ಇಂದು ನಾಗಾವಿ ಯಲ್ಲಮ್ಮದೇವಿ ಜಾತ್ರೆ


Team Udayavani, Oct 20, 2021, 2:43 PM IST

gulbarga news

ಚಿತ್ತಾಪುರ: ತಾಲೂಕಿನ ನಾಗಾವಿ ಯಲ್ಲಮ್ಮದೇಗುಲ ದಕ್ಷಿಣ ಭಾರತದ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಷ್ಟ್ರಕೂಟ ಅರಸುಅಮೋಘವರ್ಷ ನೃಪತುಂಗನ ಕುಲದೇವತೆಎಂದೇ ಖ್ಯಾತಿ ಪಡೆದಿರುವ ನಾಗಾವಿ ಯಲ್ಲಮ್ಮದೇವಿ ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿದೇವತೆಯಾಗಿದ್ದಾಳೆ.

ಪಟ್ಟಣದ ಸುಮಾರು 2 ಕಿ.ಮೀ ದೂರದಲ್ಲಿ ಕಲೆ,ಸಾಹಿತ್ಯ, ಶಿಲ್ಪಕಲೆ, ಶಾಸನಗಳಿರುವ ಐತಿಹಾಸಿಕಹಿನ್ನೆಲೆ, ಧಾರ್ಮಿಕ ಪರಂಪರೆ ಹೊಂದಿದ ಭವ್ಯವಾದನಾಗಾವಿ ಯಲ್ಲಮ್ಮ ದೇವಾಲಯವಿದೆ.ಮುಖ್ಯದ್ವಾರ ಪ್ರವೇಶಿಸಿ ಸ್ವಲ್ಪ ಮುಂದೆ ಹೋದರೆನಾಗಶೇಷ ಗುಡಿಯ 60 ಕಂಬಗಳು ಕಾಣಿಸುತ್ತವೆ.

ಈ ಕಂಬದ ಎದುರು ಯಲ್ಲಮ್ಮ ದೇವಿ ಗರ್ಭಗುಡಿಇದೆ. ಯಲ್ಲಮ್ಮ ದೇವಿ ಮೂರ್ತಿ ಬಲ,ಎಡಭಾಗದಲ್ಲಿ ಪುಷ್ಕರಣಿಗಳಿವೆ. ವಿಶಾಲವಾದಪ್ರಾಂಗಣ ಹೊಂದಿರುವ ಈ ದೇವಾಲಯದಲ್ಲಿಭಕ್ತಾದಿಗಳಿಗೆ ಛತ್ರಗಳು ನಿರ್ಮಾಣವಾಗಿವೆ.

ಈ ದೇವಾಲಯ ತುಂಬಾ ಪುರಾತನವಾಗಿದೆ.ಸ್ಕಂದ ಪುರಾಣದಲ್ಲಿ ಕಾಣಿಸಿಕೊಳ್ಳುವ ಶಕ್ತರುಯಲ್ಲಮ್ಮ ದೇವಿ ಆರಾಧಕರಾಗಿದ್ದರು. ಕ್ರಿ.ಶ 2ನೇಶತಮಾನದಲ್ಲಿನ ಮಾರ್ಕಾಂಡೇಯ ಪುರಾಣದಿಂದತಿಳಿದು ಬರುತ್ತದೆ.

ರಾಷ್ಟ್ರಕೂಟರ ಕುಲದೇವತೆ: ಕನ್ನಡ ನಾಡನ್ನಾಳಿದ ಚಕ್ರವರ್ತಿಗಳಾದ ಬಾದಾಮಿ ಚಾಲುಕ್ಯರು ಬನಶಂಕರಿ, ಕಲ್ಯಾಣಿ ಚಾಲುಕ್ಯರು ಚಂದ್ರಲಾ ಪರಮೇಶ್ವರಿ, ವಿಜಯನಗರ ಅರಸರು ಭುವನೇಶ್ವರಿ,ಮೈಸೂರು ಒಡೆಯರು ಚಾಮುಂಡೇಶ್ವರಿಯನ್ನುಕುಲದೇವತೆಯಾಗಿ ಪೂಜಿಸುವಂತೆ ರಾಷ್ಟ್ರ ಕೂಟರುನಾಗಾವಿ ಯಲ್ಲಮ್ಮ ದೇವಿಯನ್ನು ಪೂಜಿಸುತ್ತಿದ್ದರು.

ಯಲ್ಲಮ್ಮ ದೇವಿಗೆ ಕರ್ನಾಟಕ ಮಾತ್ರವಲ್ಲದೇಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತರಾಜ್ಯ ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಿಂದ ಹುಣ್ಣಿಮೆ, ಅಮವಾಸ್ಯೆ, ಪ್ರತಿ ಮಂಗಳವಾರ,ಶುಕ್ರವಾರ ಭಕ್ತಾದಿಗಳು ಅಪಾರ ಪ್ರಮಾಣದಲ್ಲಿಆಗಮಿಸಿ, ದರ್ಶನ ಪಡೆಯುತ್ತಾರೆ. ಆದರೆಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯೂ ಹೊರಜಿಲ್ಲೆ, ತಾಲೂಕು ಹಾಗೂ ರಾಜ್ಯದವರಿಗೆ ದರ್ಶನಕ್ಕೆಅವಕಾಶ ನೀಡಿಲ್ಲ.ದೇವಾಲಯದಲ್ಲಿ ಪ್ರತಿ ವರ್ಷ ಅಶ್ವಯುಜಶುದ್ಧ ಪ್ರತಿಪದೆಯಿಂದ ಘಟಸ್ಥಾಪನೆಯೊಂದಿಗೆಒಂಭತ್ತು ದಿನಗಳ ಕಾಲ ನವರಾತ್ರಿ ಪೂಜೆಗಳುನಡೆಯುತ್ತವೆ.

ಪ್ರತಿದಿನ ದೇವಿಗೆ ವಿಶೇಷ ಪೂಜೆ,ಕುಂಕುಮಾರ್ಚನೆ, ಮಂತ್ರ ಪುಷ್ಪಗಳ ಸೇವೆನಡೆಯುತ್ತದೆ.ಪ್ರತಿ ವರ್ಷ ಸೀಗಿ ಹುಣ್ಣಿಮೆಯಂದು ಪಲ್ಲಕ್ಕಿಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಅ.20ರಂದು ಪಟ್ಟಣದ ಸರಾಫ ಲಚ್ಚಪ್ಪ ನಾಯಕಮನೆಯಲ್ಲಿ ಮಧ್ಯಾಹ್ನ 1:30ಕ್ಕೆ ಮಾಜಿ ಸಚಿವ,ಶಾಸಕ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷಪ್ರಿಯಾಂಕ್‌ ಖರ್ಗೆ, ತಹಶೀಲ್ದಾರ್‌ ಉಮಾಕಾಂತಹಳ್ಳೆ ಅಧ್ಯಕ್ಷತೆಯಲ್ಲಿ ಪಟ್ಟಣದ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವಿಘ್ನೇಶ್ವರ ಪೂಜೆ, ಗುರುಪೂಜೆ,ಪಲ್ಲಕ್ಕಿ ಪೂಜೆ ನಡೆಯುತ್ತದೆ.

ಮಧ್ಯಾಹ್ನ 2 ಗಂಟೆಗೆ ಪಲ್ಲಕ್ಕಿಯು ಪಟ್ಟಣದ ಪ್ರಮುಖ ಬೀದಿಗಳಮುಖಾಂತರ ಹೊರಟು ದೇವಸ್ಥಾನ ತಲುಪುತ್ತದೆ.ದೇವಸ್ಥಾನ ತಲುಪಿದ ನಂತರ ದೇವಸ್ಥಾನದ ಸುತ್ತಐದು ಪ್ರದಕ್ಷಿಣೆ ಹಾಕಿ ದೇವರ ಪಲ್ಲಕಿ ಗರ್ಭ ಗುಡಿ ತಲುಪುತ್ತದೆ.

ಎಂ.ಡಿ ಮಶಾಖ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

2-kalburgi

Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.