ಜಿಎಸ್‌ಟಿ ನೋಂದಣಿ: ಕರ್ನಾಟಕ ಪ್ರಥಮ
Team Udayavani, Jul 17, 2017, 3:28 PM IST
ಬೀದರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಡಿ ವರ್ತಕರ
ನೋಂದಣಿಗೆ ಜು.22ರ ವರೆಗೆ ಅವಕಾಶವಿದ್ದು, ಶೇ.86ರಷ್ಟು ವರ್ತಕರು ನೋಂದಣಿ ಮಾಡುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ ಹೇಳಿದರು.
ನಗರದ ರಂಗ ಮಂದಿರದಲ್ಲಿ ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಜಿಎಸ್‌ಟಿ ಕುರಿತ ವಿಚಾರಗೋಷ್ಠಿ
ಉದ್ಘಾಟಿಸಿ ಮಾತನಾಡಿದ ಅವರು, ಜನಸ್ನೇಹಿಯಾಗಿರುವ ಜಿಎಸ್‌ಟಿ ಕಾಯ್ದೆ ಒಂದು ದೇಶ- ಒಂದು ತೆರಿಗೆ ನೀತಿ ಹೊಂದಿದ್ದು,
ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. 60 ವರ್ಷಗಳಿಂದ ತೆರಿಗೆ ಕಟ್ಟುತ್ತಲೇ ಬಂದಿದ್ದೇವೆ. ಹಾಗಾಗಿ ಇದು ಹೊಸದೇನಲ್ಲ.
ಹೊಸ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕನ್ನಡದಲ್ಲಿಯೇ ಕಾಯ್ದೆಯ ಮಾಹಿತಿ: ಜಿಎಸ್‌ಟಿ ಕಾನೂನು ಅನುಷ್ಟಾನದಿಂದ ದೇಶದ ಎಲ್ಲ 26 ರಾಜ್ಯಗಳಲ್ಲಿನ ಚೆಕ್‌ಪೋಸ್ rಗಳು ಬಂದ್ ಆಗಲಿವೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆಯ ವಾಹನಗಳು ರಸ್ತೆ ಮೇಲೆ ಗಸ್ತು ತಿರುಗುತ್ತಿರುತ್ತವೆ ಎಂದ ಅವರು, ರಾಜ್ಯದಲ್ಲಿ ಸುಮಾರು 5.20 ಲಕ್ಷ ಜನರು ಜಿಎಸ್‌ಟಿ ವ್ಯಾಪ್ತಿ ಒಳಪಡಲಿದ್ದು, ಕಾಯ್ದೆ ಬಗ್ಗೆ ಕನ್ನಡದಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗಲಿದೆ. ಈ ವಿಶೇಷತೆ ಇರುವುದು ರಾಜ್ಯದಲ್ಲಿ ಮಾತ್ರ.
ಕರ್ನಾಟಕದ ವಾಣಿಜ್ಯೋದ್ಯಮಿಗಳಲ್ಲಿ ಜಿಎಸ್‌ಟಿ ಬಗ್ಗೆ ಇರುವಂತಹ ಆಸಕ್ತಿ ಬೇರೆ ರಾಜ್ಯದ ಉದ್ಯಮಿಗಳಲ್ಲಿಲ್ಲ ಎಂದು ಹೇಳಿದರು.
ಕಲಬುರಗಿ ತೆರಿಗೆ ಇಲಾಖೆಯ ಅಧಿಕಾರಿ ಪದ್ಮಾಕರ ಕುಲಕರ್ಣಿ ಮಾತನಾಡಿ, ತೆರಿಗೆ ವಿಷಯಕ್ಕೆ ಸಂಬಂಧಿ ಸಿದಂತೆ ಗೊಂದಲಗಳಿದ್ದಲ್ಲಿ ಮತ್ತೂಬ್ಬರನ್ನು ಕೇಳಿ ತಿಳಿದುಕೊಳ್ಳಬೇಕು. ಜಿಎಸ್‌ಟಿ ನಿಯಮದಂತೆ ತೆರಿಗೆ ಪಾವತಿಸಿದರೆ ಯಾವ ಬಿಲ್ ಕಲೆಕ್ಟರ್ ಬರುವುದಿಲ್ಲ ಎಂದರು. ಕಲಬುರಗಿಯ ತೆರಿಗೆ ಅಧಿಕಾರಿ ಎಸ್‌ಎಂ ಇನಾಮದಾರ ಪ್ರಾಸ್ತಾವಿಕ ಮಾತನಾಡಿ, 50 ವರ್ಷಗಳಿಂದ ತೆರಿಗೆ, ವ್ಯಾಟ್ ನೋಡಿದ್ದೇವೆ. ಈಗ ಜಿಎಸ್‌ಟಿ ಬಂದಿದೆ ಹೇಗೆ ಎಂದು ಭಯ ಬೇಡ ಎಂದು ಹೇಳಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿ ಕಾರಿಗಳಾದ ಜಿ.ಪಿ ಶ್ರೀನಿವಾಸ, ದಯಾನಂದ, ಸಂಸ್ಥೆಯ ಪ್ರಮುಖರಾದ ಸೋಮಶೇಖರ ಪಾಟೀಲ, ಡಾ| ರಜನೀಶ ವಾಲಿ, ರಾಜಶೇಖರ ಮಿಟಕಾರಿ, ಮಡಿವಾಳಪ್ಪ ಗಂಗಶೆಟ್ಟಿ ಇದ್ದರು. ಡಾ| ವೀರೇಂದ್ರ ಶಾಸ್ತ್ರಿ ಸ್ವಾಗತಿಸಿದರು. ಕಲ್ಯಾಣರಾವ್ ನಿರೂಪಿಸಿದರು. ಜಿಲ್ಲೆಯ ನೂರಾರು ವ್ಯಾಪಾರಸ್ಥರು, ವರ್ತರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಜಿಎಸ್‌ಟಿ ಸರಿಯಾಗಿ ತಿಳಿದುಕೊಳ್ಳಿ
ತೆರಿಗೆಗೆ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಬದಲಾವಣೆ ಆಗಿದೆ. ಆದರೆ, ವ್ಯಾಪಾರ ನಿಂತಿಲ್ಲ. ಮಾರಾಟ ಮಾಡುವ
ವಸ್ತುಗಳ ದರಗಳ ಮೇಲೆ ತೆರಿಗೆ ದರ ತಿಳಿದುಕೊಳ್ಳಬೇಕು. ವರ್ತಕರು ಎಷ್ಟು ತಪ್ಪು ಮಾಡುತ್ತಾರೋ ಅಷ್ಟು ಸರ್ಕಾರಕ್ಕೆ
ಲಾಭವಾಗುತ್ತದೆ. ಹಾಗಾಗಿ ಜಿಎಸ್‌ಟಿ ಸರಿಯಾಗಿ ತಿಳಿದುಕೊಳ್ಳಬೇಕು. ಯಾವುದೇ ವಸ್ತುಗಳನ್ನು ಮಾರಾಟ ಮಾಡಿದರೆ ಮಾರಾಟದ ಸ್ಥಳ ಬರೆಯಬೇಕು. ಈ ಹಿಂದೆ ಬಟ್ಟೆಯ ಮೇಲೆ ತೆರಿಗೆಗೆ ವಿನಾಯಿತಿ ಇತ್ತು. ಈಗ ಶೇ. 5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ವ್ಯಾಪಾರಸ್ಥರು ಸೆ.5ರ ವರೆಗೆ ತಮ್ಮ ರಿಟರ್ನ್ ಫೈಲ್ ಮಾಡಬೇಕು.
ಕೆ.ಎಸ್. ಬಸವರಾಜ, ಇ-ಆಡಿಟ್ ಜಂಟಿ ಆಯುಕ್ತ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.