ಹಳಗನ್ನಡ ಸಾಹಿತ್ಯ ತಳ ಸಮುದಾಯದ ಪ್ರತೀಕ
Team Udayavani, Sep 20, 2022, 2:52 PM IST
ಕಲಬುರಗಿ: ಹಳಗನ್ನಡ ಸಾಹಿತ್ಯ ತಳ ಸಮುದಾಯದ ಸಾಂಸ್ಕೃತಿಕ ಭಾಷೆ, ಆಶಯ, ಲೌಕಿಕ, ಆಗಮಿಕ, ವಸ್ತುಕ, ವರ್ಣಕ ಕಾವ್ಯಗಳನ್ನು ಹೊಂದಿದೆ. ಆದ್ದರಿಂದ ಅದು ಈಗಲೂ ಜನರ ಮಧ್ಯೆ ಜೀವಂತ ಇದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ಶಿವಾನಂದ ಕೆಳಗಿನಮನಿ ವ್ಯಾಖ್ಯಾನಿಸಿದರು.
ಗುವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳಗನ್ನಡ ಕಾವ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳಗನ್ನಡ ಕಾವ್ಯಗಳು ಮಹತ್ವದ ಆಶಯಗಳನ್ನು ಹೊಂದಿದ್ದವು. ಕರ್ನಾಟಕದ ಸಂದರ್ಭದಲ್ಲಿ ಭಾಷೆ, ರಚನೆ, ಸಾಮಾಜಿಕ ತಲ್ಲಣಗಳನ್ನು ಅಸ್ಮಿತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ಸಾಹಿತ್ಯ ರಚನೆಗೊಂಡಿವೆ. ಪ್ರಾಚೀನ ಕಾಲದ ಪಠ್ಯಗಳು ನಾಡಿನ, ವೈವಿಧ್ಯತೆ, ವೈಶಿಷ್ಟ್ಯಗಳನ್ನು ಬಿತ್ತರಿಸುವಂತ ಕಾರ್ಯ ಮಾಡಿವೆ. ಕನ್ನಡ ಅಸ್ಮಿತೆಯ ಬಗ್ಗೆ ಪ್ರಚಾರಗೊಳಿಸುವ ನೆಲೆಯಲ್ಲಿತ್ತು. ಕನ್ನಡ ಅಸ್ಮಿತೆಯ ಬಗ್ಗೆ ಪ್ರಚಾರಗೊಳಿಸುವ ದೆಸೆಯಲ್ಲಿ ಸಾಹಿತ್ಯಕವಾಗಿ ತೊಡಗಿಸಿಕೊಂಡವರು. ಹಳಗನ್ನಡ ಸಾಹಿತ್ಯದಲ್ಲಿ ತಳಸಮುದಾಯದ ಕುರಿತಾಗಿ, ಸುತ್ತ ಮುತ್ತಲಿನ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಕಾವ್ಯ ವಸ್ತುವಾಗಿಸಿಕೊಂಡು ರಚಿಸಿದರು ಎಂದರು.
ರಚನಾ ಬಳಕೆ, ಪ್ರತಿಮೆ ರೂಪಕಗಳು ಗರ್ಭಿಸಿಕೊಂಡು ಕಾವ್ಯ ರಚನೆಗೊಳ್ಳುತ್ತಿದ್ದವು. ಹಳಗನ್ನಡ ಕಾವ್ಯ ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಧ್ವನಿಯೊತ್ತಿದಾತ ಪಂಪ. ಓಲೈಸಿ ಬದುಕುವುದು ಕಟುಕಷ್ಟ ಇಳಾ ನಾದರು ಎಂಬ ಮೊದಲು ಮಾತು. ಹಳಗನ್ನಡದ ಜೈನ ಕಾವ್ಯಗಳು ಜನಸಾಮಾನ್ಯರ ಆಶೋತ್ತರಗಳ ಬಿತ್ತರಿಸುವಂತವು ಆಗಿದ್ದವು. ಕಾವ್ಯಧರ್ಮ-ಧರ್ಮವನ್ನು ಕಾವ್ಯಗಳ ಆಶಯವಾಗಿ ನಿರೂಪಣೆಗೊಂಡಿವೆ. ಪ್ರಭುತ್ವ, ಅಸ್ಥಿತ್ವ, ಅಸ್ಮಿತೆಯೇ ಮೂಲ ದ್ರವ್ಯವಾಗಿ ಕಾವ್ಯಗಳು ಪ್ರಾಚೀನ ಕವಿಗಳು ರಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ| ಎಚ್.ಟಿ. ಪೋತೆ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒಂದು ಪರಂಪರೆಯಿದೆ. ಕವಿರಾಜಮಾರ್ಗ, ವಡ್ಡಾರಾಧನೆಯಂತಹ ಮಹತ್ವ ಕಾವ್ಯಗಳ ರಚನೆಗೊಂಡಿದ್ದು ಈ ಭಾಗದಲ್ಲಿಯೇ, ವಚನಾಂದೋಲನ ಇಡೀ ಜಗತ್ತಿಗೆ ಜಾಗೃತಿ ಮೂಡಿಸಿದಂತ ನಾಡಾಗಿದೆ. ಸಾಂಪ್ರದಾಯಿಕತೆಯ ಅನ್ಯಾಯ, ಅಸಮಾನತೆಯನ್ನು ಕಾಲದಿಂದ ಕಾಲಕ್ಕೆ ವಿರೋಧಿ ಸು ವಂತಹ ಮಹತ್ವದ ಕಾವ್ಯಗಳು ರಚನೆಗೊಳ್ಳುತ್ತ ಬಂದಿವೆ ಎಂದರು.
ಸಾಹಿತ್ಯ ವಿದ್ಯಾರ್ಥಿಗಳು ಸಾಹಿತ್ಯ ಪರಂಪರೆಯನ್ನು ಸ್ಥೂಲವಾಗಿ ಅಧ್ಯಯನ ಮಾಡಬೇಕು. ಹಳಗನ್ನಡ ಆಳ, ಅಂತರವನ್ನು ಅರ್ಥೈಸಿಕೊಂಡು ಓದುವುದು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಚನಗಳಲ್ಲಿ ಎಚ್ಚೆತ್ತವಾಗಿ ಸಂಸ್ಕೃತವನ್ನು ಬಳಸಿ ಬರೆದಾತ ಉರಿಲಿಂಗ ಪೆದ್ದಿ ಎಂಬುದು ಗಮನಾರ್ಹ. ಸಾಹಿತ್ಯ, ಸಮಾಜ, ರಾಜನೀತಿ, ಅರ್ಥಶಾಸ್ತ್ರ ಹೀಗೆ ಎಲ್ಲ ಕ್ಷೇತ್ರಗಳ ಅರಿವನ್ನು ಮೂಡಿಸುತ್ತದೆ ಎಂಬುದನ್ನು ತಿಳಿಸಿದರು.
ಕನ್ನಡ ಅಧ್ಯಯನ ಸಂಸ್ಥೆಯ ಬೋಧಕ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಡಾ| ಶುಲಾಬಾಯಿ ಎಚ್. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.