ಉನ್ನತ ವ್ಯಕ್ತಿತ್ವದಿಂದ ಗುರುವಿನ ಸ್ಥಾನ ಲಭ್ಯ: ಸಾರಂಗಧರ ಶ್ರೀ
Team Udayavani, Jul 28, 2018, 2:48 PM IST
ಕಲಬುರಗಿ: ಹುಟ್ಟಿದ ಜಾತಿ, ಧರ್ಮದಿಂದ ಗುರುವಾಗಲು ಸಾಧ್ಯವಿಲ್ಲ. ಬದಲಿಗೆ ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅರಿವು ಆಚಾರ, ವಿಚಾರ, ಅನುಭಾವ, ಉನ್ನತ ವ್ಯಕ್ತಿತ್ವ ಹೊಂದಿ, ಸಮಾಜಕ್ಕೆ ತನ್ನದೇ ಆದ ನಿರಂತರ ಕೊಡುಗೆ ನೀಡುತ್ತಾನೋ ಆತನಿಗೆ ಗುರುವಿನ ಸ್ಥಾನ ಲಭ್ಯವಾಗುತ್ತದೆಯೆಂದು ಶ್ರೀಶೈಲ ಸಾರಂಗಧರಮಠ ಹಾಗೂ ಶಹಾಬಜಾರದ ಸುಲಫಲ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ನಗರದ ಆಳಂದ ರಸ್ತೆಯ, ಕೃಷಿ ಮಹಾ ವಿದ್ಯಾಲಯದ ಎದುರುಗಡೆಯಿರುವ ಅಣ್ಣಾರಾವ್ ಬೆಣ್ಣೂರ ಕಲ್ಯಾಣ ಮಂಟಪದಲ್ಲಿ ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶ್ರೀಗಳಿಗೆ ಏರ್ಪಡಿಸಿದ್ದ ಗುರುವಂದನಾ ಸಮಾರಂಭದಲ್ಲಿ ಬಳಗ ಹಾಗೂ ಅನೇಕ ಭಕ್ತವೃಂದದಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
“ಜಗದ್ಗುರು’ ಎಂದು ಕರೆಸಿಕೊಳ್ಳಬೇಕಾದರೆ, ಕೇವಲ ಎತ್ತರದ ಸ್ಥಾನದಲ್ಲಿ ಕುಳಿತರೇ ಸಾಲದು. ಬದಲಿಗೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ನೋವಿಗೆ ಸ್ಪಂದಿಸುವ, ದೀನ, ಶೋಷಿತ, ಬಡವರ ಕಣ್ಣಿರನ್ನು ಒರೆಸುವ ಗುಣ ಹೊಂದಿರಬೇಕು. ಬಳಗದವರು ಹಾಗೂ ಸಮಸ್ತ ಭಕ್ತರು ನನ್ನನ್ನು ಗೌರವಿಸುವ ಮೂಲಕ ಹೆಚ್ಚಿನ ಜನಸೇವೆ ಮಾಡಲು ಸ್ಫೂರ್ತಿ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ಮಾತನಾಡಿ, ಡಾ| ಸಾರಂಗಧರ ಶ್ರೀಗಳು ಸಮಾಜದ ಬಗ್ಗೆ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಇವರೊಬ್ಬ ವ್ಯಕ್ತಿಯಲ್ಲ, ಬದಲಿಗೆ ಅದ್ಭುತ ಶಕ್ತಿಯಗಿದ್ದಾರೆ ಎಂದರು.
“ಸದೃಢ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ’ ಎಂಬ ವಿಷಯದ ಮೇಲೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ರೇವಣಸಿದ್ದಪ್ಪ ದುಕಾನ್ ವಿಶೇಷ ಉಪನ್ಯಾಸ ನೀಡಿದರು. ಬಳಗದ ಅಧ್ಯಕ್ಷ ಎಚ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಕಾಶವಾಣಿ ಸಂಗೀತ ಕಲಾವಿದರಾದ ಅಶ್ವಿನಿ ರಾಜಕುಮಾರ ಹಿರೇಮಠ ಅವರಿಂದ ವಚನ ಗಾಯನ ಹಾಗೂ ಬಸವೇಶ್ವರ ಕಾನ್ವೆಂಟ್ ಶಾಲೆಯ ಮಕ್ಕಳಿಂದ ಪ್ರಸ್ತುತಪಡಿಸಲಾದ ವಚನ ನೃತ್ಯ ಜರುಗಿತು. ಪಂಡಿತ ತಾರನಾಥ ಪ್ರತಿಷ್ಠಾನದ ಡಾ| ಸದಾನಂದ ಪಾಟೀಲ ಅವರಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಜರುಗಿತು.
ಮಕ್ತಂಪುರ ಗುರುಬಸವ ಮಠದ ಪೂಜ್ಯರಾದ ಶಿವಾನಂದ ಮಹಾಸ್ವಾಮಿಗಳ ನೇತೃತ್ವ ಹಾಗೂ ಚವದಾಪುರಿ ಹಿರೇಮಠದ ಪೂಜ್ಯರಾದ ರಾಜಶೇಖರ ಶಿವಾಚಾರ್ಯರ ಸಮ್ಮುಖದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ದಾಲ್ ಮಿಲ್ಲರ್ ಅಸೋಸಿಯೇಶನ್ ಅಧ್ಯಕ್ಷ ಡಾ| ಚಿದಂಬರರಾವ್ ಪಾಟೀಲ, ಅಖೀಲ ಕರ್ನಾಟಕ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಕಲ್ಯಾಣರಾವ್ ಶೀಲವಂತ, ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘ(ದ.ಘ)ದ ಅಧ್ಯಕ್ಷ ಈರಣ್ಣಗೌಡ ಪೊಲೀಸ್ ಪಾಟೀಲ, ಹೈಕೋರ್ಟ್ ನ್ಯಾಯವಾದಿ ಶಿವಕುಮಾರ ಬಿದರಿ, ಆರಾಧನಾ ಪಿಯು ಕಾಲೇಜಿನ ಪ್ರಾಚಾರ್ಯ ಚೇತನಕುಮಾರ ಗಾಂಗಜೀ, ಸೃಷ್ಠಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಂಬಾರಾಯ ಎಸ್.ಹಾಗರಗಿ, ಮಹಾನಂದನವನ ಆಶ್ರಮದ ಪೂಜ್ಯರಾದ ಗುರುಶಾಂತಪ್ಪ ಶೀಲವಂತ, ಚಿಂತಕ ಎಸ್.ಎಸ್. ಬೆಳ್ಳೆ, ಮುಖಂಡ ಅಪ್ಪು ಕಣಕಿ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ವಿಜಯಕುಮಾರ ತೇಗಲತಿಪ್ಪಿ ಹಾಗೂ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.