ಹಳಕರ್ಟಿ: ವಿಶೇಷ ರೈಲಿನಲ್ಲಿ ಬಂತು ಸಂದಲ್
Team Udayavani, Sep 24, 2018, 10:49 AM IST
ವಾಡಿ: ಹೈದ್ರಾಬಾದ್‌ನಿಂದ ವಿಶೇಷ ರೈಲಿನಲ್ಲಿ ರವಿವಾರ ಸಂಜೆ ಪಟ್ಟಣದ ರೈಲು ನಿಲ್ದಾಣಕ್ಕೆ ಆಗಮಿಸಿದ ಸಂದಲ್ ಲಕ್ಷಾಂತರ ಭಕ್ತರ ಸಂಭ್ರಮಕ್ಕೆ ಕಾರಣವಾಯಿತು. ಸಂದಲ್ ಸ್ವಾಗತಿಸುವ ಮೂಲಕ ಮುಸ್ಲಿಂರು ಹಳಕರ್ಟಿ ದರ್ಗಾ ಶರೀಫ್ ಉರೂಸ್‌ಗೆ ಅದ್ಧೂರಿ ಚಾಲನೆ ನೀಡಿದರು.
ಹಳಕರ್ಟಿಯ ಆಸ್ತಾನ್-ಇ-ಖ್ವಾದ್ರಿ ದರ್ಗಾ ಶರೀಫ್ ಉರೂಸ್‌ನಲ್ಲಿ ಪಾಲ್ಗೊಳ್ಳಲು ಹೈದ್ರಾಬಾದ್ ನಿಂದ 25 ಬೋಗಿಗಳ ವಿಶೇಷ ರೈಲಿನಲ್ಲಿ ಜನಸಾಗರವೇ ಹರಿದು ಬಂದಿತು.
ರೈಲು ಪಟ್ಟಣದ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ರೈಲಿನ ಎಂಜಿನ್‌ಗೆ ಅಳವಡಿಸಲಾಗಿದ್ದ ಇಸ್ಲಾಂ ಧರ್ಮದ ಪವಿತ್ರ ಯಾತ್ರಾ ಸ್ಥಳಗಳ ಸ್ತಬ್ದ ಚಿತ್ರಗಳು ಗಮನ ಸೆಳೆದವು. ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆಯರ ಸಂಖ್ಯೆಯೂ ಹೆಚ್ಚಿತ್ತು. ರೈಲು ನಿಲ್ದಾಣದ ನಾಲ್ಕೂ ಪ್ಲಾಟ್‌ಫಾರ್ಮ್ ಸೇರುತ್ತಿದ್ದಂತೆ ಅಂಬೇಡ್ಕರ್
ವೃತ್ತದಿಂದ ಬಸ್ ನಿಲ್ದಾಣದ ವರೆಗಿನ ರಸ್ತೆಗಳು ಜನರಿಂದ ಭರ್ತಿಯಾಗಿದ್ದವು.
ಹಳಕರ್ಟಿ ದರ್ಗಾದ ಗುರು ಅಬುತುರಾಬಶಹಾ ಖ್ವಾದ್ರಿ ಚಿಸ್ತಿ ಯಮುನಿ (ದರ್ಗಾ ಸಾಹೇಬ) ನೇತೃತ್ವದಲ್ಲಿ ಸಂದಲ್ ಸ್ವಾಗತ ಕಾರ್ಯಕ್ರಮಗಳು ನಡೆದವು. ಪಟ್ಟಣದಲ್ಲಿ ರೈಲು ನಿಲ್ದಾಣ ಆವರಣದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಖವ್ವಾಲಿ ಗಾಯನದ ಜತೆಗೆ ಧಾರ್ಮಿಕ ಪ್ರಾರ್ಥನೆಗಳು ಜರುಗಿದವು.
ಇದೇ ವೇಳೆ ವಿಶೇಷ ಸಾಮೂಹಿಕ ನಮಾಜ್ ಕೈಗೊಳ್ಳುವ ಮೂಲಕ ಸಂದಲ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಾಡಿ ರೈಲು ನಿಲ್ದಾಣದಿಂದ ಹಳಕರ್ಟಿ ದರ್ಗಾ ವರೆಗೆ 4 ಕಿ.ಮೀ. ವರೆಗೆ ಸಂದಲ್ ಮೆರವಣಿಗೆ ಸಂಭ್ರಮದಿಂದ
ನಡೆಯಿತು. ದರ್ಗಾ ಆವರಣದಲ್ಲಿ ಜಾತ್ರೆಯ ಸಡಗರ ಮನೆಮಾಡಿತ್ತು. ದರ್ಗಾ ಶರೀಫರ ಸಮಾಧಿಗಳಿಗೆ ಗುಲಾಬಿ ಹೂಗಳನ್ನು ಸಮರ್ಪಿಸುವ ಮೂಲಕ ಅನುಯಾಯಿಗಳು ಭಕ್ತಿ ಮೆರೆದರು.
ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ವಿಜಯಕುಮಾರ ಭಾವಗಿ ಸಂದಲ್ ಮೆರವಣಿಗೆಗೆ ವಿಶೇಷ ಬಂದೋಬಸ್ತ್ ಒದಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.