ್ತದೆಎಂದು ಗ್ರಾ.ಪಂನವರು ಕಿಟ್‌ಗಳನ್ನುವಿತರಿಸದೇ ಪಂಚಾಯಿತಿಯಲ್ಲೇಇಟ್ಟುಕೊಂಡಿದ್ದಾರೆ. ಇಟ್ಟಲ್ಲೆ ಇಟ್ಟುಕಿಟ್‌ಗಳಿಗೆ ಹುಳ ಹತ್ತಿಕೊಳ್ಳುತ್ತಿವೆ.ಇದೇ ರೀತಿ ಉಳಿದ ಗ್ರಾ.ಪಂಗಳಲ್ಲೂಕಾರ್ಮಿಕರ ಸಂಖ್ಯೆಗಿಂತ ಕಡಿಮೆ ಕಿಟ್‌ಗಳು ಬಂದಿದ್ದರಿಂದ ಕಿಟ್ ವಿತರಣೆಮಾಡಲಾಗುತ್ತಿಲ್ಲ.ಒಟ್ಟಿನಲ್ಲಿ ಕಾರ್ಮಿಕರಿಗಾಗಿ ಸರ್ಕಾರನೀಡಿರುವ ಕಿಟ್‌ಗಳು ಕಾರ್ಮಿಕರಕೈ ಸೇರುತ್ತಿಲ್ಲ.
ಇದ್ದರೂ ಕಾರ್ಮಿಕರಸಂಖ್ಯೆಗಿಂತ ಕಡಿಮೆ ಕಿಟ್ ಬಂದಿದ್ದರಿಂದಹಂಚಿಕೆ ಮಾಡುವವರಿಗೂ ಸಮಸ್ಯೆಕಾಡುತ್ತಿದೆ. ಹೀಗಾಗಿ ಸರ್ಕಾರಮತ್ತು ಕಾರ್ಮಿಕ ಇಲಾಖೆ ಉಳಿದಕಾರ್ಮಿಕರಿಗೂ ಶೀಘ್ರವೇ ಕಿಟ್‌ವಿತರಿಸುವ ಕೆಲಸ ಮಾಡಬೇಕಿದೆ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.